ಅವಧಿಗೂ ಮುನ್ನ ಮಳೆ:ಅರೆಬಿಕಾ ಕಾಫಿ ಬೆಳೆಗಾರರಿಗೆ ಸಂಕಷ್ಟ

ಚಿಕ್ಕಮಗಳೂರು ಜಿಲ್ಲೆಯ ಕಳೆದ ಒಂದು ಅಕಾಲಿಕ ಮಳೆಯಾಗುತ್ತಿದ್ದು,ಅರೆಬರೆಯಾಗಿ ಬಿದ್ದ ಮಳೆಯಿಂದ ಮುಂದಿನ ಫಸಲು ಕೈಕೊಡುವ ಭೀತಿಯು ಅರೆಬಿಕಾ ಕಾಫಿ ಬೆಳೆಗಾರರನ್ನು ಕಾಡುತ್ತಿದೆ.ಹೂಮಳೆ ಎಂದು ಕರೆಯುವ ರೇವತಿ ಭೂಮಿಗೆ ಬೀಳಲು ಇನ್ನೂ 50 ದಿನ ಬಾಕಿ ಇದೆ. ಅಷ್ಟರಲ್ಲೇ ಅಕಾಲಿಕವಾಗಿ ಮಳೆ ಬಂದು ಬೆಳೆಗಾರರನ್ನು ಕಂಗಾಲಾಗುವಂತೆ ಮಾಡಿದೆ.

ರೊಬಾಸ್ಟ ಕಾಫಿ ಬೆಳೆಗಾರರು ಅದಾಗಲೇ ಕಾಫಿ ಕೊಯ್ಲು ಪೂರ್ಣಗೊಳಿಸಿ ಮುಂದಿನ ಬೆಳೆಗೆ ಸಿದ್ಧತೆ ನಡೆಸಿದ್ದಾರೆ. ಬೋರ್‌ ವೆಲ್‌ ಹೊಂದಿದವರು ತೋಟಕ್ಕೆ ಸ್ಪಿಂಕ್ಲರ್‌ ಮೂಲಕ ನೀರು ಹಾಯಿಸುತ್ತಿದ್ದಾರೆ. ಅವರಿಗೆ ಮಳೆಯಿಂದ ಅನುಕೂಲವಾಗಿದೆ.

Also read  ಚಿಕ್ಕಮಗಳೂರು ವರ್ಷದ ಮೊದಲ ಮಳೆ:ಬೆಳೆಗಾರರಿಗೆ ಖುಶಿ ಮತ್ತು ಸಂಕಷ್ಟ

ಅಕಾಲಿಕವಾಗಿ ಮಳೆ ಬಂದಿರುವುದು ಮತ್ತು ಕಾಫಿ ಅರೆಬರೆ ಹೂ ಬಿಡುತ್ತಿರುವುದು ಬೆಳೆ ಮತ್ತು ಫಸಲಿನ ಭವಿಷ್ಯದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಅವಧಿಗೂ ಮುನ್ನ ಮಳೆ ಕಾರಣದಿಂದ ಕಾಫಿ ಹೂ ಬಿಡುತ್ತದೆಯಾದರೂ ಅದು ಬೆಳೆಗೆ ಹದವರಿತ ಸಮಯವಲ್ಲ. ಹಾಗಾಗಿ ಫಸಲು ಉಳಿಯಬಹುದು, ಉಳಿಯದಿರಲೂಬಹುದು. ಅಧಿಕ ಪ್ರಮಾಣದ ಮಳೆಯಾಗಿ ಮತ್ತೆ ವಾರದಲ್ಲಿ ಮಳೆ ಬಿದ್ದರೆ ಅನುಕುಲವಾಗಲಿದೆ. ಇಲ್ಲದಿದ್ದರೆ ನಿರೀಕ್ಷಿತ ಫಸಲು ಬರುವುದಿಲ್ಲ. ಅಕಾಲಿಕ ಮಳೆಯಿಂದ ಸಂಪೂರ್ಣವಾಗಿ ಅರಳಬೇಕಾದ ಹೂ, ಮಳೆ ಕೊರತೆಯಿಂದ ಅರಿಶಿನ ಮೊಗ್ಗಾಗಿ ಉದುರಿಬಿಡುತ್ತದೆ. ಬಹುತೇಕ ತಗ್ಗು ಪ್ರದೇಶದಲ್ಲಿ, ದೊಡ್ಡ ಪ್ರಮಾಣದಲ್ಲಿ ಬೆಳೆಯುವ ರೊಬಾಸ್ಟಾ ಕಾಫಿ ಗಿಡಗಳಿಗೆ ಮಳೆಯಿಂದ ಯಾವುದೇ ತೊಂದರೆಯಿಲ್ಲ- ಕಾಫಿ ಬೆಳೆಗಾರ,ಚಿಕ್ಕಮಗಳೂರು.

Leave a Reply