Featured News

ಎರೆಗೊಬ್ಬರ ತಯಾರಿಕೆ ಹಾಗೂ ಅದರ ಮಹತ್ವ

By Kirehalli

December 21, 2020

ಬೆಳೆಯುತ್ತಿರುವ ಜನ ಸಂಖ್ಯೆಯ ಆಹಾರ ಪೂರೈಕೆಗಾಗಿ ಹಸಿರು ಕ್ರಾಂತಿ ಎ೦ಬ ಸoಚಲನದಿಂದ ಅಧಿಕ ಇಳುವರಿ ಪಡೆದು ಆಹಾರೋತ್ಪನ್ನ ಹೆಚ್ಚಳವಾಯಿತು. ಇನ್ನೊಂದೆಡೆ ರಸಗೊಬ್ಬರಗಳ ಅಸಮರ್ಪಕ ಬಳಕೆಯಿಂದ ಭೂಮಿಯ ಮೇಲೆ ಒತ್ತಡ ಹೆಚ್ಚಾಗಿ ಮಣ್ಣಿನ ಭೌತಿಕ ,ರಾಸಾಯನಿಕ ಮತ್ತು ಜೈವಿಕ ಗುಣಗಳಿಗೆ ಹಾನಿಯಂಟಾಗಿ ಮಣ್ಣಿನ ಫಲವತ್ತತೆ ಕ್ಷೀಣಿಸಿದೆ. ಸಂಪನ್ಮೂಲ ಕೊರತೆ, ಸುರಕ್ಷಿತ ಆಹಾರ ಪೂರೈಕೆ ಮತ್ತು ಪರಿಸರ ಸ೦ರಕ್ಷಣೆ ಎಂಬ ಎಚ್ಚರಿಕೆಯ ಕರೆಗಂಟೆಗಳು ಮಾನವನನ್ನು ಸುಸ್ಥಿರ ಕೃಷಿಯತ್ತ ಓಲೈಸಿವೆ. ಈ ನಿಟ್ಟಿನಲ್ಲಿ ಪುನರ್ಬಳಸಲ್ಪಡುವ ಸಂಪನ್ಮೂಲಗಳ ಸದ್ಭಳಕೆಯು ಸುಸ್ಥಿರ ಕೃಷಿಯ ಒಂದು ಅವಿಭಾಜ್ಯ ಅಂಗ. ಇದು ಸುಸ್ಥಿರ ಕೃಷಿಯ ಬೆಳವಣಿಗೆಗೆ ಪೂರಕವಾಗಿದೆ. ಎರೆಹುಳು ಸಾಕಾಣಿಕೆ/ಗೊಬ್ಬರ ತಯಾರಿಕೆ ಸುಸ್ಥಿರ ಕೃಷಿ ಪದ್ಧತಿಯಲ್ಲಿ ಒಂದು ಪ್ರಮುಖವಾದ ಅಂಶ.

