ಕಾಫಿ ಬೆಳೆಗಾರರು ಒಗ್ಗೂಡಿ ಹೋರಾಟ ನಡೆಸುವ ಅಗತ್ಯ ಇದೆ:ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ

ಕಾಫಿ ಉದ್ಯಮ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರ ನಿಟ್ಟಿನಲ್ಲಿ ಕಾಫಿ ಬೆಳೆಗಾರರು ಒಗ್ಗೂಡಿ ಹೋರಾಟ ನಡೆಸುವ ಅಗತ್ಯ ಇದೆ ಎಂದು ಕಾಫಿ ಮಂಡಳಿ ಅಧ್ಯಕ್ಷ ಎಂ.ಎಸ್.ಭೋಜೇಗೌಡ ಹೇಳಿದರು.

ಬರಗಾಲ, ಉತ್ಪಾದನೆ ಕುಂಠಿತ, ಬೆಲೆ ಕುಸಿತ, ಕಾಫಿ ಗಿಡಗಳಿಗೆ ರೋಗ ಬಾಧೆ, ಕಾರ್ಮಿಕರ ಕೊರತೆಯಂಥ ಸಮಸ್ಯೆಗಳನ್ನು ಕಾಫಿ ಉದ್ಯಮ ಎದುರಿಸುತ್ತಿದೆ. ಈ ವರ್ಷವಂತೂ ಫಸಲು ತೀವ್ರ ಕಡಿಮೆಯಾಯಾಗಿದೆ. ಕಾಫಿ ಮತ್ತು ಕಾಳುಮೆಣಸಿನ ಬೆಲೆಯೂ ಕುಸಿದಿದೆ. ಹೀಗಾಗಿ ಬೆಳೆಗಾರರು ಸಾಲ ತೀರಿಸಲಾಗದೆ ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.

ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳೊಂದಿಗೆ ದೆಹಲಿಗೆ ತೆರಳಿ ಕೇಂದ್ರ ವಾಣಿಜ್ಯ ಸಚಿವರೊಂದಿಗೆ ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಲಾಗಿದೆ. ಸಮಸ್ಯೆ ಪರಿಹಾರವಾಗಿಲ್ಲ. ಕಾಫಿ ಉದ್ಯಮ ಬಹಳಷ್ಟು ಜನರಿಗೆ ಉದ್ಯೋಗ ನೀಡಿದೆ. ಉದ್ಯಮ ಸಂಕಷ್ಟದಲ್ಲಿದ್ದು, ಬೆಳೆಗಾರರು ಸಂಘಟಿತರಾಗಿ ಹೋರಾಟ ಮಾಡಿದರೆ ಉದ್ಯಮ ಉಳಿಸಿಕೊಳ್ಳಬಹುದು. ಸಂಘಟಿತರಾಗಿ ಬೆಳೆಗಾರರ ಕೂಗು ರಾಜ್ಯ ಮತ್ತು ಕೇಂದ್ರ ಸರ್ಕಾರ ಮುಟ್ಟಬೇಕು ಎಂದು ಹೇಳಿದರು.

ಸದ್ಯದಲ್ಲೇ ಬೆಂಗಳೂರಿನಲ್ಲಿ ಕಾಫಿ ತರಬೇತಿ ಕೇಂದ್ರ ಸ್ಥಾಪಿಸಲಾಗುವುದು. ಆ ಕೇಂದ್ರದಲ್ಲಿ ಕಾಫಿ ಬೆಳೆಗಾರರ ಮಕ್ಕಳಿಗೆ ಉದ್ಯಮಕ್ಕೆ ಅನುಕೂಲವಾಗುವ ವಿವಿಧ ತರಬೇತಿ ನೀಡಲಾಗು ವುದು ಎಂದು ಸಭೆಯಲ್ಲಿ ತಿಳಿಸಿದರು.Also read  Black pepper slip continues