ಬಜೆಟ್-2019:’ಶೂನ್ಯ ಬಂಡವಾಳ ಕೃಷಿ’ಗೆ ಉತ್ತೇಜನ – ಏನಿದು?

ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ 2019-20ನೇ ಸಾಲಿನ ಆಯವ್ಯಯದಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡಲಾಗಿದೆ.ಶೂನ್ಯ ಬಂಡವಾಳ ಕೃಷಿಗೆ ಆದ್ಯತೆ ನೀಡಲು ಕೇಂದ್ರ ಸರಕಾರ ಮುಂದಾಗಿದೆ.2022ರ ವೇಳೆಗೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸಲು ಕೇಂದ್ರ ಸರಕಾರ ಒತ್ತು ನೀಡಿದೆ.

Also read  ಹೈಡ್ರೋಫೊನಿಕ್‌ನಿಂದ ಮಣ್ಣಿಲ್ಲದೆ ಮೇವು ಬೆಳೆದ ರೈತನಿಗೆ ಸರ್ಕಾರದ ಮೆಚ್ಚುಗೆ

ಶೂನ್ಯ ಬಂಡವಾಳ ಕೃಷಿ ಎಂದರೆ ಏನು?
ಏನನ್ನು ಹೊರಗಡೆಯಿಂದ ಕೊಂಡು ತರದೇ, ನಮಗಾಗಿ ಪ್ರಕೃತಿ ಕೊಡಮಾಡಿದ ಕಾಮಧೇನುವಿನ ಉತ್ಪನ್ನಗಳನ್ನು ಸರಿಯಾದ ಕ್ರಮದಲ್ಲಿ ಅಳವಡಿಸಿ ಮಾಡುವ ವಿಧಾನವೇ ಶೂನ್ಯ ಬಂಡವಾಳ ಕೃಷಿ. ಶೂನ್ಯ ಬಂಡವಾಳ ಕೃಷಿ ರೈತರ ಗೊಬ್ಬರ ಮತ್ತು ಕೀಟನಾಶಕ ರೀತಿಯ ಒಳಹರಿವಿನ ವಾಣಿಜ್ಯ ವೆಚ್ಚ ಹಾಗೂ ಮಾರುಕಟ್ಟೆ ಅವಲಂಬನೆಯ ವಿರುದ್ಧ ಧ್ವನಿ ಎತ್ತುವ ಕೃಷಿಯ ಒಂದು ವಿಧಾನವಾಗಿದೆ.ಈ ವಿಧಾನವು ಸ್ಥಳೀಯವಾಗಿ ದೊರೆಯುವ ನೈಸರ್ಗಿಕವಾಗಿ ವಿಘಟನೆ ಹೊಂದಬಲ್ಲ ವಸ್ತುಗಳನ್ನು, ವೈಜ್ಞಾನಿಕ ಪರಿಸರ ಜ್ಞಾನವನ್ನು ಮತ್ತು ಆಧುನಿಕ ತಂತ್ರಜ್ಞಾನದ ಜೊತೆಗಿನ ಸಾಂಪ್ರದಾಯಿಕ ಕೃಷಿ ಅಭ್ಯಾಸಗಳ ಆಧಾರಿತವಾದ ನೈಸರ್ಗಿಕವಾಗಿ ನಡೆಯುವ ಜೈವಿಕ ಪ್ರಕ್ರಿಯೆಗಳನ್ನು ಒಳಗೊಂಡಿರುತ್ತದೆ.ಶೂನ್ಯ ಬಂಡವಾಳ ಕೃಷಿ ಪದ್ಧತಿಯನ್ನು, ಕೃಷಿ ವಿಜ್ಞಾನಿಗಳಾದ ಸುಭಾಶ್ ಪಾಳೆಕರ್(ಸಾಂಪ್ರದಾಯಿಕ ಕೃಷಿ) ಮತ್ತು ಮಸನೊಬು ಫುಕುಒಕ(ನೈಸರ್ಗಿಕ ಕೃಷಿ) ಪ್ರೋತ್ಸಾಹ ನೀಡುತ್ತಿದ್ದಾರೆ.

ಶೂನ್ಯ ಬಂಡವಾಳ ಕೃಷಿಯು ಅಪ್ಪಟ ಕರ್ನಾಟಕದ ಪರಿಕಲ್ಪನೆ. ರೈತ ಚಳವಳಿಯ ದಿನಗಳಲ್ಲಿ ಈ ಪರಿಕಲ್ಪನೆ ರಾಜ್ಯದಲ್ಲಿ ಉದಯಿಸಿತ್ತು. ಕೃಷಿ ತಜ್ಞ ಸುಭಾಷ್‌ ಪಾಲೇಕರ್‌ ಮತ್ತು ರಾಜ್ಯ ರೈತ ಸಂಘದ ಸಹಯೋಗದೊಂದಿಗೆ ಈ ಪರಿಕಲ್ಪನೆಯನ್ನು ರಾಜ್ಯದಲ್ಲಿ ಹೆಚ್ಚು ಪ್ರಚುರಪಡಿಸಲಾಗಿತ್ತು. ಸಾವಯವ ಮಾದರಿಯಲ್ಲಿ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಈ ಪ್ರಯೋಗ ಕರ್ನಾಟಕದಲ್ಲಿ ಯಶಸ್ವಿಯಾಗುತ್ತಲೇ ದೇಶದ ಹಲವು ರಾಜ್ಯಗಳಲ್ಲಿ ಈ ಪದ್ಧತಿಯನ್ನು ಅನುಸರಿಸಲಾಯಿತು. ಸದ್ಯ ಕೇಂದ್ರ ಸರ್ಕಾರವೇ ಈ ಪದ್ಧತಿಗೆ ಪ್ರೋತ್ಸಾಹ ನೀಡಲು ನಿರ್ಧರಿಸಿದೆ.

