ಕೊಡಗಿನಲ್ಲಿ ಆಲಿಕಲ್ಲು ಸಹಿತ ಬಾರಿ ಮಳೆ:ಬೆಳೆಗಾರರ ಆತಂಕ

ಕೊಡಗು ಜಿಲ್ಲೆಯ ತಲಕಾವೇರಿ, ನಾಪೋಕ್ಲು, ಭಾಗಮಂಡಲ, ಕಕ್ಕಬ್ಬೆ ಭಾಗದಲ್ಲಿ ಮಂಗಳವಾರವೂ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿಯಿತು.

ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಸಂಜೆ 4ರಿಂದ ಒಂದು ತಾಸು ಗುಡುಗು, ಮಿಂಚಿನೊಂದಿಗೆ ಮಳೆ ಆರ್ಭಟಿಸಿತು. ರಸ್ತೆಗಳು ಹಳ್ಳದಂತೆ ಗೋಚರಿಸಿದವು. ಮಳೆಯೊಂದಿಗೆ ರಾಶಿ ರಾಶಿ ಆಲಿಕಲ್ಲು ಸುರಿಯಿತು. ನಾಲ್ಕು ದಿನಗಳಿಂದ ಪ್ರತಿನಿತ್ಯ ಸಂಜೆ ಮಳೆಯಾಗುತ್ತಿದ್ದು, ಇಳೆ ತಂಪಾಗಿದೆ.

Also read  Bangalore Krishi Mela-2018 Photos

‘ಏಪ್ರಿಲ್‌ನಲ್ಲಿ ಮಳೆ ಬಿದ್ದಷ್ಟು ಕಾಫಿ ಬೆಳೆಗೆ ಅನುಕೂಲ. ಆದರೆ, ಆಲಿಕಲ್ಲು ಸುರಿಯಬಾರದು. ಆಲಿಕಲ್ಲಿನಿಂದ ಕಾಫಿ ಹಾಗೂ ಕಾಳುಮೆಣಸಿಗೆ ಕೊಳೆರೋಗ ತಗಲುವ ಸಾಧ್ಯತೆಯಿದೆ. ಜತೆಗೆ, ಮುಂದಿನ ವರ್ಷದ ಫಸಲಿನ ಮೇಲೂ ಪರಿಣಾಮ ಬೀರಲಿದೆ’ ಎಂದು ಬೆಳೆಗಾರರು ಅಭಿಪ್ರಾಯಪಟ್ಟಿದ್ದಾರೆ.