“ಕಾಫಿ ಸಂಭ್ರಮ” – ಇದು ಕಾಫಿ ಉದ್ಯಮದ ಸಂಕಷ್ಟಕೆ ಮಹಿಳಾ ಬೆಳೆಗಾರರು ಕಂಡುಕೊಂಡ ಮಾರ್ಗ

ಬೆಂಗಳೂರು ಕೃಷಿ ಮೇಳದಲ್ಲಿ ಕಾಫಿ ನಾಡಿನ ಪ್ರದರ್ಶನ,ಬೆಳೆ ನಷ್ಟದಿಂದ ಸಂಘಟನೆಗೆ ಮುಂದಾದ ಸ್ತ್ರೀಯರು

ಎರಡು ದಶಕಗಳ ಹಿಂದೆ ಕಾಫಿ ನಾಡಿನಲ್ಲಿ ಎದ್ದ ಬಿರುಗಾಳಿಗೆ ಬೆಳೆಗಾರರು ನೆಲ ಕಚ್ಚಿದರು.ಬೆಳೆಗಾರರ ನೆರವಿಗೆ ಧಾವಿಸಲು ಮಹಿಳಾ ಬೆಳೆಗಾರರು ಪ್ರತ್ಯೇಕ ವೇದಿಕೆಯನ್ನು ರಚಿಸಿಕೊಂಡ ಪರಿಣಾಮ ಈಗ ಕಾಫಿ ಉಪ ಉತ್ಪನ್ನಗಳ ಮಾರಾಟದ ಮೂಲಕ ಮಹಿಳಾ ಕಾಫಿ ಉತ್ತೇಜನ ಪರಿಷತ್‌(ಡಬ್ಲುಸಹಿಸಿ) ಉದ್ಯಮಶೀಲತೆಗೆ ವೇದಿಕೆ ಕಲ್ಪಿಸಿದೆ.

ಸಕಲೇಶಪುರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಡಬ್ಲ್ಯುಸಿಪಿಸಿ ಪ್ರತಿ ವರ್ಷ ತನ್ನತೆಕ್ಕೆ ಹೊಸ ಬೆಳೆಗಾರರನ್ನು ಸೇರಿಸಿಕೊಳ್ಳುತ್ತಿದೆ.ಹಾಸನ,ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗೆ ಸೀಮಿತವಾಗಿರುವಂತೆ ಪರಿಷತ್‌ನ್ನು ಸಂಘಟಿಸಲಾಗಿದೆ.ಸದಸ್ಯರಲ್ಲಿ ಇರುವ ನಾನಾ ಕಲೆಗಳನ್ನು ಕಾಫಿ ಉತ್ತೇಜನಕ್ಕೆ ಬಳಸಿಕೊಳ್ಳಲಾಗುತ್ತಿದೆ.ಕಸೂತಿ,ಚಿತ್ರಕಲೆ,ಕರಕುಶಲತೆ ಜ್ಞಾನವುಳ್ಳವರು ತಾವು ತಯಾರಿಸುವ ಉತ್ಪನ್ನಗಳ ಮೇಲೆ ಕಾಫಿಯನ್ನು ವಸ್ತುವಾಗಿಸಿ ಬ್ರ್ಯಾಂಡಿಂಗ್‌ ಮಾಡುವ ತಂತ್ರಗಾರಿಕೆಯನ್ನು ಅಳವಡಿಸಿಕೊಂಡಿದ್ದಾರೆ.

