ಕಾಫಿ ಬೋರ್ಡಿನ ಅಧ್ಯಕ್ಷನಾದ ಬೆಳೆಗಾರ
ಅಧಿಕಾರಿಗಳ ಸುಪರ್ದಿಯಲ್ಲಿದ್ದ ಕಾಫಿ ಬೋರ್ಡಿಗೆ ಸುಮಾರು 70 ವರ್ಷಗಳ ನಂತರ ಬೆಳೆಗಾರರ ಪ್ರತಿನಿಧಿಯೊಬ್ಬರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿರುವುದನ್ನು ಸಂಸದೆ ಶೋಭಾ ಕರಂದ್ಲಾಜೆ ಸ್ವಾಗತಿಸಿದ್ದಾರೆ. ಚಿಕ್ಕಮಗಳೂರಿನ ಪ್ಲಾಂಟರ್ ಎಂಎಸ್ ಬೋಜೇಗೌಡ ಅವರು ಕಾಫಿ ಬೋರ್ಡಿಗೆ ಅಧ್ಯಕ್ಷರಾಗಿ ಬುಧವಾರ ಅಧಿಕಾರ ಸ್ವೀಕರಿಸಿದರು. ಬೋಜೇಗೌಡ ಅವರ ಅಧಿಕಾರ ಅವಧಿ ಡಿಸೆಂಬರ್ 14, 2018ರ ತನಕ ಇದೆ.
ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ -ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಅಧಿಕಾರೇತರು ಮತ್ತು ಕಾಫಿ ಬೆಳೆಗಾರರೊಬ್ಬರು ಕಾಫಿ ಮಂಡಳಿಗೆ ಅಧ್ಯಕ್ಷರಾಗಿರುವುದು ಸೂಕ್ತವಾಗಿದೆ. ಇವರಿಗೆ ಕಾಫಿ ಬೆಳೆಗಾರರ ಸಮಸ್ಯೆಗಳ ಅರಿವಿರುತ್ತದೆ ಎಂದು ಹೇಳಿದರು.
ಬೋಜೇಗೌಡ ಮಾತನಾಡಿ, ಜಮ್ಮು-ಕಾಶ್ಮೀರದ ಸೈನಿಕರು ಕೂಡ ಕಾಫಿ ಕುಡಿಯುವಂತಾಗ ಬೇಕು. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಾಫಿ ತಲುಪಬೇಕು. ಮೋದಿ ಅವರ ಆಶಯದಂತೆ ಕಾಫಿ ರಫ್ತು ದ್ವಿಗುಣಗೊಳಿಸಲು ಶ್ರಮಿಸಲಾಗುವುದು.
ಸದ್ಯ 3 ಲಕ್ಷ ಟನ್ ಇರುವ ಉತ್ಪಾದನೆಯನ್ನು 6 ಲಕ್ಷ ಟನ್ ಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾಫಿ ಸೇವನೆ ಹೆಚ್ಚಳ ಮಾಡುವುದು, ಕಾಫಿ ಪುಡಿ -ಚಕೋರಿ ಬಗ್ಗೆ ಇರುವ ಗೊಂದಲ ಪರಿಹರಿಸುವುದು, ಬರದ ಪರಿಸ್ಥಿತಿಯಲ್ಲಿ ಕಾಫಿ ಬೆಳೆಗಾರರ ಪರಿಸ್ಥಿತಿ ಅವಲೋಕನ ಸೇರಿದಂತೆ ಬೆಳೆಗಾರರ ಅನೇಕ ಸಮಸ್ಯೆಗಳನ್ನು ಬಗೆ ಹರಿಸಲು ವಾಣಿಜ್ಯ ಸಚಿವಾಲಯದ ಅಡಿಯಲ್ಲಿ ಬರುವ ಕಾಫಿ ಬೋರ್ಡ್ ಇನ್ಮುಂದೆ ಶ್ರಮಿಸಲಿದೆ.
Read more at: