ಮುಂಗಾರು ಮೋಡಗಳನ್ನು ಉತ್ತರದ ಕಡೆಗೆ ಹೊತ್ತೊಯ್ದ ‘ವಾಯು’

ಈ ಬಾರಿ ಮುಂಗಾರು ಮಳೆ ರಾಜ್ಯ ಪ್ರವೇಶಿಸಲು ‘ವಾಯು’ ಚಂಡಮಾರುತ ಅಡ್ಡಿಯಾಗಿ ಪರಿಣಮಿಸಿದ್ದು,ಮುಂಗಾರು ಪ್ರವೇಶ ಇನ್ನಸ್ಟು ತಡವಾಗಲಿದೆ.

ಜೂನ್ 8ರಂದೇ ಮುಂಗಾರು ಕೇರಳವನ್ನು ಪ್ರವೇಶಿಸಿದೆ. ಆದರೆ, ‘ವಾಯು’ ಚಂಡಮಾರುತ ತೀವ್ರಗೊಂಡು ಮೋಡಗಳನ್ನು ಉತ್ತರದ ಕಡೆಗೆ ಹೊತ್ತೊಯ್ದಿದೆ. ಹೀಗಾಗಿ ಮುಂಗಾರು ದುರ್ಬಲ ಗೊಂಡಿತು ಎಂದು ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆಯ ನಿರ್ದೇಶಕ ಜಿ.ಎಸ್. ಶ್ರೀನಿವಾಸ ರೆಡ್ಡಿ ತಿಳಿಸಿದರು.

ಜೂನ್‌ 13ರಂದು ಗೋವಾ, ಗುಜರಾತ್‌ ಕರಾವಳಿಯಲ್ಲಿ ಚಂಡಮಾರುತ ಹಾದು ಹೋಗಲಿದ್ದು, ನಂತರ ಅದು ದುರ್ಬಲವಾಗುವ ಸಾಧ್ಯತೆ ಇದೆ. ಇದರ ನಡುವೆಯೇ, ‌ಬುಧವಾರ ಅಥವಾ ಗುರುವಾರ ಮುಂಗಾರು ಅಧಿಕೃತವಾಗಿ ರಾಜ್ಯವನ್ನು ಪ್ರವೇಶಿಸಿದರೂ ಅಷ್ಟೇನೂ ಪ್ರಭಾವ ಬೀರುವುದಿಲ್ಲ. ಚಂಡಮಾರುತ ಸಂಪೂರ್ಣ ಕಡಿಮೆಯಾದರೆ ಜೂನ್ 16ರ ನಂತರ ಮುಂಗಾರು ಬಲಿಷ್ಠವಾಗುವ ಸಾಧ್ಯತೆ ಇದೆ ಎಂದರು.

Also read  ಮುಂದಿನ 24 ಗಂಟೆ ಮಳೆ ಮುನ್ಸೂಚನೆ:ಕರಾವಳಿ ಮಲೆನಾಡಿನಲ್ಲಿ ಮಳೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