Black pepperFeatured News

ಕಾಳುಮೆಣಸಿನಲ್ಲಿ ಬೆಳವಣಿಗೆ ಕುಂಠಿತವಾಗುವ ರೋಗ

ಈ ರೋಗವು ವೈರಸ್‌ನಿಂದ ಉಂಟಾಗುತ್ತದೆ. ಇದು ಕೇರಳದ ಕಲ್ಲಿಕೋಟೆ, ಕಣ್ಣಾನೂರು, ಕಾಸರಗ್ಳೋಡು, ವೈನಾಡ್‌ ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಹಾಗೂ ಕರ್ನಾಟಕದ ಕೊಡಗು, ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಣಿಸಿಕೊಳ್ಳುತ್ತದೆ.

ಕರಿಮೆಣಸು ಬಳ್ಳಿಯ ಗಿಣ್ಣುವಿನ ನಡುವಿನ ಅಂತರವು ಬಳ್ಳಿಯಿಂದ ಬಳ್ಳಿಗೆ ವಿವಿಧ ಪ್ರಮಾಣದಲ್ಲಿ ಗಿಡ್ಡವಾಗಿರುವುದು ಕಂಡುಬರುತ್ತದೆ. ಎಲೆಗಳು ಕಿರಿದಾಗಿ, ಸಣ್ಣದಾಗಿ, ವಿಕಾರವಾಗಿ, ಸುಕ್ಕುಗೊಂಡು ಮತ್ತು ತಿರುಚಿಕೊಂಡಂತೆ ಕಂಡುಬರುತ್ತವೆ. ಹರಿದ್ವಿಹೀನತೆಗೊಂಡು ಚುಕ್ಕೆಗಳು ಮತ್ತು ಗೆರೆಗಳು ಸಹ ಎಲೆಗಳ ಮೇಲೆ ಅಗ್ಗಾಗೆ ಕಂಡು ಬರುತ್ತದೆ. ಬಾಧೆಗೊಳಗಾದ ಬಳ್ಳಿಯ ಇಳುವರಿಯು ನಿಧಾನವಾಗಿ ಕಡಿಮೆಯಾಗುತ್ತದೆ. ಎರಡು ವೈರಸ್‌ಗಳಾದ ಕುಕುಂಬರ್‌ ಮೊಜೈಕ್‌ ವೈರಸ್‌ ಮತ್ತು ಬಾಡ್‌ನಾ ವೈರಸ್‌ ಈ ರೋಗಕ್ಕೆ ಕಾರಣವಾಗಿದೆ. ಈ ವೈರಸ್‌ ಸೋಂಕು ತಗುಲಿದ ಗಿಡ ನೆಡುವುದರಿಂದ ಹರಡುತ್ತದೆ. ಎಪಿಡ್‌ ಮತ್ತು ಬಿಳಿ ತಿಗಣೆಗಳು
ಇದರ ರೋಗವಾಹಕಗಳಾಗಿದೆ.

Also read  Black pepper prices steady in Kochi

ಈ ರೋಗದ ನಿರ್ವಹಣೆಗಾಗಿ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

* ರೋಗರಹಿತ ಗಿಡಗಳಿಂದ ಸಸಿ ಮಾಡುವುದು.

* ಗಿಡಗಳನ್ನು ನಿಯಮಿತವಾಗಿ ಗಮನಿಸಬೇಕು. ರೋಗಬಂದಿರುವ ಗಿಡಗಳನ್ನು ಕಿತ್ತು ಸುಡುವುದು ಅಥವಾ ಮಣ್ಣಿನಲ್ಲಿ ಆಳವಾಗಿ ಹೂಳಬೇಕು.

* ಎಫಿಡ್‌ ಮತ್ತು ಬಿಳಿತಿಗಣೆಗಳು ತೋಟದಲ್ಲಿ ಕಂಡರೆ ಶೇ. 0.05 ರ ಡೈಮಿಥೋಯೇಟ್‌ ಸಿಂಪಡಣೆ ಮಾಡುವುದು.

Also read  Black Pepper prices reduces due to imports