ಕಾಫಿನಾಡಲ್ಲಿ ವರ್ಷದ ಮೊದಲ ಮಳೆ:ಬೆಳೆಗಾರರಲ್ಲಿ ಸಂತಸ

ಕಾಫಿನಾಡದ ಚಿಕ್ಕಮಗಳೂರು,ಕೊಡಗು,ಸಕಲೇಶಪುರದಲ್ಲಿ ವರ್ಷದ ಮೊದಲ ಮಳೆಯಾಗಿದ್ದು,ಬಿಸಿಲಿನಿಂದ ತತ್ತರಿಸಿದ್ದ ಮಲೆನಾಡಿಗೆ ವರುಣದೇವ ತಂಪೆರೆದಿದ್ದಾನೆ. ಕಾಫಿ ಬೆಳೆಗಾರರಲ್ಲಿ ಸಂತಸ ಮೂಡಿಸಿದೆ.
ಕಳಸ ತಾಲೂಕಿನ ಹೊರನಾಡು ಸುತ್ತಮುತ್ತ ಮಧ್ಯಾಹ್ನದ ನಂತರ ಉತ್ತಮ ಮಳೆಯಾಗಿದೆ. ಬಲಿಗೆ, ಹೊರನಾಡು, ಕಳಸ, ಹೊನ್ನೆ ಕಾಡು ಮುನ್ನುರ್ ಪಾಲ್, ಹಳುವಳ್ಳಿಯಲ್ಲಿ ಮಳೆಯಿಂದ ಮಲೆನಾಡಿಗರಲ್ಲಿ ಸಂತಸ ತಂದಿದೆ.
ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ, ಕುಂದೂರು ಭಾಗದಲ್ಲಿ ಮಳೆತಯಾಗಿದೆ. ಹೊರನಾಡು, ಬೆಟ್ಟಗೆರೆ ಪ್ರದೇಶದಲ್ಲಿ ಆಲಿಕಲ್ಲುಗಳು ಉದುರಿವೆ. ಕೊಪ್ಪ ತಾಲ್ಲೂಕಿನ ಜಯಪುರದಲ್ಲಿ ಬಿರುಸಾಗಿ ಮಳೆ ಸುರಿದಿದೆ. ಗುಡುಗು, ಮಿಂಚಿನ ಆರ್ಭಟ ಜೋರಾಗಿತ್ತು.
ನಾಪೋಕ್ಲು ಹೋಬಳಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಡಿಕೇರಿ ಸೇರಿದಂತೆ ಹಲವೆಡೆ ದಟ್ಟ ಮೋಡಕವಿದ ವಾತಾವರಣವಿದೆ.
ಸಕಲೇಶಪುರ ತಾಲೂಕಿನಲ್ಲೂ ಕೂಡ ಇಂದು ಮಧ್ಯಾಹ್ನದ ನಂತರ ಉತ್ತಮ ಮಳೆಯಾಗಿದೆ.
ಮುಂದಿನ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯ ಕೆಲವೆಡೆ ಮಳೆಯಾಗಲಿದೆ ಎಂದು ಗೋಣಿಕೊಪ್ಪಲುವಿನ ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.

Also read  ಮೊದಲ ಮಳೆ ಇಳೆಗೆ ತಂದ ಸಂಭ್ರಮ!