ಅರಬ್ಬಿ ಸಮುದ್ರದಲ್ಲಿ ಒಂದೇ ಸಮಯದಲ್ಲಿ ಎರಡು ಚಂಡಮಾರುತ

ಅಪರೂಪದ ವಿದ್ಯಮಾನದಲ್ಲಿ ಕ್ಯಾರ್ ಚಂಡಮಾರುತದ ಜೊತೆಗೆ ಅರಬ್ಬಿ ಸಮುದ್ರದಲ್ಲಿ ಇನ್ನೊಂದು ಚಂಡಮಾರುತವು ರೂಪುಗೊಂಡಿದ್ದು,ಇದನ್ನು ‘ಮಹಾ’ ಎಂದು ಹೆಸರಿಸಲಾಗಿದೆ.

ಈಗಾಗಲೇ ‘ಮಹಾ’ಚಂಡಮಾರುತವು ಲಕ್ಷದ್ವೀಪದ ಈಶಾನ್ಯ ಭಾಗ ಕವರಟ್ಟಿ ಬಳಿ ಕೇಂದ್ರೀಕೃತವಾಗಿದೆ.ಮುಂದಿನ 06 ಗಂಟೆಗಳಲ್ಲಿ ಪ್ರತಿ ಗಂಟೆಗೆ 100 ಕಿ.ಮೀ.ವೇಗದವರೆಗಿನ ಗಾಳಿಯೊಂದಿಗೆ ಲಕ್ಷದ್ವೀಪ ಪ್ರದೇಶದ ಮೇಲೆ ಇದು ಅತ್ಯಂತ ತೀವ್ರ ಚಂಡಮಾರುತವಾಗಿ ಅಪ್ಪಳಿಸಲಿದೆ.
ಇದು ಮುಂದಿನ 12 ಗಂಟೆಗಳಲ್ಲಿ ಲಕ್ಷದ್ವೀಪ ಉತ್ತರ-ವಾಯುವ್ಯ ಭಾಗದ ದ್ವೀಪಸಮೂಹಗಳತ್ತ ಸಾಗಲಿದೆ.

Also read  Rains damages paddy, maize, red gram crop in Telangana

ಈಗಾಗಲೇ ಮಂಗಳವಾರ ಕ್ಯಾರ್ ಚಂಡಮಾರುತ ಸೂಪರ್ ಸೈಕ್ಲೋನ್ ಆಗಿ ಪರಿವರ್ತನೆಗೊಂಡಿದ್ದು,ಇದು ಈಗ ಪಶ್ಚಿಮ ಅರಬ್ಬಿ ಸಮುದ್ರದ ಮಾಸಿರಾ (ಓಮನ್)ನ ಪೂರ್ವ-ಆಗ್ನೇಯಕ್ಕೆ 330 ಕಿ.ಮೀ ಬಳಿ ಕೇಂದ್ರೀಕೃತವಾಗಿದೆ.ಇದು ಅಕ್ಟೋಬರ್ 31ರ ಮುಂಜಾನೆ ತೀವ್ರ ಚಂಡಮಾರುತವಾಗಿ ಪರಿವರ್ತಿತವಾಗುತ್ತವೆ.

ಅರಬ್ಬಿ ಸಮುದ್ರದಲ್ಲಿ ಒಂದೇ ಸಮಯದಲ್ಲಿ ಎರಡು ಚಂಡಮಾರುತಗಳು ಉಂಟಾಗಿರುವುದು ಕೂಡ ಅಪರೂಪದ ವಿದ್ಯಮಾನವಾಗಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರಾ ಅವರು ಐಎಂಡಿ ತಿಳಿಸಿದೆ.

ಸಾಮಾನ್ಯವಾಗಿ ಅರಬ್ಬಿ ಸಮುದ್ರಕ್ಕಿಂತ ಬಂಗಾಳಕೊಲ್ಲಿಯಲ್ಲಿ ಚಂಡಮಾರುತಗಳು ಹೆಚ್ಚು.ಭಾರತದಲ್ಲಿ ಕಳೆದ 126 ವರ್ಷಗಳಿಂದ ಅಪ್ಪಳಿಸಿರುವ ಚಂಡಮಾರುತಗಳನ್ನು ನೋಡುವುದಾದರೆ 1891-2017ರ ವರೆಗೆ ಅಪ್ಪಳಿಸಿರುವ 305 ಚಂಡಮಾರುಗಳು ಅತಿ ಹೆಚ್ಚು ಹಾನಿಯುಂಟುಮಾಡಿವೆ. ಅದರಲ್ಲಿ 75% ಚಂಡಮಾರುತಗಳು ಬಂಗಾಳಕೊಲ್ಲಿಯಿಂದ ಅಪ್ಪಳಿಸಿದವುಗಳಾಗಿವೆ. ಇದಕ್ಕೆ ಮುಖ್ಯ ಕಾರಣ ಚಂಡಮಾರುತ ಸೃಷ್ಟಿಯಾಗಲು 28ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಬೇಕು.ಬಂಗಾಳಕೊಲ್ಲಿಯ ಮೇಲ್ಮೈ ತಾಪಮಾನವು ಅರಬ್ಬಿ ಸಮುದ್ರದ ಮೇಲ್ಮೈ ತಾಪಮಾನಕ್ಕಿಂತ ಹೆಚ್ಚಿರುತ್ತದೆ.

