ನೀರು ಕುಡಿಯಲು ಬಂದು ಕೆರೆಯಲ್ಲಿ ಸಿಲುಕಿದ್ದ ಮೂರು ಆನೆಗಳ ರಕ್ಷಣೆ

ಮಡಿಕೇರಿ ತಾಲೂಕು ಚೇಲವಾರ ಗ್ರಾಮದಲ್ಲಿ ನೀರು ಕುಡಿಯಲು ಕೆರೆಗೆ ಇಳಿದ ಮೂರು ಆನೆಗಳು ಕೆರೆಯಿಂದ ಮೇಲೆ ಬರಲಾಗದೇ ಪರದಾಡಿದ್ದು,ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ನೆರವಿನಿಂದ ಜೀವ ಉಳಿಸಿಕೊಂಡು ಪಾರಾಗಿವೆ.   

Also read  ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧರಣ ಮಳೆ ಸಂಭವ

ಮಡಿಕೇರಿ ತಾಲೂಕು ನಾಪೋಕ್ಲು ಸಮೀಪದ ಚೇಲವಾರ ಗ್ರಾಮದ ಸುಬ್ಬಯ್ಯ ಎಂಬುವವರ ಕಾಫಿ ತೋಟದ ಪಕ್ಕದ ಕೆರೆಯಲ್ಲಿ ಎರಡು ಮರಿಯಾನೆಯೊಂದಿಗೆ ತಾಯಿ ಆನೆ ನೀರು ಕುಡಿಯಲು ಇಳಿದಿತ್ತು.ಆದರೆ,ನಂತರ ಮೇಲೆ ಬರಲು ಸಾಧ್ಯವಾಗದೇ ಸಾಕಷ್ಟು ಹೊತ್ತು ನೀರಿನಲ್ಲಿ ಪರದಾಡಿ, ಸಹಾಯಕ್ಕಾಗಿ ಅಂಗಲಾಚಿತ್ತು.ಬುಧವಾರ ರಾತ್ರಿ ಈ ಆನೆಗಳು ಕೆರೆಗೆ ಇಳಿದಿರಬಹುದು ಎಂದು ಶಂಕಿಸಲಾಗಿದ್ದು,ಗುರುವಾರ ಬೆಳಗ್ಗೆ ಈ ವಿಷಯ ಸ್ಥಳೀಯರ ಗಮನಕ್ಕೆ ಬಂದಿದೆ. 

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಸಹಾಯದಿಂದ ದಾರಿ ಮಾಡಿಕೊಟ್ಟು ಆನೆಗಳನ್ನು ಮೇಲೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಮರದ ದಿಮ್ಮಿಗಳನ್ನು ಹಾಕಿ ಆನೆಗಳನ್ನು ಮೇಲೆತ್ತುವ ಪ್ರಯತ್ನವೂ ವಿಫಲವಾಯಿತು. ಕೊನೆಗೆ ಜೆ.ಸಿ.ಬಿ ತರಿಸಿ ಮೇಲೆತ್ತಲು ಪ್ರಯತ್ನಿಸಲಾಯಿತು. ಹಲವು ತಾಸುಗಳ ರಕ್ಷಣಾ ಕಾರ್ಯಾಚರಣೆ ನಂತರ ಕೆರೆಯಿಂದ ಮೇಲೆ ಬಂದ ಆನೆಗಳು ತಮ್ಮ ನೆಲೆಯತ್ತ ತೆರಳಿದವು.

ಕಾಡಾನೆಯನ್ನು ನೋಡಿದ ಗ್ರಾಮಸ್ಥರು ಮತ್ತು ಕಾರ್ಮಿಕರು ಕೆಲಸಕ್ಕೆ ಹೋಗಲು ಭಯಗೊಂಡಿದ್ದರು.ಆನೆಗಳು ತೋಟದಲ್ಲಿನ ಕಾಫಿ,ಅಡಕೆ ಗಿಡಗಳನ್ನು ನಾಶ ಪಡಿಸಿ ನಷ್ಟವನ್ನುಂಟು ಮಾಡಿದ್ದು,ಅರಣ್ಯ ಇಲಾಖೆಯವರು ಕೂಡಲೇ ಆನೆಗಳನ್ನು ಅರಣ್ಯಕ್ಕೆ ಓಡಿಸಲು ಕ್ರಮ ಕೈಗೊಂಡು ಆದ ನಷ್ಟಕ್ಕೆ ಪರಿಹಾರ ವಿತರಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.ಕೆರೆಯಲ್ಲಿ ಸಿಲುಕಿದ ಆನೆಗಳನ್ನು ನೊಡಲು ಸ್ಥಳೀಯರು ಗುಂಪುಗೂಡಿದ್ದರು. 

Also read  ರಾಜ್ಯದಲ್ಲಿ ನಾಳೆ ಮಳೆ ಸಾಧ್ಯತೆ: ಬೆಳಗ್ಗೆ ಬೇಗ ಮತದಾನ ಮಾಡಿ