ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಂಭವವಿರುತ್ತದೆ.

ಮಲೆನಾಡು ಭಾಗದ ಸೋಮವಾರಪೇಟೆ,ಮಡಿಕೇರಿ,ಹಾಸನ,ಬೇಲೂರು,ಹೊಳೆನರಸೀಪುರ,ಅರಕಲಗೋಡು ಭಾರಿ ಮಳೆಯಾಗುವ ಸಂಭವವಿರುತ್ತದೆ.

ದಕ್ಷಿಣಕನ್ನಡ,ಉತ್ತರಕನ್ನಡ,ಗದಗ,ಬಾಗಲಕೋಟೆ,ಬೆಳಗಾವಿ,ಕಲಬುರ್ಗಿ,ವಿಜಯಪುರ,ಯಾದಗಿರಿ,ಕೊಪ್ಪಳ,ಬಳ್ಳಾರಿ,ರಾಯಚೂರು,ಚಿತ್ರದುರ್ಗ,ದಾವಣಗೆರೆ,ಮಂಡ್ಯ,ತುಮಕೂರು,ಚಿಕ್ಕಬಳ್ಳಾಪುರ,ಚಾಮರಾಜನಗರ,ರಾಮನಗರ,ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಕೆಲವೆಡೆ ಹಗುರ ಮಳೆಯಾಗುವ ಸಂಭವವಿರುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಇವತ್ತು(29 ಏಪ್ರಿಲ್ 2019 ) ಬೆಳಿಗ್ಗೆ 8.30 ರಿಂದ ಸಂಜೆ 4.30 ವರೆಗೆ  ಚಿಕ್ಕಮಗಳೂರು ಜಿಲ್ಲೆಯ  ಮುಗ್ತಿಹಳ್ಳಿ  ಯಲ್ಲಿ ಗರಿಷ್ಠ 48ಮಿಮಿ ಮಳೆಯಾಗಿದೆ.

Also read  ಮುಂಗಾರು ಪೂರ್ವ ಮಳೆ:ಮಂಡ್ಯ,ಮೈಸೂರು ಮತ್ತು ಬೆಂಗಳೂರು ಸುತ್ತಮುತ್ತ ಭಾರೀ ಮಳೆ