‘ಯೆಲ್ಲೊ ಅಲರ್ಟ್‌’:ರಾಜ್ಯದ ಕರಾವಳಿ ಮತ್ತು ಉತ್ತರ ಒಳನಾಡಿನಲ್ಲಿ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಇನ್ನೂ ಎರಡು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ ಎರಡು,ಮೂರು ದಿನಗಳವರೆಗೆ ಗೋವಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.ಸ್ಕೈಮೆಟ್ ಪ್ರಕಾರ,ಕೊಂಕಣ ಮತ್ತು ಗೋವಾ,ಕರಾವಳಿ ಕರ್ನಾಟಕ ಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ .

ರಾಜ್ಯದ ಕರಾವಳಿ ಭಾಗದಲ್ಲಿ ಇದೇ 19ರಿಂದ 22ರವರೆಗೆ ಭಾರಿ ಮಳೆಯಾಗಲಿದೆ.ಉತ್ತರ ಒಳನಾಡಿನಲ್ಲಿ 19ರಂದು ವ್ಯಾಪಕ ಮಳೆ ಯಾಗಲಿದ್ದು,ಎರಡೂ ಭಾಗಗಳಲ್ಲಿ ‘ಯೆಲ್ಲೊ ಅಲರ್ಟ್‌’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ.ಸೆಪ್ಟೆಂಬರ್‌ 20 ಮತ್ತು 21ರಂದು ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಬುಧವಾರ ರಾಯಚೂರಿನಲ್ಲಿ 6 ಸೆಂ.ಮೀ.ಮಳೆಯಾಗಿದೆ. ಕಂಪ್ಲಿ 4, ಆನೇಕಲ್‌, ಗೌರಿಬಿದನೂರು‌ 3, ಕೆಂಭಾವಿ, ಕೊಟ್ಟಿಗೆಹಾರದಲ್ಲಿ ತಲಾ 2 ಸೆಂ.ಮೀ.ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದೆ.

ಹವಾಮಾನ ಇಲಾಖೆ ಮುಂಬೈ ಮತ್ತು ಸುತ್ತಮುತ್ತಲಿನ ನಗರಗಳಿಗೆ ರೆಡ್ ಅಲರ್ಟ್ ಘೋಷಣೇ ಮಾಡಿದ್ದು,ಮಳೆ ಕೊರತೆ ಎದುರಿಸುತ್ತಿರುವ ಲಾತೂರ್, ಬೀಢ್ ಮತ್ತು ನಾಂದೇಡ್ ಪ್ರದೇಶಗಳಿಗೂ ಸಹ ಹವಾಮಾನ ಇಲಾಖೆ ‘ಹಳದಿ ಎಚ್ಚರಿಕೆ’ ನೀಡಿದೆ.

ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ಸೂಚನೆಯನ್ನು ರವಾನಿಸಿದೆ.ಮುಂಬೈನಲ್ಲಿ ಇಂದು ಶಾಲಾ,ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಮುಂದಿನ 24 ಗಂಟೆಗಳಲ್ಲಿ ಮುಂಬಯಿ ನಗರ ಸೇರಿದಂತೆ ನಾಶಿಕ್,ಪುಣೆ ಮತ್ತು ಔರಂಗಾಬಾದ್ ಪ್ರದೇಶಗಳಲ್ಲೂ ‘ಭಾರೀ ಮತ್ತು ಭರ್ಜರಿ ಮಳೆ’ಯಾಗುವ ಮುನ್ಸೂಚನೆಯನ್ನು ನೀಡಿದೆ.

ಮುಂದಿನ ಎರಡು,ಮೂರು ದಿನಗಳವರೆಗೆ ಗೋವಾದಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಬುಧವಾರ ತಿಳಿಸಿದೆ.ಸ್ಕೈಮೆಟ್ ಪ್ರಕಾರ, ಕೊಂಕಣ ಮತ್ತು ಗೋವಾ,ಕರಾವಳಿ ಕರ್ನಾಟಕ ಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ .

A Cyclonic Circulation is over Madhya Maharashtra and a Trough is extending from Northeast Arabian Sea to Bay of Bengal across Maharashtra and Telangana.These systems will give moderate to heavy rains over North Madhya Maharashtra and Konkan and Goa. Whereas, rains over Vidarbha, Marathwada and many parts of Madhya Pradesh will be light to moderate with one or two heavy spells. South Chhattisgarh and South Gujarat may see scattered light to moderate rains.

Mumbai may receive moderate to heavy spells which may lead to typical Monsoon conditions over here and would result in waterlogging and traffic chaos. Nashik, Pune, Malegaon, Nagpur and Akola are likely to witness good rains.The rainfall activities may also increase over Coastal Karnataka and North Interior Karnataka. We expect moderate rains with one or two heavy spells over these regions of Karnataka.Hyderabad and Chennai may see moderate rains with light rains over Bengaluru.

Also read  Kochi:Black Pepper Market Closed Higher