Black pepperFeatured News

ಕಾಳುಮೆಣಸು ಕೊಯ್ಲು ಆರಂಭ : ಧಾರಣೆ ಏರಿಕೆ

ಕೇರಳದಲ್ಲಿ ಜನವರಿ ಅಂತ್ಯದ ವೇಳೆ ಕೋವಿಡ್‌ ನಿರ್ಬಂಧ ಬಿಗಿಗೊಳಿಸಿದಾಗ ಕುಸಿದಿದ್ದ ಕಾಳು ಮೆಣಸು ಧಾರಣೆ ಇದೀಗ ಕೋವಿಡ್‌ ನಿರ್ಬಂಧಗಳು ಸಡಿಲಗೊಳ್ಳುತ್ತಿದ್ದಂತೆಯೇ ನಿಧಾನವಾಗಿ ಏರುಗತಿಯಲ್ಲಿದ್ದು, ಇಂದು ಅನ್‌ ಗಾರ್ಬಲ್ಡ್‌ ಕೆಜಿಗೆ 509 ರೂ. ಹಾಗೂ ಗಾರ್ಬಲ್ಡ್‌ ಕಾಳು ಮೆಣಸು 529 ರೂ.ಗೆ ಜಿಗಿದಿದೆ.

ಪ್ರಸ್ತುತ ಕಾಳುಮೆಣಸು ಕೊಯ್ಲಿನ ಸಮಯವಾಗಿದ್ದು, ಬೆಳೆಗಾರರು ಮತ್ತಷ್ಟು ಬೆಲೆ ಏರಿಕೆಯ ನಿರೀಕ್ಷೆಯಲ್ಲಿ ಇದ್ದಾರೆ. 2021ರ ನವೆಂಬರ್‌ ಅಂತ್ಯದ ವೇಳೆ 540 ರೂ.ಗೆ ಏರಿದ್ದ ಕಾಳು ಮೆಣಸು ಧಾರಣೆ 2022 ಜನವರಿ ಅಂತ್ಯದ ವೇಳೆ 470ಕ್ಕೆ ಕುಸಿದಿತ್ತು.

Also read  Arabica coffee touched a three-month low

ಹವಾಮಾನ ವೈಪರೀತ್ಯ, ರೋಗ ಬಾಧೆಯಿಂದ ಉತ್ಪಾದನೆ ಕುಸಿತ, ಚಳಿಗಾಲದ ಹಿನ್ನೆಲೆಯಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ಹೆಚ್ಚಿದ ಬೇಡಿಕೆ, ಮಸಾಲೆ ಕಂಪನಿಗಳು ಹೆಚ್ಚಿನ ಪ್ರಮಾಣದಲ್ಲಿ ಕಾಳು ಮೆಣಸು ಸಂಗ್ರಹಿಸುವ ಸಮಯ ಇದಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.