Featured NewsKrushi

ರೈತರ ಖಾತೆಗೆ ಮೋದಿ ಸರ್ಕಾರದಿಂದ ಹಣ: ಹೊಸ ಷರತ್ತೇನು? ಇಲ್ಲಿದೆ ವಿವರ

ಇತ್ತೀಚಿನ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಲಾದ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ಮೊದಲ ಕಂತಿನ 2,000 ರೂ. ಬಿಡುಗಡೆಗೆ ಸಣ್ಣ ಮತ್ತು ಸೀಮಿತ ರೈತರು ಆಧಾರ್ ನೀಡುವುದು ಕಡ್ಡಾಯವಲ್ಲ ಎಂದು ಕೇಂದ್ರ ಸರಕಾರ ತಿಳಿಸಿದೆ.ಆದರೆ ಮುಂದಿನ ಕಂತಿನ ಹಣವನ್ನು ಪಡೆಯಲು ರೈತರು ತಮ್ಮ ಗುರುತನ್ನು ದೃಢೀಕರಿಸಲು ಆಧಾರ್ ನೀಡುವುದು ಕಡ್ಡಾಯವೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

5 ಎಕರೆಗಿಂತ ಕಡಿಮೆ ಕೃಷಿ ಭೂಮಿ ಹೊಂದಿರುವ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ವಾರ್ಷಿಕ 6,000 ರೂ. ಸಹಾಯಧನ ಒದಗಿಸಲಾಗುತ್ತದೆ. ಅದರ ಪೈಕಿ ಮೂರು ಕಂತುಗಳಲ್ಲಿ ತಲಾ 2,000 ರೂ. ಸಹಾಯಧನ ಒದಗಿಸಲಾಗುತ್ತದೆ.

Also read  ಬಜೆಟ್ 2019: ಸಣ್ಣ ರೈತರ ಖಾತೆಗೆ ₹6 ಸಾವಿರ ,ವಿವರ ಹೀಗಿದೆ

ಮೊದಲನೇ ಕಂತಿನ 2,000 ರೂ.ಸಹಾಯಧನ ಪಡೆಯಲು ಆಧಾರ್ ಇಲ್ಲದ ರೈತರು ತಾತ್ಕಾಲಿಕವಾಗಿ ಪರ್ಯಾಯ ಗುರುತಿನ ದಾಖಲೆ ಒದಗಿಸಬಹುದಾಗಿದೆ.ವೋಟರ್ ಐಡಿ, ನರೇಗಾ ಕಾರ್ಡ್, ವಾಹನ ಚಾಲನಾ ಪರವಾನಗಿ ಅಥವಾ ಕೇಂದ್ರ ಇಲ್ಲವೆ ರಾಜ್ಯ ಸರಕಾರ ಕೊಡಮಾಡಿದ ಯಾವುದಾದರೂ ಫೋಟೋ ಸಹಿತ ಗುರುತಿನ ಚೀಟಿ ಒದಗಿಸುವುದು ಕಡ್ಡಾಯವಾಗಿದೆ.ಆದರೆ ಮುಂದಿನ ಬಾರಿ ಸಹಾಯಧನ ಪಡೆಯಲು ಆಧಾರ್ ಸಂಖ್ಯೆಯ ನೀಡಬೇಕಿದೆ. 

ಹೀಗಾಗಿ ಆಧಾರ್ ಇಲ್ಲದ ರೈತರಿಗೆ ಮೊದಲ ಕಂತು ಪಡೆಯಲು ಪರ್ಯಾಯ ದಾಖಲೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. 

ಸಂಪೂರ್ಣವಾಗಿ ಕೇಂದ್ರ ಸರಕಾರದಿಂದ ಭರಿಸಲಾಗುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಈ ವರ್ಷದಿಂದ ಜಾರಿಗೆ ಬರಲಿದ್ದು ಮಾರ್ಚ್‌ನಲ್ಲಿ ಮೊದಲ ಕಂತಿನ ಹಣ ಬಿಡುಗಡೆಯಾಗಲಿದೆ.

Union Budget 2019: Goyal announced that the government will provide assured income support to small and marginal farmers, PM Kisan Samman Nidhi has been approved. Under the scheme, small farmers have up to 2 hectare land will get direct income support of Rs 6000 per year. This income support will be transferred directly into the bank account of beneficiary farmers in three installments of Rs 2000 each and it will be totally funded by government of India.

Leave a Reply