ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಮಲೆನಾಡು,ಕರಾವಳಿ,ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧರಣ ಮಳೆ ಸಂಭವ

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ,ಮಲೆನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧರಣ ಮಳೆಯಾಗುವ ಸಂಭವವಿರುತ್ತದೆ.

ದಕ್ಷಿಣ ಕನ್ನಡ,ಚಿಕ್ಕಮಗಳೂರು,ಶಿವಮೊಗ್ಗ,ಕೊಡಗು,ಹಾಸನ,ಮೈಸೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಚದುರಿದಂತೆ ಸಾಧರಣ ಮಳೆಯಾಗುವ ಸಂಭವವಿರುತ್ತದೆ.

Also read  ರಾಜ್ಯದಲ್ಲಿ ಮಳೆ ಸಾಧ್ಯತೆ

ಉತ್ತರ ಕನ್ನಡ,ಹಾವೇರಿ,ಕೊಪ್ಪಳ,ರಾಯಚೂರು,ಚಿತ್ರದುರ್ಗ,ಮಂಡ್ಯ,ತುಮಕೂರು,ಚಿಕ್ಕಬಳ್ಳಾಪುರ,ಚಾಮರಾಜನಗರ,ರಾಮನಗರ,ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಕೆಲವೆಡೆ ಹಗುರ ಮಳೆಯಾಗುವ ಸಂಭವವಿರುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಇವತ್ತು(10 ಏಪ್ರಿಲ್ 2019 ) ಬೆಳಿಗ್ಗೆ 8.30 ರಿಂದ ಸಂಜೆ 4.30 ವರೆಗೆ  ಕೊಡಗು ಜಿಲ್ಲೆಯ ಯಮ್ಮಮಾಡುವಿನಲ್ಲಿ ಗರಿಷ್ಠ 23.5ಮಿಮಿ ಮಳೆಯಾಗಿದೆ .

Also read  Forecast for the next 24hrs:Heavy rains likely over Coastal Karnataka & Malnad districts