ಮುಂದಿನ 24 ಗಂಟೆ ಮಳೆ ಮುನ್ಸೂಚನೆ:ಕರಾವಳಿ ಮಲೆನಾಡಿನಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ

ಕರಾವಳಿ ಮಲೆನಾಡಿನಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.ಕರಾವಳಿ ಮತ್ತು ಘಟ್ಟಪ್ರದೇಶಗಳಲ್ಲಿ ಭಾರೀಯಿಂದ ಅತಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು,ಕರಾವಳಿಯ ದಕ್ಷಿಣ ಕನ್ನಡ,ಉಡುಪಿ ಮತ್ತು ಉತ್ತರ ಕನ್ನಡ ಹಾಗೂ ಘಟ್ಟಪ್ರದೇಶದ ಕೊಡಗು,ಚಿಕ್ಕಮಗಳೂರು,ಶಿವಮೊಗ್ಗ ಸುತ್ತಲಿನ ಭಾಗಗಳಲ್ಲಿ ಭಾರತೀಯ ಹವಾಮಾನ ಇಲಾಖೆ “ರೆಡ್‌ ಅಲರ್ಟ್‌’ ಘೋಷಿಸಲಾಗಿದೆ.

ರಾಜ್ಯದಲ್ಲಿ ಆಶ್ಲೇಷಾ ಮಳೆಯ ಅಬ್ಬರ ಮುಂದುವರಿದಿದ್ದು,ಕೊಡಗಿನಲ್ಲಿಮತ್ತೆ ಎರಡು ದಿನ  ರೆಡ್ ಅಲರ್ಟ್ ಮುಂದುವರೆಸಲಾಗಿದೆ.ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು,ಆ.8 ಹಾಗೂ 9ರಂದು ಜಿಲ್ಲೆಯ ಎಲ್ಲ ಶಾಲಾ,ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶಿಸಿದ್ದಾರೆ.

ಉತ್ತರ ಕರ್ನಾಟಕದ ಜಿಲ್ಲೆಗಳು,ಕರಾವಳಿ,ಮಲೆನಾಡು ಹಾಗೂ ಕೊಡಗು ಜಿಲ್ಲೆಗಳಲ್ಲಿ ಬುಧವಾರವೂ ಮಳೆ ತೀವ್ರಗೊಂಡಿದೆ.

ಕಾವೇರಿ,ಲಕ್ಷ್ಮಣ ತೀರ್ಥ,ತುಂಗಾ,ಭದ್ರಾ,ಹೇಮಾವತಿ,ನೇತ್ರಾವತಿ,ವೇದಾವತಿ,ವರದಾ,ಅಘನಾಶಿನಿ,ಕಾಳಿ,ಬೇಡ್ತಿ,ಗಂಗಾವಳಿ,ಶರಾವತಿ,ಶರ್ಮನಾವತಿ,ವಾರಾಹಿ,ಕುಮದ್ವತಿ,ಚಕ್ರಾ ಸಾವೆಹಕ್ಕಲು ನದಿಗಳು ಪ್ರವಾಹ ಮಟ್ಟವನ್ನು ಮೀರಿ ಹರಿಯುತ್ತಿದ್ದು,ಪರಿಣಾಮವಾಗಿ ಈ ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

As per the Weather report, due to the strengthening of monsoon currents and formation of a low-pressure area over north Bay of Bengal adjoining coast to north Kerala coast, rainfall activity is very likely to be active and continue over the west coast and adjoining ghat areas of Madhya Maharashtra, Konkan, Goa during the next three to four days.

Also read  Agali pepper:Unique High Yieldling and Disease Resistant Variety