ಕೊಡಗು,ಶೃಂಗೇರಿಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ:ಕಾಫಿ ಬೆಳೆಗಾರರು ಸಂತಸ

ಕೊಡಗಿನ ವಿವಿಧೆಡೆ ಶನಿವಾರ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು. ಮಡಿಕೇರಿ ನಗರ, ಅಪ್ಪಂಗಳ, ಬೆಟ್ಟಂಗೇರಿ, ತಾಳತ್ತಮನೆ, ಭಾಗಮಂಡಲ, ತಲಕಾವೇರಿ ಹಾಗೂ ನಾಪೋಕ್ಲು ಪಟ್ಟಣ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ.

ನಾಪೋಕ್ಲು ಭಾಗದಲ್ಲಿ ಮುಕ್ಕಾಲು ಗಂಟೆ ಮಳೆ ಸುರಿದು ತಂಪೆರೆಯಿತು. ಬಲಮುರಿ, ಪಾರಾಣೆ, ಕೈಕಾಡು, ಬೇತು ಭಾಗದಲ್ಲಿ 25 ಮಿ.ಮೀ ಮಳೆಯಾಗಿದೆ.

ಜಿಲ್ಲೆಯಲ್ಲಿ ಎರಡು ದಿನಗಳಿಂದ ಬಿರುಸಿನ ಮಳೆ ಬೀಳುತ್ತಿದ್ದು ಕಾಫಿ ಬೆಳೆಗಾರರು ಸಂತಸಗೊಂಡಿದ್ದಾರೆ.ಮಳೆಯಿಂದ ಕಾಫಿ ಗಿಡಗಳು ಚೇತರಿಸಿಕೊಳ್ಳುತ್ತಿವೆ.ಮುಂದಿನ ವರ್ಷದ ಕಾಫಿ ಬೆಳೆಗೂ ಮಳೆಯಿಂದ ಅನುಕೂಲ ಆಗಲಿದೆ ಎಂದು ಬೆಳೆಗಾರರು ಹೇಳುತ್ತಾರೆ.

Also read  ಚಿಕ್ಕಮಗಳೂರು,ಕೊಡಗು ಜಿಲ್ಲೆಯ ಕೆಲವೆಡೆ ಉತ್ತಮ ಮಳೆ:ಕಾಫಿ ಬೆಳೆಗಾರರ ಮುಖದಲ್ಲಿ ಹರ್ಷ

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಶನಿವಾರ ಸಂಜೆ ವೇಳೆಗೆ ಸಾಧಾರಣ ಮಳೆಯಾಗಿದೆ.ಸುಬ್ರಹ್ಮಣ್ಯ ಮತ್ತು ಕಾರ್ಕಳದ ಅಜೆಕಾರು, ನಾರಾವಿ ಸುತ್ತಮುತ್ತಲ ಮಾ. 30ರ ಸಂಜೆ 4ರ ಸುಮಾರಿಗೆ ಮಳೆ ಸುರಿದಿದೆ.ಅಂಡಾರು, ಶಿರ್ಲಾಲು, ಕೆರ್ವಾಶೆ, ಕಾಡುಹೊಳೆ, ಮುನಿಯಾಲು ಪರಿಸರ ದಲ್ಲಿ ಸುಮಾರು ಅರ್ಧ ಗಂಟೆ ಕಾಲ ಮಳೆ ಸುರಿದಿದೆ. ಹಿರ್ಗಾನ ಪರಿಸರದಲ್ಲಿ ತುಂತುರು ಮಳೆ ಬಿದ್ದಿದೆ.

Also read  ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧರಣ ಮಳೆ ಸಂಭವ