ನಮ್ಮ ಕೃಷಿ ಪರಿಸರದಲ್ಲಿ ಲಭ್ಯವಾಗುವ ತ್ಯಾಜ್ಯ ವಸ್ತುಗಳು ಈ ಎರೆಹುಳುಗಳಿಗೆ ಒಂದು ಉತ್ತಮ ಆಹಾರ. ಈ ತ್ಯಾಜ್ಯ ವಸ್ತುಗಳು ಎರೆಹುಳುವಿನ ಜಠರದಲ್ಲಿ ವಿಭಜನೆಗೊಂಡು ಹಿಕ್ಕೆಯಾಗಿ ಮಾರ್ಪಾಡಾಗುತ್ತವೆ. ಈ ಗೊಬ್ಬರವನ್ನು ಸಸ್ಯ ಪೋಷಕಾಂಶಗಳನ್ನು ಪೂರೈಸಲು ಬಳಸಬಹುದು. ಎರೆಹುಳು ಗೊಬ್ಬರದಲ್ಲಿ ಸಸ್ಯಾವಶ್ಯಕ ಪೋಷಕಾಂಶಗಳಾದ ಸಾರಜನಕ (1.0 ರಿಂದ 2 5%), ರಂಜಕ (0.1 ರಿ೦ದ 0.3%), ಪೊಟ್ಯಾಷ್‌ (0.15 ರಿಂದ 0.56%),ಕಬ್ಬಿಣ (2.0 ರಿಂದ 9.5ಪಿಪಿ.ಎ೦), ಸತು (5.7 ರಿಂದ 1.4 ಪಿಪಿಎ೦) ಹಾಗೂ ತಾಮ್ರ (2.0 ರಿಂದ 9.5 ಪಿಪಿಎಂ) ದೊರಕುತ್ತದೆ. ಗೊಬ್ಬರ ತಯಾರಿಸಲು ಬಳಸುವ ತ್ಯಾಜ ವಸ್ತುಗಳ ಮೇಲೆ ‘ಗೊಬ್ಬರದ ಉತ್ಕ್ರುಷ್ಟತೆ ಅವಲಂಬಿತವಾಗಿರುತ್ತದೆ. ಎರೆಹುಳುಗೊಬ್ಬರ ಸಸ್ಯ ಪೋಷಕಾಂಶಗಳನ್ನು ಪೂರೈಸುವುದರ ಜೊತೆಗೆ ಸಸ್ಯ ವರ್ಧಕಗಳನ್ನು ಒದಗಿಸುತ್ತದೆ. ಇದಲ್ಲದೆ ಮಣ್ಣಿನ ಭೌತಿಕ ಗುಣಗಳಾದ ನೀರು ಹಡಿದಿಟ್ಟುಕೊಳ್ಳುವಿಕೆ,ಗಾಳಿಯಾಡುವಿಕೆ, ಕಣರಚನೆ ಮತ್ತು ಕಣ ಜೋಡಣೆಯನ್ನು ಉತ್ತಮಗೊಳಿಸುತ್ತದೆ. ಇದರ ಪರಿಣಾಮ ಮಣ್ಣಿನಲ್ಲಿ ಉಪಯುಕ್ತ ಜೀವಾಣುಗಳ ಸಂಖ್ಯೆ ವೃದ್ಧಿಯಾಗಿ,ಜೀವ ರಾಸಾಯನಿಕ ಕ್ರಿಯೆಗಳ ಸಮತೋಲನ ಉಂಟಾಗಿ ಸಸ್ಯ ಬೆಳವಣಿಗೆಗೆ ಒಂದು ಉತ್ತಮ ವಾತಾವರಣ ದೊರಕುತ್ತದೆ.ಒಟ್ಟಾರೆ ಮಣ್ಣಿನ ಫಲವತ್ತತೆ ಹೆಚ್ಚಾಗಿ ಬೆಳೆ ಉತ್ಪಾದಕತೆ ಅಭಿವೃದ್ಧಿ ಹೊಂದುತ್ತದೆ.

ಎರೆಹುಳುವಿನ ವಿಧಗಳು :

ವಿಶ್ವದಾದ್ಯಂತ 3-4 ಜಾತಿಯ ಎರೆಹುಳುಗಳನ್ನು ಗೊಬ್ಬರದ ಉತ್ಪಾದಣೆಗೆ ಬಳಸಲಾಗುತ್ತಿದೆ. ನಮ್ಮ ದೇಶದಲ್ಲಿ ಐಸೀನಿಯ ಫೀಟಿಡಾ ಮತ್ತು ಯೂಡ್ರಿಲಸ್ ಯುಜಿನಿಯಾ ಜಾತಿಯ ಹುಳುಗಳು ಬಳಕೆಯಲ್ಲಿವೆ. ನಮ್ಮ ವಾತಾವರಣಕ್ಕೆ ಈ ಜಾತಿಯ ಹುಳುಗಳು ಸೂಕ್ತವಾಗಿ, ಮಣ್ಣಿನಲ್ಲಿ. ಕ್ರಿಯಾಶೀಲಕವಾಗಿ ಫಲವತ್ತತೆ ಹೆಚ್ಚಿಸುತ್ತವೆ. ಈ ಹುಳುಗಳು ವರ್ಷ ಪೂರ್ತಿ ಕಾರ್ಯೋನ್ಮುಖವಾಗಿ ಗೊಬ್ಬರ ಉತ್ಪಾದಿಸುತ್ತದೆ.

