ಮಲೆನಾಡಿನಲ್ಲಿ ಮುಂಗಾರು ದುರ್ಬಲ:ಮಂಡ್ಯ,ಮೈಸೂರು ಕೃಷಿಕರಿಗೆ ಆತಂಕ

ಮಳೆಗಾಲ ಆರಂಭವಾಗಿ ಒಂದು ತಿಂಗಳು ಕಳೆದರೂ,ಮಳೆಯೂ ನಿರೀಕ್ಷಿಸಿದ ಮಟ್ಟದಲ್ಲಿ ಬರದ ಕಾರಣ ಹಲವೆಡೆಗಳಲ್ಲಿ ಕೃಷಿ ಕಾರ್ಯ ಕುಂಠಿತಗೊಂಡಿದೆ.

ಕೊಡಗು ಜಿಲ್ಲೆಯಲ್ಲಿ ಮಳೆಯಾಗದಿದ್ದರೇ,ದಕ್ಷಿಣದ ಜೀವನದಿ ಕಾವೇರಿ ಹರಿಯದೇ,ಮೈಸೂರು,ಮಂಡ್ಯ,ಬೆಂಗಳೂರು ಸೇರಿದಂತೆ ರಾಜ್ಯದ ಹಾಗೂ ತಮಿಳುನಾಡಿನ ಕೃಷಿಕರಿಗೆ ಕೃಷಿಗೂ ನೀರಿಲ್ಲದಾಗುತ್ತದೆ.ಕುಡಿಯುವ ನೀರಿಗೂ ಕೂಡ ಸಮಸ್ಯೆ ಎದುರಾಗಲಿದೆ.

ಸಾಮಾನ್ಯವಾಗಿ ಜುಲೈನಲ್ಲಿ ನಾಟಿ ಬಿತ್ತನೆ ಬೀಜಗಳನ್ನು ಹಾಕಲಾಗುತ್ತಿದ್ದು, ಜುಲೈ ಅಂತ್ಯದಲ್ಲಿ ಗದ್ದೆಯ ನಾಟಿ ಆರಂಭವಾಗಬೇಕಿತ್ತು.

ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು,ಇದೇ ಪರಿಸ್ಥಿತಿ ಮುಂದುವರಿದರೆ ಬೆಂಗಳೂರು,ಮೈಸೂರು ನಗರ ಹಾಗೂ ಈ ಭಾಗದ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಲಿದೆ.

Also read  ಇಂದಿನಿಂದ ಮೂರು ದಿನ ಗುಡುಗು ಸಹಿತ ಮಳೆ

ಕೆಆರ್‌ಎಸ್,ಹೇಮಾವತಿ,ಕಬಿನಿ,ಹಾರಂಗಿ ಜಲಾಶಯಗಳಲ್ಲಿ ಇರುವ ನೀರು ಜುಲೈ ಅಂತ್ಯದವರೆಗೆ ಕುಡಿಯಲು ಸಾಕಾಗಬಹುದು.ಅಷ್ಟರಲ್ಲಿ ಮಳೆ ಬಂದರೆ ಪರಿಸ್ಥಿತಿ ಸುಧಾರಿಸಬಹುದು.ಬೆಂಗಳೂರು,ಮೈಸೂರು,ಮಂಡ್ಯ,ರಾಮನಗರ,ತುಮಕೂರು ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಕಾಣಿಸಿಕೊಳ್ಳಲಿದೆ.