ಸುಂಟಿಕೊಪ್ಪ:ನಿರಂತರ ಕಾಡಾನೆಗಳ ಹಾವಳಿ ಅರಣ್ಯ ಇಲಾಖೆ ಗಮನ ಹರಿಸಲು ಮನವಿ
ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ಶಾಂತ ಗೇರಿ, ಎಮ್ಮೆಗುಂಡಿ, ಮಂಜಿಕರೆ, ನೆಟ್ಲಿ ಬಿ, ಕಾನ್‌ಬೈಲ್, ಕೊಡಗರ ಹಳ್ಳಿ, ಬೈಚನ ಹಳ್ಳಿ, ಕೆದಕಲ್, ಹೊರೂರು ಇತ್ತೀಚಿನ ಕೆಲ ದಿನಗಳಿಂದ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಗ್ರಾಮಸ್ಥರು ಆತಂಕದಿಂದ ಜೀವನ ನಡೆಸುವಂತಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ .ಈ ಕೂಡಲೇ ಅರಣ್ಯ ಇಲಾಖೆ ಎಚ್ಚೆತ್ತುಕೊಳ್ಳಲಿ. ಲಿಖಿತ ಮನವಿಗೆ ಮಾತ್ರ ಸ್ಪಂದಿಸದೇ ದೂರವಾಣಿ ಕರೆಗೂ ಸ್ಪಂದನೆ ನೀಡಲಿ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.