Also read  ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

ಶೂನ್ಯ ಬಂಡವಾಳ ಕೃಷಿ ಯೋಜನೆಯ ಉದ್ದೇಶ-

  • ರೈತರ ಉತ್ಪಾದನಾ ವೆಚ್ಚ ಕಡಿತಗೊಳಿಸುವುದು, ಅಲ್ಪಾವಧಿ ಹಾಗೂ ದೀರ್ಘಾವಧಿ ಇಳುವರಿ ಹೆಚ್ಚಿಸುವುದು, ರೈತರ ಆದಾಯ ವರ್ಷಪೂರ್ತಿ ನಿಯಮಿತಗೊಳಿಸುವುದು, ನೈಸರ್ಗಿಕ ರೀತಿಯಿಂದ ಹವಾಮಾನ ವೈಪರೀತ್ಯ ಎದುರಿಸುವುದು.
  • ಅನಾವೃಷ್ಟಿ ಹಾಗೂ ಅತಿವೃಷ್ಟಿಯ ಸಂದರ್ಭಗಳಲ್ಲಿ ಉಂಟಾಗುವ ಬೆಳೆ ನಷ್ಟವನ್ನು ಎದುರಿಸಲು ರೈತರನ್ನು ಸಶಕ್ತರನ್ನಾಗಿಸುವುದು.
  • ಸುರಕ್ಷಿತ ಹಾಗೂ ಪೌಷ್ಟಿಕ ಆಹಾರ ಉತ್ಪಾದನೆಯನ್ನು ವೃದ್ಧಿಸುವುದು.
  • ಸುಸ್ಥಿರ ಅಭಿವೃದ್ಧಿಯ ಗುರಿ ಸಾಧಿಸುವುದು.
    ಮಣ್ಣಿನ ಸೂಕ್ಷ್ಮ ಜೀವಿ, ಪರಿಸರದಲ್ಲಿ ಸಸ್ಯ ಮತ್ತು ಪ್ರಾಣಿಗಳು, ಜೇನು, ಪಕ್ಷಿಗಳು ಹಾಗೂ ಚಿಟ್ಟೆಗಳ ಸಂಖ್ಯೆಯನ್ನು ವೃದ್ಧಿಸಿ ಪರಿಸರದ ಸಂರಕ್ಷಣೆ ಹಾಗೂ ಸುಧಾರಣೆಗೆ ಕ್ರಮ ಕೈಗೊಳ್ಳು ವುದು.
  • ರಸಗೊಬ್ಬರಗಳ ಮೇಲಿನ ರಿಯಾಯಿತಿ, ಆರೋಗ್ಯದ ಮೇಲಿನ ವೆಚ್ಚ ಕಡಿತಗೊಳಿಸುವುದು ಯೋಜನೆಯ ಉದ್ದೇಶ ಹೊಂದಲಾಗಿದೆ.   

ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ರೈತ ಸ್ನೇಹಿಯಾಗಿದ್ದು, ರೈತರನ್ನು ಅಧಿಕ ಬಂಡವಾಳ ಹೊರೆ ಮಾಡಿಕೊಳ್ಳುವ ಪ್ರವೃತ್ತಿಯಿಂದ ಹೊರತಂದು ತಮ್ಮಲ್ಲೇ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಕೃಷಿ ಮಾಡಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ಪ್ರಯೋಗಾತ್ಮಕವಾಗಿ ಕೈಗೆತ್ತಿಕೊಳ್ಳಲಾಗಿದೆ.

Also read  Black pepper stays steady on limited activities

ಶೂನ್ಯಬಂಡವಾಳ ಕೃಷಿ ನಾಲ್ಕು ಮೂಲ ತತ್ವಗಳ ಆಧಾರದ ಮೇಲೆ ಅವಲಂಬಿತವಾಗಿದೆ.

ಬೀಜಾಮೃತ, ಜೀವಾಮೃತ, ಬೆಳೆಗಳ ಹೊದಿಕೆ, ವಾಪಸ್‌.   

ಬೀಜಾಮೃತ: ದೇಸಿ ಹಸುವಿನ ಸಗಣಿ ಹಾಗೂ ಗಂಜಲ ಆಧಾರಿತ ಕಷಾಯಗಳಿಂದ ಬೀಜಗಳ ಲೇಪನವಾಗಿದೆ.   
ಜೀವಾಮೃತ: ದೇಸಿ ಹಸುವಿನ ಗಂಜಲ, ಸಗಣಿ, ಬೆಲ್ಲ ಹಾಗೂ ದ್ವಿದಳ ಧಾನ್ಯಗಳ ಹಿಟ್ಟಿನ ಮಿಶ್ರಣ ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ಸಂಖ್ಯೆಯನ್ನು ವೃದ್ಧಿಸಲು ಬಳಸಲಾಗುತ್ತದೆ.
ಬೆಳೆಗಳ ಹೊದಿಕೆ: ಭೂಮಿಯನ್ನು ಬೆಳೆಗಳು ಹಾಗೂ ಬೆಳೆ ಶೇಷಗಳಿಂದ ಹೊದಿಸುವುದು.   
ವಾಪಸ್‌: ಮಣ್ಣಿನ ಹ್ಯೂಮಸ್‌ನ್ನು ವೃದ್ಧಿಸಿ ಮಣ್ಣಿನ ವಾಯುಗುಣವನ್ನು ವೃದ್ಧಿಸುವುದು.    

Also read  Kannur International Airport to bring Coorg closer