ಕೊಡಗು:ಬೆಳೆಹಾನಿ ಪರಿಹಾರವನ್ನು ಪಡೆಯುವಂತೆ ರೈತರಿಗೆ ಮನವಿ

ಕಳೆದ 2018ನೇ ಸಾಲಿನ ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಬೆಳೆಹಾನಿ ಸಂಭವಿಸಿದ್ದು, ರಾಜ್ಯ ಸರಕಾರ ಬೆಳೆಹಾನಿ ಪರಿಹಾರ ಘೋಷಿಸಿದೆ.ಆದರೆ,ಪರಿಹಾರಕ್ಕಾಗಿ ಕೆಲವೇ ಮಂದಿ ಅರ್ಜಿ ಸಲ್ಲಿಸಿದ್ದು, ಉಳಿದವರು ಕೂಡಲೇ ಕಂದಾಯ ಇಲಖೆಗೆ ಅರ್ಜಿಯನ್ನು ಸಲ್ಲಿಸಿ ಪರಿಹಾರವನ್ನು ಪಡೆದು ಕೊಳ್ಳಬೇಕೆಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪನವರು ತಿಳಿಸಿದ್ದಾರೆ.

ಕಳೆದ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಕೊಡಗಿನ ಕೆಲವೆಡೆಗಳಲ್ಲಿ ಸಂಭವಿಸಿದ ಭೀಕರ ಪ್ರಕೃತಿ ವಿಕೋಪದಲ್ಲಿ ನೂರಾರು ಮಂದಿ ಆಸ್ತಿಪಾಸ್ತಿ ಕಳೆದುಕೊಂಡು ಸಂತ್ರಸ್ತರಾದರು. ನಾಪೆæäೕಕ್ಲು ವ್ಯಾಪ್ತಿಯಲ್ಲೂ ಅತಿವೃಷ್ಟಿಯಿಂದ ರೈತರು ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದಿದ್ದ ಅಪಾರ ಪ್ರಮಾಣದ ಕಾಫಿ, ಕರಿಮೆಣಸು,ಭತ್ತ ಸೇರಿದಂತೆ ಅಪಾರ ಪ್ರಮಾಣದ ಕೃಷಿ ಫಸಲುಗಳು ನಾಶಗೊಂಡಿದ್ದವು.   

Also read  Cyclone Gaja hits hard Arabica coffee in Karnataka and Tamil Nadu

ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಕೃಷಿ ಫಸಲುಗಳಿಗೆ ರಾಜ್ಯ ಸರಕಾರ ಬೆಳೆಹಾನಿ ಪರಿಹಾರವಾಗಿ 100 ಕೋಟಿ ಘೋಷಿಸಿತ್ತು. ಇದಕ್ಕಾಗಿ ಆಧಾರ್‌ಕಾರ್ಡ್‌,ಆರ್‌ಟಿಸಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಕಂದಾಯ ಇಲಾಖೆಗೆ ಸಲ್ಲಿಸುವ ಮೂಲಕ ಬೆಳೆಪರಿಹಾರವನ್ನು ಪಡೆಯುವಂತೆ ರೈತರಿಗೆ ಕಂದಾಯ ಇಲಾಖೆ ಮನವಿ ಮಾಡಿತ್ತು. ಆದರೆ,ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಹಾನಿ ಪರಿಹಾರಕ್ಕೆ ನಾಪೋಕ್ಲು ವ್ಯಾಪ್ತಿಯಲ್ಲಿ ರೈತರು ಹಾಗೂ ಬೆಳೆಗಾರರಿಂದ ಅರ್ಜಿ ಸಲ್ಲಿಕೆಯಾಗದಿರುವುದು ಇಲಾಖೆಯ ಮೂಲಗಳಿಂದ ತಿಳಿದುಬಂದಿದ್ದು,ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಘೋಷಿಸಿರುವ ಬೆಳೆಹಾನಿ ಪರಿಹಾರ ಪಡೆಯಲು ಬೆಳೆಗಾರರು ಹಾಗೂ ಕೃಷಿಕರು ಅಗತ್ಯ ದಾಖಲೆಗಳೊಂದಿಗೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆಯಲ್ಲಿ ಅವರು ಮನವಿ ಮಾಡಿದ್ದಾರೆ.       

Also read  Coffee – Weekly Roundup 5/May/17