ಮಡಿಕೇರಿ ಸುತ್ತಮುತ್ತ ತಂಪೆರೆದ ಮಳೆ:ಕಾಫಿ ಬೆಳೆಗಾರರಿಗೆ ವರದಾನ

ಮಡಿಕೇರಿ ತಾಲೂಕು ಸುತ್ತಮುತ್ತ ಭಾನುವಾರ ಮಧ್ಯಾಹ್ನ 2ರ ಸುಮಾರಿಗೆ ಉತ್ತಮ ಮಳೆ ಸುರಿದು ವಾತಾವರಣವನ್ನು ತಂಪಾಗಿಸಿತು.   

ನಾಪೆæäೕಕ್ಲು ಸುತ್ತಮುತ್ತ 15 ಮಿ.ಮೀ.ಗೂ ಅಧಿಕವಾಗಿ ಉತ್ತಮ ಮಳೆ ಸುರಿದಿದೆ. ಇದರಿಂದಾಗಿ ಸುಮಾರು ಒಂದು ತಿಂಗಳಿನಿಂದ ಬಿಸಿಲಿನ ಬೇಗೆಯಲ್ಲಿ ಬಸವಳಿದ ಜನರು ಖುಷಿಪಟ್ಟರು. ಮಳೆಯು ಕಾಫಿ ಬೆಳೆಗಾರರಿಗೆ ವರದಾನವಾಗಿದೆ. 

ಕಳೆದ ಮಳೆಯಿಂದ ಅರಳಿದ ಕಾಫಿ ಹೂಗಳು ಬಾಡುವ ಮೊದಲೇ ವರುಣನ ಆಗಮನವಾಗಿದ್ದು, ಕಾಫಿ ಬೆಳೆಗಾರರು ನಿಟ್ಟುಸಿರು ಬಿಡುವಂತಾಗಿದೆ. 

ನಾಪೆæäೕಕ್ಲು ಪಟ್ಟಣದಲ್ಲಿ ಸ್ವಲ್ಪ ಮಟ್ಟಿಗೆ ಆಲಿಕಲ್ಲು ಮಳೆಯಾಗಿದೆ. ಜಿಲ್ಲಾ ಕೇಂದ್ರ ಮಡಿಕೇರಿ, ಮೂರ್ನಾಡು ಭಾಗದಲ್ಲಿ ಮೋಡಕವಿದ ವಾತಾವರಣವಿತ್ತು.

Also read  ನಿಮ್ಮ ಮೊಬೈಲ್ ಗೆ ಬರಲಿದೆ ಗುಡುಗು-ಮಳೆಯ ಸಂಪೂರ್ಣ ಮಾಹಿತಿ