ಶ್ರೀಲಂಕಾ ಕರಿಮೆಣಸು ಆಮದು ನಿಷೇಧ:ಉತ್ತಮ ಬೆಲೆ ನಿರೀಕ್ಷೆ

ಶ್ರೀಲಂಕಾ ತನ್ನ 20 ಲಕ್ಷ ಬೆಳೆಗಾರರ ಹಿತಾಸಕ್ತಿ ದೃಷ್ಟಿಯಿಂದ ಕಾಳು ಮೆಣಸು,ಅಡಕೆ,ಅರಿಷಿಣ ಶುಂಠಿ ಇತ್ಯಾದಿ ಹಲವಾರು ಕೃಷಿ ಉತ್ಪನ್ನಗಳ ಆಮದು ಮತ್ತು ಮರು ರಫ್ತಿಗೆ 2019ರ ಮಾರ್ಚ್ 21ರಂದು ನಿರ್ಬಂಧಿಸಿತ್ತು. ಈಗ ದ್ವೀಪ ರಾಷ್ಟ್ರದ ಹೊಸ ಸರ್ಕಾರವು ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಅಧಿಕೃತ ಗೆಜೆಟ್ ಅಧಿಸೂಚನೆ ಜಾರಿಗೆ ಬಂದಿದೆ .ಶ್ರೀಲಂಕಾ ತನ್ನ ರೈತರ ಹಿತದೃಷ್ಟಿಯಿಂದ ಕೃಷಿ ಉತ್ಪನ್ನಗಳ ಆಮದು-ರಫ್ತನ್ನು ನಿಷೇಧಿಸಿರುವುದು ಭಾರತದ ಮೇಲೆ ಸಕರಾತ್ಮಕ ಪರಿಣಾಮ ಬೀರಲಿದೆ.ಅದರಲ್ಲೂ ಮುಖ್ಯವಾಗಿ ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಕರ್ನಾಟಕದ ಮತ್ತು ಕೇರಳದ ರೈತರಿಗೆ ಅನುಕೂಲವಾಗುವ ಸಾಧ್ಯತೆಯಿದೆ.

ಇದುವರೆಗೆ ವಿಯೆಟ್ನಾಂನಲ್ಲಿ ಅಗ್ಗದ ದರದಲ್ಲಿ ಸಿಗುವ ಕಾಳುಮೆಣಸು ಶ್ರೀಲಂಕಾಗೆ ಲಗ್ಗೆ ಇಟ್ಟು, ಅಲ್ಲಿಂದ ನಂತರ ಭಾರತದ ಮಾರುಕಟ್ಟೆಗೆ ರಫ್ತಾಗುತ್ತಿತ್ತು.

Also read  Vietnam coffee growers expecting record crop next season
 

”ವಿಯೆಟ್ನಾಂನಿಂದ ನೇರವಾಗಿ ಭಾರತಕ್ಕೆ ಕಾಳು ಮೆಣಸು ಆಮದಿಗೆ ಶೇ.51ರಷ್ಟು ತೆರಿಗೆ ಇದೆ. ಆದರೆ ಲಂಕಾ ಮಾರ್ಗವಾಗಿ ಬಂದರೆ ಕೇವಲ ಶೇ.8ರ ಸುಂಕ. ಭಾರತ-ಲಂಕಾ ನಡುವೆ ಸಾಫ್ಟಾ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಇರುವುದು ಇದಕ್ಕೆ ಕಾರಣ. ಆದರೆ ಇತರ ರಾಷ್ಟ್ರಗಳ ಕಳಪೆ ಕಾಳುಮೆಣಸು ಆಮದು ಮತ್ತು ಮರು ರಫ್ತಿನ ಪರಿಣಾಮ ಲಂಕಾದ ಕಾಳುಮೆಣಸಿಗೂ ನಷ್ಟವಾಗಿತ್ತು. ಇದರಿಂದ ಅಲ್ಲಿನ ರೈತರೂ ಸಂಕಷ್ಟಕ್ಕೀಡಾಗಿದ್ದರು. ಹೀಗಾಗಿ ಆಮದು ಮತ್ತು ಮರು ರಫ್ತನ್ನು ಅಲ್ಲಿನ ಸರಕಾರ ನಿಷೇಧಿಸಿದೆ” ಎನ್ನುತ್ತಾರೆ ಕಾಳುಮೆಣಸು ಬೆಳೆಗಾರರ ಸಂಘಟನೆಯ ಸಮನ್ವಯಕಾರರಾದ ಕೆ.ಕೆ ವಿಶ್ವನಾಥ್‌.

ಆದಾಗ್ಯೂ, ಇಂತಹ ಆಮದು ಸರಕುಗಳು ಇನ್ನೂ ಹಲವಾರು ಅಕ್ರಮ ಮಾರ್ಗಗಳಿಂದ ನೇಪಾಳ, ಮ್ಯಾನ್ಮಾರ್, ಬಾಂಗ್ಲಾದೇಶದ ಗಡಿಯ ಮೂಲಕ ರಸ್ತೆ ಮೂಲಕ ತಲುಪುತ್ತಿವೆ ಎಂದು ಕೊಚ್ಚಿ ಮೂಲದ ಕಿಶೋರ್ ಮಸಾಲೆಗಳ ಕಿಶೋರ್ ಶಾಮ್ಜಿ ಹೇಳಿದ್ದಾರೆ.

ಸಂಸತ್ತಿನಲ್ಲಿ ಮಂಡಿಸಲಾದ ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತದ ಕರಿಮೆಣಸು ಆಮದು ಏಪ್ರಿಲ್ ನಿಂದ ಆಗಸ್ಟ್ ವರೆಗೆ 10,990 ಟನ್ ಎಂದು ಅಂದಾಜಿಸಲಾಗಿದೆ. ದೇಶವು 2016-17ರಲ್ಲಿ 20,265 ಟನ್ ಕರಿಮೆಣಸು ಮತ್ತು 2017-18ರಲ್ಲಿ 29,650 ಟನ್ ಆಮದು ಮಾಡಿಕೊಂಡಿದೆ. ತಾತ್ಕಾಲಿಕ ಅಂಕಿ ಅಂಶವು 2018-19ರಲ್ಲಿ 24,950 ಟನ್‌ಗಳಷ್ಟಿತ್ತು.

Also read  ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆ:ಕುಸಿದ ಕಾಳು ಮೆಣಸಿನ ಬೆಲೆ