ಕೊಡಗು ಸುತ್ತಲಿನ ಪ್ರದೇಶಗಳಲ್ಲಿ ಟ್ರಫ್:ಇನ್ನೂ ಎರಡು ದಿನಗಳ ಮಳೆ ಸಾಧ್ಯತೆ

ಮೇಲ್ಮೆ ಸುಳಿಗಾಳಿ ಮತ್ತು ಕಡಿಮೆ ಒತ್ತಡದ ತಗ್ಗು (ಟ್ರಫ್)ಉಂಟಾಗಿರುವುದರಿಂದ ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಆಯ್ದ ಭಾಗಗಳಲ್ಲಿ ಗುಡುಗು ಸಹಿತ ಮಳೆ ಆಗಿದ್ದು,ಇನ್ನೂ ಎರಡು ದಿನಗಳು ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. 

ದಕ್ಷಿಣ ಕನ್ನಡ,ಕೊಡಗು,ಹಾಸನ ಸೇರಿದಂತೆ ಹಲವೆಡೆ ಸಾಧಾರಣದಿಂದ ವ್ಯಾಪಕ ಮಳೆಯಾಗಿದೆ. ಮಲೆನಾಡಿನಲ್ಲಿ ಅದರಲ್ಲೂ ಕೊಡಗು ಸುತ್ತಲಿನ ಪ್ರದೇಶಗಳಲ್ಲಿ ಟ್ರಫ್ ಕಂಡು ಬಂದಿದೆ. ಅದೇ ರೀತಿ, ಉತ್ತರ ಭಾಗದಲ್ಲಿ ಮೇಲ್ಮೆ ಸುಳಿಗಾಳಿ ಹಾದು ಹೋಗಿದ್ದು, ಇದು ಮಳೆ ಸುರಿಸುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.

Also read  ಮಲೆನಾಡಲ್ಲಿ ಕೈಕೊಟ್ಟ ಮುಂಗಾರು:ಜಲಾಶಯಗಳಲ್ಲಿ ನೀರಿಲ್ಲ,ರೈತರು ಕಂಗಾಲು

ಬಿಸಿಲಿನ ತೀವ್ರತೆ ಹೆಚ್ಚಿದಾಗ,ಕಡಿಮೆ ಒತ್ತಡದ ತಗ್ಗು ಉಂಟಾಗಿ ಮಳೆ ಬೀಳುವುದು ಸಾಮಾನ್ಯ ವಾಗಿದೆ.ಇದು ಇನ್ನೂ ಎರಡು ದಿನಗಳು ಮುಂದುವರಿಯಲಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

A trough is running from Vidarbha to South Tamilnadu across Karnataka and Kerala.Isolated rains will continue over Marathwada, Telangana, Karnataka, Kerala and Tamilnadu. 

Source: www.skymet.com

Also read  ಮುಂದಿನ 24 ಗಂಟೆ ಮಳೆ ಮುನ್ಸೂಚನೆ:ಕರಾವಳಿ ಮಲೆನಾಡಿನಲ್ಲಿ ಭಾರೀ ಮಳೆ ಸಾಧ್ಯತೆ