ಮುಂದಿನ 24 ಗಂಟೆ ಮಳೆ ಮುನ್ಸೂಚನೆ:ಕರಾವಳಿ ಮಲೆನಾಡಿನಲ್ಲಿ ಭಾರೀ ಮಳೆ ಸಾಧ್ಯತೆ

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಮತ್ತು  ಮಲೆನಾಡಿನ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಭಾರೀ ಮಳೆ ನಿರೀಕ್ಷಿಸಲಾಗಿದೆ. ಹಾಗೆಯೇ ಉತ್ತರ ಒಳನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣದಿಂದ ಉತ್ತಮ ಅಥವ ಜೋರು ಮಳೆಯಾಗುವ ಸಂಭವವಿರುತ್ತದೆ.ಉಳಿದಂತೆ  ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಅಲ್ಲಲ್ಲಿ ಚದುರಿದಂತೆ  ಹಗುರ ಅಥವ ಉತ್ತಮ ಮಳೆಯಾಗುವ ಸಂಭವವಿರುತ್ತದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ,ಉಡುಪಿ,ಉತ್ತರಕನ್ನಡ ದಲ್ಲಿ ಭಾರಿ ಮಳೆಯಾಗುವ ಸಂಭವವಿರುತ್ತದೆ.

ಮಂಗಳೂರು,ಉಡುಪಿ,ಪುತ್ತೂರು,ಸುಳ್ಯ,ಬೆಲ್ತಂಗಡಿ,ಬಂಟ್ವಾಳ,ಕಾರ್ಕಳ,ಕುಂದಾಪುರ,ಭಟ್ಕಳ್,ಹೊನ್ನಾವರ,ಅಂಕೋಲಾ,ಸಿದ್ದಾಪುರ,ಹೊಸನಗರ,ಸಿರಿಸಿ,ಯೆಲ್ಲಾಪುರ,ಸುಪದಲ್ಲಿ ವ್ಯಾಪ್ತಿಯಲ್ಲಿ ಬಾರಿ ಮಳೆಯಾಗುವ ಸಂಭವವಿರುತ್ತದೆ.

Also read  ಕೊಡಗು,ಸಕಲೇಶಪುರ,ಚಿಕ್ಕಮಗಳೂರಿನಲ್ಲಿ ಹೊಸ ಟ್ರೆಂಡ್‌ 'ವೀಕೆಂಡ್‌ ವಿತ್‌ ಲ್ಯಾಂಡ್‌'- ಏನಿದು ?

ಮಲೆನಾಡು ಪ್ರದೇಶದ ಸಕಲೇಶಪುರ,ಮಡಿಕೇರಿ, ವೀರರಾಜಪೇಟೆ,ಮೂಡಿಗೆರೆ,ಚಿಕ್ಕಮಗಳೂರು, ಕೊಪ್ಪ,ಎನ್.ಆರ್.ಪುರ, ತೀರ್ಥಹಳ್ಳಿ,ಸಾಗರ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುವ ಸಂಭವವಿರುತ್ತದೆ.

ಉತ್ತರ ಒಳನಾಡು ಜಿಲ್ಲೆಗಳಾದ ಬೀದರ್,ಕಲಬುರ್ಗಿ,ಗದಗ,ವಿಜಯಪುರ,ಯಾದಗಿರಿ,ಬಾಗಲಕೋಟೆ,ಬೆಳಗಾವಿ,ಹುಬ್ಬಳ್ಳಿ-ಧಾರವಾಡ,ಕೊಪ್ಪಳ,ಬಳ್ಳಾರಿ,ರಾಯಚೂರು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುವ  ಸಂಭವವಿರುತ್ತದೆ.

Also read  Cardamom futures rise on improved export and spot demand

Rainfall Forecast: Widespread with heavy rains likely over Coastal Karnataka and adjoining parts of Malnad districts. Widespread with Moderate to heavy rains likely over NIK districts. Whereas, isolated light to moderate rains likely over SIK during Next 24 hrs.