ಮಂಗನ ಕಾಯಿಲೆ: ಮಲೆನಾಡಿನಲ್ಲಿ ನೆಲಕಚ್ಚಿದ ಕೃಷಿ

ಮಲೆನಾಡು ಭಾಗದಲ್ಲಿ ಸಾವು, ಸಂಕಟಗಳ ಸರಮಾಲೆಯನ್ನೇ ಸೃಷ್ಟಿಸಿರುವ ಮಂಗನ ಕಾಯಿಲೆ ಹೊಸ ಹೊಸ ಪ್ರದೇಶಗಳಿಗೆ ಹಬ್ಬುತ್ತಿದ್ದು ಆತಂಕ ಹೆಚ್ಚುತ್ತಿದೆ. 

ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನ ಕೆಲ ವಸತಿ ಪ್ರದೇಶಗಳಲ್ಲಿ ಭೀತಿ ಆವರಿಸಿದೆ.

ಕಳೆದ ಬೇಸಿಗೆಯಲ್ಲಿ ಚುನಾವಣೆ ಸಿದ್ಧತೆಯಲ್ಲಿ ಅಂದಿನ ಸರಕಾರ ಮೈ ಮರೆತ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಬಾರದಂತೆ ಜನರಿಗೆ ಲಸಿಕೆ ನೀಡದೇ ಇದ್ದ ಪರಿಣಾಮವೇ ಬಾರಿ ರೋಗ ಬಹುಬೇಗ ಹರಡಿಕುಳಿತಿದೆ.

ಮಲೆನಾಡಿನ ಬಹುತೇಕ ಕಡೆ ಕೃಷಿಯೂ ನೆಲಕಚ್ಚಿದೆ. ಭಯಗ್ರಸ್ತ ಕೆಲವು ಜನ ಊರು ತೊರೆಯುತ್ತಿದ್ದಾರೆ.ಪ್ರವಾಸೋದ್ಯಮಕ್ಕೂ ಹೊಡೆತ ಬಿದ್ದಿದೆ.

ಅರಣ್ಯವನ್ನು ಹೊಂದಿರುವ ಎಲ್ಲ ಜಿಲ್ಲೆಗಳಲ್ಲೂ ಕಾಯಿಲೆಯ ಭೀತಿ ಶುರುವಾಗಿದೆ. ಸೋಂಕು ಕಾಣಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಉಡುಪಿ ಜಿಲ್ಲೆಯ ಕುಂದಾಪುರ, ಕಾರ್ಕಳ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಬನವಾಸಿ, ಸಿದ್ದಾಪುರ ಭಾಗಗಳಲ್ಲಿ ನಿತ್ಯವೂ ಅಲ್ಲಲ್ಲಿ ಮಂಗನ ಶವಗಳು ಪತ್ತೆಯಾಗುತ್ತಲೇ ಇದೆ.

Also read  ಮಲೆನಾಡಿನಲ್ಲಿ ಮಂಗನ ಕಾಯಿಲೆ:ಇರಲಿ ಎಚ್ಚರ

Leave a Reply

Your email address will not be published. Required fields are marked *