ಇಂದು ರಾತ್ರಿಯಿಂದಲೇ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ

ಇಂದು ರಾತ್ರಿಯಿಂದಲೇ ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತೆಲಂಗಾಣ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಬಂಗಾಳಕೊಲ್ಲಿ ವಾಯುವ್ಯ ಪ್ರಾಂತದಿಂದ ತಮಿಳುನಾಡು ಮೂಲಕ ರಾಯಲಸೀಮವರೆಗೂ ಮಾರುತಗಳು ಬಲಹೀನಗೊಂಡಿವೆ. ಹೀಗಾಗಿ ನಾಲ್ಕು ರಾಜ್ಯಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ತೆಲಂಗಾಣ ಹವಾಮಾನ ಇಲಾಖೆ ಅಧಿಕಾರಿ ರಾಜಾರಾವು ಎಚ್ಚರಿಕೆ ನೀಡಿದ್ದಾರೆ.

Also read  Coffee Board announces India's best coffee growers

ಮೋಡ ಕವಿದ ವಾತವಾರಣವಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆಂಧ್ರದ ಸಮುದ್ರ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಆಂಧ್ರ ಹವಾಮಾನ ಕೇಂದ್ರಕ್ಕೆ, ತೆಲಂಗಾಣ ಹವಾಮಾನ ಇಲಾಖೆ ಮಾಹಿತಿ ನೀಡಿದೆ.