Coffee

ಕೊಳೆರೋಗದಿಂದ ಕಾಫಿ ಉದುರಲು ಕಾರಣಗಳು ಮತ್ತು ಪರಿಹಾರ

ಮಳೆ ಆರ್ಭಟಕ್ಕೆ ನೆಲ ಕಚ್ಚಿ ಅಳಿದುಳಿದ ಕಾಫಿ ಬೆಳೆ ರಕ್ಷಿಸಿಕೊಳ್ಳಲು ತಕ್ಷಣ 2 ರೀತಿಯ ಪರಿಹಾರ ಮಾರ್ಗಕ್ಕೆ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸಲಹೆ, ಮಾರ್ಗದರ್ಶನ ನೀಡಿದ್ದ,ಪ್ರತಿ ಎಕರೆಗೆ 1790 ರೂ. ವೆಚ್ಚ ಮಾಡಬೇಕಾದ ಅನಿವಾರ್ಯತೆ ಕಾಫಿ ಬೆಳೆಗಾರರಿಗೆ ಎದುರಾಗಿದೆ.ಕ್ರಮ ಪಾಲಿಸದಿದ್ದರೆ ಉಳಿದಿರುವ ಬೆಳೆ ಕೂಡ ನೆಲಕಚ್ಚುವ ಅತಂಕವಿದೆ.

ಕಡಿಮೆ ಅಂತರದಲ್ಲಿ ಬಿದ್ದ ಮಳೆ,ಕಾಫಿ ಬೆಳೆ ಸಂಪೂರ್ಣವಾಗಿ ನಾಶವಾಗುವ ಹಂತಕ್ಕೆ ತಲುಪಿಸಿದೆ. ಇದರಿಂದಾಗಿ ಪರಿಹಾರ ಮಾರ್ಗೋಪಾಯಕ್ಕೆ ಮುಂದಾಗಬೇಕಿದೆ. ಎನ್ನುತ್ತಾರೆ. ವಿಜ್ಞಾನಿಗಳು. ಬೇರಿಗೆ ಯೂರಿಯಾ ಗೊಬ್ಬರ ಬಳಕೆ, ಕೊಳೆ ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಣೆ ಮಾಡಬೇಕಿದೆ. ಈ ಎರಡು ಪರಿಹಾರ ಕ್ರಮಕ್ಕೆ. ಎಕರೆಗೆ ಯೂರಿಯಾ ಪ್ರತಿ ಚೀಲಕ್ಕೆ 290, ಅರ್ಧ ಲೀಟರ್‌ ಔಷಧಕ್ಕೆ 900 ರೂ, ಕೂಲಿ ಸೇರಿ ಸುಮಾರು 17790 ರೂ. ವೆಚ್ಚ ಮಾಡಬೇಕಿದೆ.ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದದ ವಿಜ್ಞಾನಿಗಳು ಗಾಮ ಮಟ್ಟಕ್ಕೆ ತೆರಳಿ ಪರಿಶೀಲನೆ ನಡೆಸಿ ನೈಜತೆ ಅರಿತುಕೊಂಡಿದ್ದಾರೆ.

ಯೂರಿಯಾ ಗೊಬ್ಬರ ಅಗತ್ಯ.

ಕಾಫಿ ಗಿಡದ ಬೇರಿನ ಭಾಗದಲ್ಲಿ (ವೆಟ್‌ಫೀಟ್‌) ನೀರಿನ ಅಂಶ ವಿಪರೀತವಾಗಿರುವುದರಿಂದ ಕ್ರಿಯಾಶೀಲವಾಗಲು ತಕ್ಷಣ ಯೂರಿಯಾ ಗೊಬ್ಬರ ನೀಡಲು ಮುಂದಾಗಬೇಕಿದೆ. ಪ್ರತಿ ಎಕರೆಗೆ ಒಂದು. ಚೀಲ. (50. ಕೆ.ಜಿ.) ಯೂರಿಯಾ ಗೊಬ್ಬರವನ್ನು ಬುಡಕ್ಕೆ ಹಾಕ ಬೇಕಿದೆ. ಇದು ಬೇರಿನಲ್ಲಿ ಚೈತನ್ಯ ತುಂಬಿ. ಉಸಿರಾಟ ಕ್ರಿಯೆಗೆ ಸಹಕರಿಸುವುದರಿಂದ ಪೋಷಕಾಂಶ ಗಿಡಕ್ಕೆ ದೊರೆಯುವಂತಾಗಲಿದೆ.