ಗೊಬ್ಬರ ತಯಾರಿಸುವ ವಿಧಾನಗಳು :

ಎರೆಹುಳುಗಳನ್ನು ಕೃಷಿ ಭೂಮಿಗೆ ಸೇರಿಸಿದರೆ, ಭೂಮಿಯಲ್ಲೆ ಎರೆಗೊಬ್ಬರ ಉತ್ಪತ್ತಿಯಾಗುವುದು. ಇದಕ್ಕೆ ಸ್ಥಳದಲ್ಲೇ (ಇನ್‌ಸಿಟು) ಎರೆಗೊಬ್ಬರ ಉತ್ಪಾದನೆ ಎನ್ನುವರು.ಮತ್ತೊಂದು ಪದ್ಧತಿಯಲ್ಲಿ ಎರೆಹುಳುಗಳನ್ನು ಗುಂಡಿ ಅಥವಾ ತೊಟ್ಟೆಗಳಲ್ಲಿ ರಾಶಿ ಮಾಡಿದ ತ್ಯಾಜ್ಯಕ್ಕೆ ಬಿಟ್ಟು ಗೊಬ್ಬರ ಉತ್ಪಾದಿಸುವುದಾಗಿದೆ. ವೈಜ್ಞಾನಿಕವಾಗಿ ನೆಲದ ಮೇಲೆ ತೊಟ್ಟಿ ಮಾಡಿ ಗೊಬ್ಬರ ಉತ್ಪಾದಿಸುವುದು ಒಂದು ಉತ್ತಮ ಪದ್ಧತಿ.

ಗೊಬ್ಬರ ಉತ್ಪಾದನೆಗೆ ಬೇಕಾಗುವ ತ್ಯಾಜ್ಯ ವಸ್ತುಗಳು :

ಕೃಷಿ ಕ್ಷೇತ್ರ ಹಾಗೂ ಅದರ ಪರಿಸರದಲ್ಲಿ ದೊರೆಕುವ ಸಾವಯವ ವಸ್ತುಗಳು ಎರೆಹುಳುಗಳಿಗೆ ಸದೃಢವಾದ ಆಹಾರ, ಇವು ಎರೆಹುಳಿವಿನ ದೇಹದಲ್ಲಿ ಸುಲಭವಾಗಿ ಜೀರ್ಣಗೊಂಡು ಉತ್ಕೃಷ್ಟ ವಾದ ಗೊಬ್ಬರವಾಗಿ ಮಾರ್ಪಡಲ್ಪಡುತ್ತವೆ. ಈ ತ್ಯಾಜ್ಯ ವಸ್ತುಗಳು ಸಸ್ಯ ಹಾಗೂ ಪ್ರಾಣಿ ಮೂಲವಾಗಿರುತ್ತವೆ. ಸಸ್ಯ ತ್ಯಾಜ್ಯಗಳಾದ ಎಲೆ,ಟೊಂಗೆಗಳು,ಒಣ ತರಗು,ಕಳೆಗಳು, ಹುಲ್ಲು,ತೆಂಗಿನ ನಾರು,ಕಬ್ಬಿನ ಸಪ್ಪೆ,ಬಾಳೆ ತ್ಯಾಜ್ಯ ಮತ್ತು ಪ್ರಾಣಿ ತ್ಯಾಜ್ಯಗಳಾದ ಸಗಣಿ,ಹಿಕ್ಕೆ,ಗ೦ಜಲ,ಕೊಟ್ಟಿಗೆ ತ್ಯಾಜ್ಯ ಇತ್ಯಾದಿಗಳು ಎರೆಗೊಬ್ಬರ ತಯಾರಿಸಲು ಒಳ್ಳೆಯ ಮೂಲವಸ್ತುಗಳು.

ಗೊಬ್ಬರ ತಯಾರಿಕೆ :

