ಕೊಂಚ ಚೇತರಿಸಿಕೊಂಡ ಕಾಳು ಮೆಣಸು

ಇಲ್ಲಿನ ಕೊಚ್ಚಿ ಮಾರುಕಟ್ಟೆಯಲ್ಲಿ ಶನಿವಾರ ಮಧ್ಯಾಹ್ನ ಕೊನೆಗೊಂಡ ವಾರದ ಕೊನೆಯ ವಹಿವಾಟಿನಲ್ಲಿ ಒಳ್ಳೆ ಬೇಡಿಕೆಯಿಂದ ಕಾಳು ಮೆಣಸಿನ ಬೆಲೆಗಳು ಕೊಂಚ ಚೇತರಿಸಿಕೊಂಡವು.

Also read  Karnataka becomes leading pepper producer in country:Spices Board

ಎಲ್ಲಾ ಪ್ರಭೇದಗಳ ಮೆಣಸು ಬೆಲೆಗಳು ಕೊಚ್ಚಿ ವಹಿವಾಟಿನಲ್ಲಿ  ಪ್ರತಿ ಕೆ.ಜಿ.ಗೆ 4 ರೂ.ಗಳ ಹೆಚ್ಚಳವನ್ನು ವರದಿ ಮಾಡಿದೆ.

ಕೊಚ್ಚಿ ಮೆಣಸು ವ್ಯಾಪಾರಿ ಕಿಶೋರ್ ಶಮ್ಜಿ ಪ್ರಕಾರ, ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಮೆಣಸಿನ ಆಗಮನವು ಕುಗ್ಗುವ ನಿರೀಕ್ಷೆಯಿದೆ, ಏಕೆಂದರೆ ಆಮದುದಾರರು ಮತ್ತು ರೈತರು ಬೆಲೆಗಳು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಲ್ಲಿ ತಮ್ಮ ಬೆಳೆಗಳನ್ನು ಹಿಡಿದಿಡಲು ಪ್ರಾರಂಭಿಸಿದ್ದಾರೆ.

Also read  Black Pepper Prices stays firm

ಆಮದಿನ ಮೇಲೆ ಸರ್ಕಾರ ನಿರ್ಬಂಧ ಹೇರಿದ್ದರೆ,ಮೆಣಸು ಬೆಲೆ ಮೊದಲೇ ಏರಿಕೆಯಾಗುತ್ತಿತ್ತುಯೆಂದು ಶಮ್ಜಿ ಹೇಳಿದರು. ಭಾರತದಲ್ಲಿ, ದೇಶೀಯ ಬೇಡಿಕೆಯು ವಿನಾಯಕ ಚತುರ್ಥಿಯಿಂದ ಪ್ರಾರಂಭವಾಗುತ್ತದೆ ಮತ್ತು ನಂತರ ನವರಾತ್ರಿ,ದೀಪಾವಳಿ ಮತ್ತು ಹೊಸ ವರ್ಷದ ತನಕ ಮುಂದುವರೆಯುತ್ತದೆ.

ಎಂಜಿ 1 ದರ್ಜೆಯು ಪ್ರತಿ ಕೆ.ಜಿ.ಗೆ 335 ರೂ . ಎಂಜಿ 2 ದರ್ಜೆಯು ಪ್ರತಿ ಕೆ.ಜಿ.ಗೆ 315 ರೂ.

ಹೊಸ ಮೆಣಸು (ಹೆಚ್ಚಿನ ತೇವಾಂಶ ಹೊಂದಿರುವ ಗುಣಮಟ್ಟ) ಪ್ರತಿ ಕೆ.ಜಿ.ಗೆ 300 ರೂ.

Also read  Pepper stays steady on matching supply and demand