ಕೊಳೆರೋಗಕ್ಕೆ ಸಿಂಪಡಣೆ

ಪ್ರೊಪಿಕೋನಝೋಲ್ (propiconazole) or ಟಬುಕ್ರೋನೋಝೋಲ್ (tebuconazole) ಔಷಧವನ್ನು ಸಿಂಪಡಣೆಮಾಡಬೇಕಿದೆ. ಈ ಎರಡೂ ಔಷಧಗಳಲ್ಲಿ ಯಾವುದಾದರೂ ಒಂದು ಔಷಧವನ್ನು1 ಎಂಎಲ್‌ ಪ್ರಮಾಣಕ್ಕೆ 1 ಲೀಟರ್‌ ನೀರು, ಅ೦ಟು ಅಂಶ ವಿರುವ ದ್ರಾವಣವನ್ನು ಸೇರಿಸಿಕೊಂಡು ಸಿಂಪಡಣೆ ಮಾಡಬೇಕಿದೆ. ಒಂದು ಎಕರೆಗೆ 400 ಎಂಎಲ್‌ ಔಷಧ ಸಿಂಪಡಣೆ ಮಾಡಬೇಕಿದೆ. ಔಷಧದ ಪ್ರಮಾಣ ಹೆಚ್ಚಾದರೆ ಮತ್ತಷ್ಟು ಬೆಳೆ ಉದುರುವ ಸಾಧ್ಯತೆ ಹೆಚ್ಚಿರುತ್ತದೆ. ನಿಗದಿತ ಪ್ರಮಾಣದಲ್ಲಿ ನೀರಿನೊಂದಿಗೆ ಬೆರೆಸಿ ಎಲೆ,ಕಾಯಿ, ಗೊ೦ಚಲ ಭಾಗದ ಮೇಲೆ, ಕೆಳಗೆ ಹರಡುವಂತೆ ಸಿ೦ಪಡಿಸಬೇಕಿದೆ. ಇದರಿ೦ದ ಶೀಘ್ರವಾಗಿ ಫಲಿತಾಂಶಕ೦ಡುಕೊಳ್ಳಬಹುದಾಗಿದೆ.

ಕಾಫಿ ಉದುರಲು ಪ್ರಮುಖ ನಾಲ್ಕು ಕಾರಣಗಳು

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಭಾಗದ ತ “ನೀಡಿದ ಸಲಹೆಯಂತೆ ಕಾಫಿ ಉದುರಲು ಪ್ರಮುಖ 4 ಕಾರಣಗಳನ್ನು ಸೂಚಿಸಿದ್ದಾರೆ.
ಕಡಿಮೆ ಅಂತರದಲ್ಲಿ ಹೆಚ್ಚಾಗಿ ಮಳೆ ಬಿದ್ದಿರುವುದರಿಂದ (25- -30 ಇಂಚು) ಕಾಫಿ ಬೆಳೆಯ ಎಲೆ, ಕಾಫಿ ಗೊಂಚಲು ಕೊಳೆರೋಗಕ್ಕೆ ಡು ಪ್ರಮುಖ ಕಾರಣವಾಗಿದೆ.
=> ಮಳೆ ಹೆಚ್ಚಾದ ಕಾರಣ ಕಾಫಿ ಗಿಡದ ಬೇರಿನ ಭಾಗದಲ್ಲಿ (ವೆಟ್‌ ಫೀಟ್‌) ನೀರಿನ ಅಂಶ ವಿಪರೀತವಾಗಿರುವುದರಿ೦ದ ಬೇರು ಉಸಿರಾಟಕ್ಕೆ ಧಕ್ಕೆಯಾಗಿದೆ. ಪರಿಣಾಮ, ಮಣ್ಣಿನಿ೦ದ ಯಾವುದೇ ಪೋಷಕಾಂಶ ತೆಗೆದುಕೊಳ್ಳಲು ಆಗುತ್ತಿಲ್ಲ. ಇದು ಗಿಡದ ಶಕ್ತಿಯನ್ನು ಕುಗ್ಗಿಸುತ್ತಿದೆ.
ಹೂ ಬಿಡುವ ಸಮಯದಲ್ಲಿ ಅಡ್ಡ ಮಳೆ ಕಾಣಿಸಿಕೊಂಡ ನಂತರದ ಬೆಳವಣಿಗೆಯಲ್ಲಿ ಬೇರೆ ಬೇರೆ ಸಮಯದಲ್ಲಿ ಕಾಣಿಸಿಕೊಂಡ ಹೂ(ಮಲ್ಚಿಪಲ್‌ ಬ್ಲಾಸಂ) ಈಗ ಸಮಸ್ಯೆಯಾಗಿ ಕಾಡುತ್ತಿದೆ. ಮೊದಲು ಕಾಣಿಸಿಕೊಂಡ ಹೂವಿನ ಕಾಯಿಗೆ ಸರಿಯಾದ ಪೋಷಕಾಂಶ ದೊರೆತಿದ್ದು, ಬಲಗೊಂಡಿದೆ. ನಂತರದ ಕಾಯಿ ಪೋಷಕಾಂಶ ಕೊರತೆ. ಮತ್ತು ಒ೦ದೇ ಗೊ೦ಚಳಿನಲ್ಲಿ 3-4 ಬಗೆಯ ಕಾಯಿಗಳ ನಡುವೆ ಬೆಳವಣಿಗೆ ಕು೦ಠಿತಗೊಳ್ಳುವಂತಾಗಿದೆ.
=> ಒಂದೇ ಗೊ೦ಚಳಿನಲ್ಲಿ (ಓವರ್‌ ಬಾರಿಂಗ್‌) ಸಾಮಾನ್ಯ ಇಳುವರಿಗಿಂತ ಹೆಚ್ಚು ಕಾಯಿ ಬಿಟ್ಟಿರುವುದು ಪೋಷಕಾಂಶ ಕೊರತೆಗೆ ಕಾರಣವಾಗುತ್ತಿದೆ. ಇದಕ್ಕೆ ಸಮರ್ಪಕವಾಗಿ ಪೋಷಕಾಂಶ ಲಭ್ಯತೆ ಇರುವುದಿಲ್ಲ. ಅಂಥ ಕಾಯಿಗಳೂ ನೆಲಕಚ್ಚುತ್ತಿವೆ.

Also read  ಬ್ರೆಜಿಲ್ ನಲ್ಲಿ ಮಳೆ :ಕುಸಿದ ಅರೇಬಿಕಾ ಕಾಫಿ ಬೆಲೆ