ಸಂಘಟನೆ ಮೂಲಕ ಕಾಫಿ ಉತ್ತೇಜಿಸುವ ಯತ್ನಕ್ಕೆ ನಿಧಾನವಾಗಿ ಫಲ ಸಿಕ್ಕಿದೆ.ಎಲ್ಲಾಸದಸ್ಯರು ಬೆಳೆಗಾರರಾಗಿದ್ದು,ಕಾಫಿ ಜತೆಗೆ ಇನ್ನಿತರ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಸಾಧ್ಯವಾಗಿದೆ.-ಕರುಣಾಕಿರಣ್‌ ಅಧ್ಯಕ್ಷೆ,ಡಬ್ಲ್ಯುಸಿಪಿಸಿ

Also read  Pepper prices remains unchanged On Matching Demand And Supply

ಇದರಿಂದ ಸಂಘಟನೆಯ 400 ಮಂದಿಯು ಒಂದಿಲ್ಲೊಂದು  ಕೆಲಸ ಮಾಡುತ ಸಂಸ್ಥೆಯನ್ನು ಎತ್ತರಕ್ಕೆ ಬೆಳಸುವಲ್ಲಿ ಸಕ್ರಿಯರಾಗಿದಾರೆ.ಕರುನಾಡಿನ ಹೊರಗೂ ಕಾಫಿಯ ಘಮವನ್ನು ಪ್ರಸರಿಸಲು ಹೊಸಸ್ವಾದದ ಕಾಫಿಯನ್ನು ದೇಶದ ನಾನಾ ಮೆಟ್ರೊ ನಗರಗಳಲ್ಲಿ ಪರಿಚಯಿಸುವಲ್ಲಿ ಪರಿಷತ್ ಟೊಂಕ ಕಟ್ಟಿದೆ.

“ಕಾಫಿ ಸಂಭ್ರಮ” ಕೈ ಹಿಡಿದ ಜನ
ಕಳೆದೆರಡು ವರ್ಷದಿಂದ ಸುರಿದ ಭಾರಿ ಮಳೆ ಹಾಗೂ ಪ್ರವಾಹದಿಂದ ಕಾಫಿ ಬೆಳೆ ಕೈ ಸೇರಿಲ್ಲ ಪರಿಣಾಮ ಕಾಫಿ ಬೆಳೆಗಾರರು ಸಂಕಷ್ಟಕ್ಕಿಡಾಗಿದರೆ.ಕಾಫಿ ಬೆಲೆಯಲ್ಲೂಇಳಿಕೆಕಂಡಿದೆ.ಈ ಹೊಡೆತದಿಂದ ತಪ್ಪಿಸಿಕೊಳ್ಳಲು ಮಹಿಳಾ ಬೆಳೆಗಾರರ ಸಂಘಟನೆಯು “ಕಾಫಿ ಸಂಭ್ರಮ” ಎಂಬ ಕಾಫಿ ಪ್ರದರ್ಶನಗಳನ್ನು ಏರ್ಪಡಿಸಿ ಮಾರುಕಟ್ಟೆಯನ್ನು ಹಿಡಿಯುವಲ್ಲಿ ಸಕ್ರಿಯವಾಗಿದೆ.ದೇಶದ ರಾಜಧಾನಿ ದಿಲ್ಲಿಯಲ್ಲಿ ಕಾಫಿಗೆ ಹೆಚ್ಚು ಇರುವುದರಿಂದ ಪ್ರತಿ ವರ್ಷ ಅಲ್ಲಿ ಪ್ರದರ್ಶನ ಏರ್ಪಡಿಸಲಾಗುತ್ತಿದೆ.

-ಉಪ ಉತ್ಪನ್ನಗಳ ಮೂಲಕ ಕಾಫಿ ಪ್ರೋತ್ಸಾಹಕ್ಕೆ ಒತ್ತು
-ವರ್ಷಕ್ಕೆ 15ಕ್ಕೂ ಹೆಚ್ಚುಮೇಳ /ಪ್ರದರ್ಶನಗಳಲ್ಲಿಭಾಗಿ

Also read  ಅವಧಿಗೂ ಮುನ್ನ ಮಳೆ:ಅರೆಬಿಕಾ ಕಾಫಿ ಬೆಳೆಗಾರರಿಗೆ ಸಂಕಷ್ಟ