ಮಂದಗತಿಯಲ್ಲಿ ಸಾಗಿದ ಕಾಳುಮೆಣಸಿನ ವಹಿವಾಟು

ಇಲ್ಲಿನ ಕೊಚ್ಚಿಯ ಮೆಣಸು ಮಾರುಕಟ್ಟೆಯಲ್ಲಿ ಗುರುವಾರ ಮಂದಗತಿಯಲ್ಲಿ ಸಾಗಿದ ಚಟುವಟಿಕೆಗಳಿಂದ ಕೇವಲ ಆರು ಟನ್ ಮಾತ್ರ ವಹಿವಾಟು ನಡೆಯಿತು.

ನೆಡೆದ ಎಲ್ಲಾ ವಹಿವಾಟಿನಲ್ಲಿ ಖರೀದಿದಾರರು ಮತ್ತು ಮಾರಾಟಗಾರರು ಬೆಲೆಗಳಲ್ಲಿ ಒಮ್ಮತಕ್ಕೆ ಬರಲು ಸಾಧ್ಯವಾಗದ ಕಾರಣ ಯಾವುದೇ ಹೆಚ್ಚು ವ್ಯಾಪಾರ ನೆಡೆಯಲಿಲ್ಲ. ಖರೀದಿದಾರರು ವಯನಾಡಿನ ಮೆಣಸಿಗೆ ಕೆಜಿ ಗೆ ರೂ 330ಕ್ಕೆ ಖರೀದಿಗೆ ಮುಂದಾದರೂ ಮಾರಾಟಗಾರರು ಮಾತ್ರ ಕೆಜಿ ಗೆ ರೂ 335 ಕ್ಕೆ ಬೇಡಿಕೆ ಇಟ್ಟರು.

Also read  Coffee districts of Karnataka — Kodagu, Chikkamagalur and Hassan are ‘Pest Affected Areas’ for 5 years: State government

ವಿಯೆಟ್ನಾಂನಿಂದ ಶ್ರೀಲಂಕಾ ಮಾರ್ಗವಾಗಿ ಭಾರತಕ್ಕೆ ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಕೆಜಿಗೆ  500 ರಂತೆ ಆಮದು ಮಾಡಿಕೊಳ್ಳುವುದಕ್ಕೆ ಅವಕಾಶವಿದ್ದರು ಅಗ್ಗದ ದರದಲ್ಲಿ ತಡೆರಹಿತವಾಗಿ ಮುಂದುವರೆದಿದೆ. ಇದು ಮೆಣಸು ಕೃಷಿ ಸಮುದಾಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಸಂಸತ್ತಿನಲ್ಲಿ ಚುನಾಯಿತ ಎಲ್ಲ ಪ್ರತಿನಿಧಿಗಳು ಈ ವಿಷಯವನ್ನು ಕೈಗೆತ್ತಿಕೊಂಡರು, ಇದುವರೆಗೆ ಯಾವುದೇ ಪ್ರಯೋಜನವಿಲ್ಲ ಎಂದು ಕೊಚ್ಚಿ ವ್ಯಾಪಾರಿ ಕಿಶೋರ್ ಶಮ್ಜಿ  ಅವರು ಹೇಳಿದರು.    

 

ಕೊಚ್ಚಿ ಮಾರುಕಟ್ಟೆಯಲ್ಲಿ ಮೆಣಸಿನ ದರ:

ಅನ್-ಗಾರ್ಬಲ್ಡ್ ರೂ .333; 

ಎಂಜಿ 1 ರೂ .353; 

ಹೊಸ ಮೆಣಸು – ರೂ .318.

Also read  ವಿಯೆಟ್ನಾಮ್ನಲ್ಲಿ ಕಾಫಿ ಮತ್ತು ಕಾಳುಮೆಣಸು ಕೃಷಿ