ರೋಬಸ್ಟಾ ಕಾಫಿ ಉತ್ಪಾದನೆ ಕುಸಿತ: ಬೆಲೆ ಏರಿಕೆ
ರೋಬಸ್ಟಾ ಕಾಫಿ ಪೂರೈಕೆ ಬಿಕ್ಕಟ್ಟು
ಜಾಗತಿಕ ಕಾಫಿ ಮಾರುಕಟ್ಟೆಯಲ್ಲಿ ರೋಬಸ್ಟಾ ದರ ಏರಿಕೆಯಾಗಿತ್ತಿವೆ. ವಿಯೆಟ್ನಾಂನಲ್ಲಿ ಮಾರಾಟ ಚಟುವಟಿಕೆಗಳು ಮಂದಗತಿಯಲ್ಲಿ ಸಾಗುತಿದೆ ಹಾಗೂ ಇಂಡೋನೇಷ್ಯಾದಲ್ಲಿ ಹವಾಮಾನ ವೈಪರೀತ್ಯ ಪ್ರಮುಖ ಕಾರಣವಾಗಿದೆ. ಇದರ ಪರಿಣಾಮವಾಗಿ Q4 2025ರ ಹೊತ್ತಿಗೆ ರೋಬಸ್ಟಾ ಕಾಫಿ ಪೂರೈಕೆ ಮತ್ತು ಬೆಲೆ ವ್ಯತ್ಯಾಸಗಳಲ್ಲಿ ಗಂಭೀರ ಪರಿಣಾಮ ಕಾಣಿಸಿಕೊಳ್ಳಬಹುದು.
ಇಂಡೋನೇಷ್ಯಾದ ಮಳೆ ಆತಂಕ
ಇಂಡೋನೇಷ್ಯಾದ ಪ್ರಮುಖ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ನಿರಂತರವಾಗಿ ಭಾರೀ ಮಳೆಯ ಪರಿಣಾಮವಾಗಿ ಕಾಫಿ ಬೆಳೆಗೆ ಹಾನಿಯಾಗುವ ಸಾಧ್ಯತೆ ಇದೆ. ಇದರಿಂದ ಮುಂದಿನ ಹಂಗಾಮಿನ ಉತ್ಪಾದನೆ ಕುಸಿಯುವ ಭೀತಿ ವ್ಯಕ್ತವಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ರೋಬಸ್ಟಾ ಒಪ್ಪಂದಗಳಿಗೆ ಹೆಚ್ಚುವರಿ ಒತ್ತಡ ತಂದಿದೆ.
ವಿಯೆಟ್ನಾಂ ಮಾರುಕಟ್ಟೆಯ ಸ್ಥಿತಿ
ವಿಶ್ವದ ಅತಿದೊಡ್ಡ ರೋಬಸ್ಟಾ ಕಾಫಿ ಉತ್ಪಾದಕ ವಿಯೆಟ್ನಾಂನಲ್ಲಿ, ಸ್ಥಳೀಯ ವ್ಯಾಪಾರಿಗಳು ಕಡಿಮೆ ಲಿಕ್ವಿಡಿಟಿ (ಹಣ ಹರಿವು) ಬಗ್ಗೆ ಚಿಂತನೆ ವ್ಯಕ್ತಪಡಿಸಿದ್ದಾರೆ. ಇದರ ಪರಿಣಾಮವಾಗಿ ಪೂರೈಕೆ ಹರಿವು ಕುಂಠಿತಗೊಂಡಿದ್ದು, ಅಂತರರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಏರಿಳಿತವನ್ನು ಮತ್ತಷ್ಟು ತೀವ್ರಗೊಳಿಸಿದೆ.
ಮುಂದಿನ ದಿಕ್ಕು
ಪ್ರಸ್ತುತ ಪರಿಸ್ಥಿತಿ ಮುಂದುವರಿದರೆ, ರೋಬಸ್ಟಾ ಕಾಫಿ ಬೆಲೆಗಳು ಏರಿಕೆಗೆ ದಾರಿ ಮಾಡಿಕೊಡಬಹುದೆಂಬ ನಿರೀಕ್ಷೆ ತಜ್ಞರಿಂದ ವ್ಯಕ್ತವಾಗಿದೆ. ಹೀಗಾಗಿ,ಜಾಗತಿಕ ಪೂರೈಕೆ ಅಡಚಣೆಯಿಂದಾಗಿ ಖರೀದಿದಾರರು ಮತ್ತು ರಫ್ತುಗಾರರು ತಮ್ಮ ತೀರ್ಮಾನಗಳನ್ನು ಪುನರ್‌ವಿಮರ್ಶೆ ಮಾಡಬೇಕಾದ ಅಗತ್ಯವಿದೆ
