Featured NewsKrushiResearch Articles

ಕಾಳುಮೆಣಸಿನಲ್ಲಿ ಅನುಸರಿಸಬೇಕಾದ ಮಾಸಿಕ ಕಾರ್ಯಚಟುವಟಿಕೆಗಳು

ಜನವರಿ

  • ಉತ್ತಮ ಗುಣಮಟ್ಟಕ್ಕಾಗಿ ಪೋಟ್ಯಾಷಿಯಂ ನೈಟ್ರೇಟ್‌ (1 ಕೆ.ಜಿ. 200 ಲೀಟರ್‌ ನೀರಿಗೆ) ದ್ರಾವಣವನ್ನು ಗೊಂಚಲುಗಳ ಮೇಲೆ ಸಿಂಪಡಿಸುವುದು.

ಫೆಬ್ರವರಿ

  • ಬುಡದಲ್ಲಿ ಬೆಳೆದಿರುವ ಹರಿಯುವ ಬಳ್ಳಿಗಳನ್ನು ಕತ್ತರಿಸಿ ತೆಗೆದು ನರ್ಸರಿ ಬಳಸುವುದು.

ಮಾರ್ಚ್

  • ಕಾಳು ಮೆಣಸಿನ ಕಟಾವನ್ನು ಪ್ರಾರಂಭಿಸುವುದು

ಏಪ್ರಿಲ್

  • ಪೂರ್ತಿ ಒಣಗಿರುವ ಬಳ್ಳಿಗಳನ್ನು ಕಿತ್ತು ಸುಟ್ಟು ಹಾಕುವುದು.
  • ಮೊದಲ ಮಳೆಯ ನಂತರ ಬಳ್ಳಿಗಳ ಬುಡಕ್ಕೆ 250 ಗ್ರಾಂ ಸುಣ್ಣವನ್ನು ಕೊಡುವುದು.
  • ಬಳ್ಳಿಗಳಿಗೆ 40-50 ಲೀಟರ್‌ ನಷ್ಟು ನೀರನ್ನು ಬಳ್ಳಿಯ ಬುಡಕ್ಕೆ ಕೊಡುವುದು.

ಮೇ

  • ಅತಿಯಾಗಿ ನೆರಳಿರುವ ಮರದ ರೆಂಬೆಗಳನ್ನು ಕತ್ತರಿಸಿ ತೆಗೆಯಬೇಕು.
  • ಪ್ರತಿ ವಾರಕ್ಕೊಮ್ಮೆ ಪ್ರತಿ ಬಳ್ಳಿಗೆ 40-50 ಲೀಟರ್‌ ನಷ್ಟು ನೀರು ಕೊಡುವುದು.
  • ಪ್ರತಿ ಬಳ್ಳಿಗೆ 20 ಗ್ರಾಂ ಘೋರೇಟ್‌ ಹರಳುಗಳನ್ನು ತಿಡವ ಬುಡಕ್ಕೆ ಹಾಕುವುದು.
  • 1 ಕೆ.ಜಿ. 19:19:19, 100 ಗ್ರಾ೦ ಬೋರಾನ್‌, 250 ಗ್ರಾಂ ಸತುವಿನ ಸಲ್ಫೇಟ್‌, 200 ಗ್ರಾ೦ ಮೆಗ್ನಿಷಿಯಂ ಸಲ್ಫೇಟ್‌ 200 ಲೀಟರ್‌ ನೀರಿನೊಂದಿಗೆ ಮಿಶ್ರಣ ಮಾಡಿ ಬಳ್ಳಿಗಳಿಗೆ ಸಿಂಪಡಿಸುವುದು.

ಜೂನ್

  • 75:125:150 ಗ್ರಾಂ ಸಾ.ರಂ.ಪೋ ರಸಾಯನಿಕ ಗೊಬ್ಬರವನ್ನು ಬುಡಕ್ಕೆ ಹಾಕುವುದು.
  • ಮೊದಲ ವಾರದಲ್ಲಿ ಬಳ್ಳಿಯ ಬುಡಕ್ಕೆ 50 ಗ್ರಾಮ ಟ್ರೈಕೋಡರ್ಮಾ ಮತ್ತು 25 ಗ್ರಾಂ ಮೈಕ್ರೋಬಿಯಲ್‌ ಕನ್ಸರ್ಷಿಯಂ,0.5 ಕೆ.ಜಿ. ಬೇವಿನ ಹಿಂಡಿಯೊಂದಿಗೆ ಮಿಶ್ರ ಮಾಡಿ ಹಾಕುವುದು.

ಜುಲೈ

  • ಶೇ. 1% ಬೋರ್ಡೋ ದ್ರಾವಣವನ್ನು ಸಿಂಪಡಿಸುವುದು

ಆಗಸ್ಟ್

  • ಶೀಘ್ರ ಸೊರಗು ರೋಗ ಲಕ್ಷಣಗಳು ಕಂಡ ಬಳ್ಳಿಗಳಿಗೆ ಸಿ.ಓ.ಸಿ. 3 ಗ್ರಾಂ ಪ್ರತೀ ಲೀಟರ್‌ ನೀರಿಗೆ ಅಥವಾ ಮೆಟಲ್ಯಾಕ್ಸಿಲ್‌- ಮ್ಯಾಂಕೋಜೆಬ್‌ 2 ಗ್ರಾಂ ಪ್ರಿ ಲೀಟರ್‌ ನೀರಿಗೆ ಸಿಂಪಡಿ

ಸೆಪ್ಟೆಂಬರ್-ಅಕ್ಟೋಬರ್

  • 2ನೇ ಬೋರ್ಡೋ ಸಿಂಪಡನೆ ಶೇ. 1% ರಂತೆ
    ಗೊಬ್ಬರ 75:125:150 ಗ್ರಾಂ ಸಾ.ರಂ.ಪೋ. ಪ್ರತಿ ಬಳ್ಳಿಗೆ ಹಾಕುವುದು

ನವೆಂಬರ್

  • ನೀರಿನಲ್ಲಿ ಕರಗುವ 19:19:19 ಗೊಬ್ಬರ 5 ಗ್ರಾಂ ಪ್ರತೀ ಲೀಟರ್‌ ನೀರಿನಲ್ಲಿ ಸಿ೦ಪಡಿಸುವುದು

ಡಿಸೆಂಬರ್

  • ಮಳೆಯನ್ನು ಆಧರಿಸಿ ನೀರನ್ನು ಬಳ್ಳಿಯ ಬುಡಕ್ಕೆ ಕೊಡಬೇಕು.
Also read  Coffee Prices (Karnataka) on 12-01-2022

Leave a Reply