1972ರ ಬಳಿಕ ಇದೇ ಮೊದಲ ಬಾರಿಗೆ ಅರಬ್ಬಿ ಸಮುದ್ರದಲ್ಲಿ ಎರಡು ಚಂಡಮಾರುತಗಳು ಏಕಕಾಲದಲ್ಲಿ ಅಬ್ಬರಿಸುತ್ತಿವೆ ಎಂದು ಅಮೆರಿಕದ ಖ್ಯಾತ ಹವಾಮಾನ ತಜ್ಞ ಫಿಲಿಪ್ ಕ್ಲೋಝ್‌ಬ್ಯಾಚ್ ಹೇಳಿದ್ದಾರೆ.

Also read  Importance of TWO TIER SHADE in Coffee Plantation

‘ಮಹಾ ’ಚಂಡಮಾರುತವು ಲಕ್ಷದ್ವೀಪವನ್ನು ದಾಟಿದ ಬಳಿಕ ಪಶ್ಚಿಮಕ್ಕೆ ತಿರುವು ಪಡೆದುಕೊಳ್ಳಲಿದೆ ಮತ್ತು ದಕ್ಷಿಣ ಒಮಾನ್-ಯೆಮನ್ ಕರಾವಳಿಯತ್ತ ಸಾಗಲಿದೆ,ಹೀಗಾಗಿ ಭಾರತದ ಮುಖ್ಯಭೂಮಿಯ ಮೇಲೆ ನೇರ ಪ್ರಭಾವ ಬೀರುವ ಸಾಧ್ಯತೆಗಳು ಕಡಿಮೆ ಐಎಂಡಿ ತಿಳಿಸಿದೆ.

ಮುಂದಿನ ಎರಡು ದಿನಗಳಲ್ಲಿ ಕೇರಳ,ಲಕ್ಷದ್ವೀಪ,ಮತ್ತು ದಕ್ಷಿಣ ತಮಿಳುನಾಡಿನ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.

ವಾಯುಭಾರ ಕುಸಿತದ ಪರಿಣಾಮ ರಾಜ್ಯ ಕರಾವಳಿಯಲ್ಲಿ ಮುಂದಿನ ಎರಡು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Also read  ಬಂಗಾಳ ಕೊಲ್ಲಿ ಚಂಡಮಾರುತ ಪ್ರಭಾವ: ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ ಸಾಧ್ಯತೆ

ಮುಂದಿನ 48 ಗಂಟೆಗಳಲ್ಲಿ ಕನ್ಯಾಕುಮಾರಿ-ಮಾಲ್ದೀವ್ಸ್,ಲಕ್ಷದ್ವೀಪ ಪ್ರದೇಶಗಳಲ್ಲಿ ಮತ್ತು ಕೇರಳ-ಕರ್ನಾಟಕದ ಕರಾವಳಿಯಲ್ಲಿ ಸಮುದ್ರಕ್ಕಿಳಿಯದಂತೆ ಅದು ಮೀನುಗಾರರಿಗೆ ಎಚ್ಚರಿಕೆಯನ್ನೂ ಐಎಂಡಿ ತಿಳಿಸಿದೆ.

ಕಾಸರಗೋಡು ಜಿಲ್ಲೆಯಲ್ಲಿ ಅ. 31 ಮತ್ತು ನಾಳೆ ನ.1ರಂದು ಭಾರೀ ಮಳೆಯಾಗುವ ಸಾಧ್ಯತೆಯಿದ್ದು,ಎಲ್ಲೋ ಅಲೆರ್ಟ್‌ ಘೋಷಿಸಲಾಗಿದೆ ಎಂದು ತಿರುವನಂತಪುರ ಹವಾಮಾನ ನಿಗಾ ಕೇಂದ್ರ ತಿಳಿಸಿದೆ. ಸಮುದ್ರ ಅಬ್ಬರಿಸುತ್ತಿರುವುದರಿಂದ ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ತೆರಳಬಾರದು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು ತಿಳಿಸಿದ್ದಾರೆ.

Also read  Arabica picking starts in Karnataka