ನೀರನ್ನು ರಾಶಿಯ ಮೇಲೆ ಹಾಕಿ ಎರೆಹುಳುಗಳನ್ನು ಬಿಡಬೇಕು. ಈ ಎರಹುಳುಗಳು ರಾಶಿಯ ಮೇಲ್ಭ್ಜಾಗದಿಂದ ತ್ಯಾಜ್ಯಗಳನ್ನು ತಿನ್ನುತ್ತಾ ಕೆಳಭಾಗಕ್ಕೆ ಚಲಿಸುತ್ತವೆ. ಎರೆಹುಳುಗಳನ್ನು ಕಸದ ರಾಶಿಯಲ್ಲಿ ಬಿಟ್ಟ ನಂತರ ವಾತಾವರಣಕ್ಕನುಗುಣವಾಗಿ ಸರಿಯಾದ ದಿನಗಳ ಅಂತರದಲ್ಲಿ ನೀರು ನೀಡಬೇಕು. ಶೇಕಡಾ 50-60 ರಷ್ಟು ತೇವಾಂಶವನ್ನು ಕಾಪಾಡುವಂತೆ ನೀರು ನೀಡಬೇಕು. ರಾಶಿಯ ಮೇಲ್ಭಾಗದಲ್ಲಿ ಎರೆಹುಳು ಹಿಕ್ಕೆ ಸಂಗ್ರಹ ಶುರುವಾದಾಗಿನಿಂದ ಕೇವಲ ಮೇಲ್ಪದರ ಒದ್ದೆಯಾಗುವಂತೆ ನೀರು ಸಿಂಪಡಿಯಬೇಕು . ನಾವು ಬಳಸುವ ತ್ಯಾಜ್ಯ ವಸ್ತುಗಳು ಮತ್ತು ವಾತಾರವಣಕ್ಕನುಗುಣವಾಗಿ 70-80 ನಗಳಲ್ಲಿ ಗೊಬ್ಬರ ದೊರಕುವುದು. ಹುಳುಗಳನ್ನು ಬಿಟ್ಟ 35-45ನೇ ದಿನಗಳಿಂದಲೇ ರಾಶಿಯ ಮೇಲ್ಭಾಗದಿ೦ದ ಗೊಬ್ಬರದ ಸಂಗಹ ಶುರುವಾಗುವುದು.

ಈ ತ್ಯಾಜ್ಯಗಳನ್ನು ಒಂದು ನಿರ್ದಿಷ್ಟ ಸ್ಥಳದಲ್ಲಿ ಹರಡಿ,ಸಗಣಿಯೊಂದಿಗೆ ಮಿಶ್ರಣ ಮಾಡಬೇಕು. ಈ ಕಸದ ರಾಶಿ ನೆನೆಯುವಂತೆ ನೀರನ್ನು ಸಿಂಪಡಿಸುವುದು. ಹೀಗೆ ಒ೦ದು ತಿಂಗಳವರೆಗೆ ವಾರಕ್ಕೊಮ್ಮೆ ನೀರು ನೀಡಿ, 2-3 ಬಾರಿ ಕಸದ ರಾಶಿಯನ್ನು ತಿರುವಿ ಹಾಕಬೇಕು. ನ೦ತರ ತೆಳುವಾದ ಸಗಣಿ 

ಗೊಬ್ಬರದಿಂದ ಹುಳುಗಗಳನ್ನು ಬೇರ್ಪಡಿಸುವ ವಿಧಾನ :

ತೊಟ್ಟಿ ಅಥವಾ ಗುಂಡಿಯಿಂದ ಗೊಬ್ಬರವನ್ನು ತೆಗೆದು ನೆಲದ ಮೇಲೆ ಗೋಪುರದ ಆಕಾರದಲ್ಲಿ ರಾಶಿ ಮಾಡಬೇಕು ಹೀಗೆ ಒಂದು ರಾತ್ರಿ ಬಿಟ್ಟಲ್ಲಿ ಎರೆಹುಳುಗಳೆಲ್ಲಾ ರಾಶಿಯ ತಳಭಾಗದಲ್ಲಿ ಗುಂಪುಗೂಡುವುವು. ಈ ರೀತಿ ಹುಳುಗಳನ್ನು ಗೊಬ್ಬರದಿಂದ ಬೇರ್ಡಡಿಸಬಹುದು. ಹುಳುವಿನ ಮೊಟ್ಟೆ ಹಾಗೂ ಮರಿಗಳನ್ನು 3 ಮಿ.ಮೀ. ರಂಧಗಳುಳ್ಳ ಜರಡಿಯನ್ನು ಬಳಸಿ ಗೊಬ್ಬರದಿಂದ ಬೇರ್ಪಡಿಸಬೇಕು. ಬೇರ್ಪಡಿಸಿದ ಹುಳುಗಳು,ಮೊಟ್ಟೆಗಳು ಮತ್ತು ಮರಿಗಳನ್ನು ಹೊಸದಾಗಿ ರಾಶಿಮಾಡಿದ ತ್ಯಾಜ್ಯದೊಳಗೆ ಬಿಡಬೇಕು.

ಮುಂಜಾಗ್ರತಾ ಕ್ರಮಗಳು

ಎರೆಗೊಬ್ಬರದ ಉಪಯೋಗಗಳು

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ ಕಾರ್ಯಕ್ರಮ ಸಂಯೋಜಕರು ಕೃಷಿ ವಿಜ್ಞಾನ ಕೇಂದ್ರ ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ ದೂರವಾಣಿ : 08263-228198