ಮುಂದಿನ 24 ಗಂಟೆ ಮಳೆ ಮುನ್ಸೂಚನೆ:ಕರಾವಳಿ ಜಿಲ್ಲೆಗಳಲ್ಲಿ ಬಿರಿಸುಗೊಳ್ಳುವ ಲಕ್ಷಣ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮುಂಗಾರು ಬಿರಿಸುಗೊಳ್ಳುವ ಸಂಭವವಿದ್ದು ಉತ್ತಮದಿಂದ ಭಾರಿ ಮಳೆಯಾಗುವ ಸಂಭವವಿರುತ್ತದೆ

ಇನ್ನು ಕರಾವಳಿಗೆ ಹೊಂದಿಕೊಂಡ ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣದಿಂದ ಉತ್ತಮ ಮಳೆಯಾಗಲಿದೆ

ಒಳನಾಡು ಜಿಲ್ಲೆಗಳಿಗೆ ಅಲ್ಲಲ್ಲಿ ಚದುರಿದಂತೆ ಸಾಧರಣ ಮಳೆಯಾಗುವ ಸಂಭವವಿರುತ್ತದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ,ಉಡುಪಿ,ಉತ್ತರಕನ್ನಡ ಮತ್ತು ಮಲೆನಾಡು ಜಿಲ್ಲೆಗಳಾದ ಮಡಿಕೇರಿ,ಚಿಕ್ಕಮಗಳೂರು,ಹಾಸನ,ಶಿವಮೊಗ್ಗ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುವ ಸಂಭವವಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು,ಬೆಳ್ತಂಗಡಿ  ತಾಲ್ಲೂಕು ಹಾಗು ಉಡುಪಿ ಜಿಲ್ಲೆಯ ಕಾರ್ಕಳ,ಉಡುಪಿ,ಕುಂದಾಪುರ ಸುತ್ತಮುತ್ತ ಭಾರಿ ಮಳೆಯಾಗುವ ಸಂಭವವಿರುತ್ತದೆ.ಹಾಗೆಯೆ ಉತ್ತರಕನ್ನಡ ಜಿಲ್ಲೆಯ ಭಟ್ಕಳ,ಕುಮಟಾ,ಹೊನ್ನಾವರ,ಅಂಕೋಲಾ,ಸಿರ್ಸಿ ತಾಲೂಕುನಾದ್ಯಂತ ಉತ್ತಮದಿಂದ ಭಾರಿ ಮಳೆಯಾಗುವ  ಸಂಭವವಿರುತ್ತದೆ

Widespread moderate to heavy rains likely over Coastal Karnataka & adjoining parts of Malnad region and isolated to scattered light to moderate rains likely over interior Karnataka districts.

ಇನ್ನು ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಸರಕಾರದ ಯೋಜನೆ ಕೈ ಬಿಡಲು ಒತ್ತಾಯಿಸಿ ಮಳೆ ನಡುವೆ ಸೋಮವಾರ ಪಟ್ಟಣದಲ್ಲಿ ಸ್ವಾಮೀಜಿ ಮತ್ತು ಧರ್ಮಗುರುಗಳ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ನಾಗರಿಕರು ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ಉಪತಹಸೀಲ್ದಾರ್‌ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಶರಾವತಿ ಯೋಜನೆ ವಿರೋಧಿಸಿ ಸಾಗರ ರಸ್ತೆಯಿಂದ ವಿನಾಯಕ ವೃತ್ತಕ್ಕೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಶರಾವತಿ ಉಳಿಸಿ. ಜೀವ ವೈವಿಧ್ಯ ಸಂರಕ್ಷಿಸಿ. ಶರಾವತಿ ನಮ್ಮವಳು ನಮ್ಮ ಜೀವನಾಡಿ, ಅವಳನ್ನು ಉಳಿಸಿಕೊಳ್ಳಲು ಕಾಲೇಜ್‌ ಬಿಟ್ಟೇವೂ ಹನಿ ನೀರು ಹರಿಸಲು ಬಿಡೆವು ಎಂಬ ಘೋಷಣೆ ಮೊಳಗಿದವು.

 

Also read  ಕೊಡಗಿನಲ್ಲಿ ಆಲಿಕಲ್ಲು ಸಹಿತ ಬಾರಿ ಮಳೆ:ಬೆಳೆಗಾರರ ಆತಂಕ