ಅರಬ್ಬಿ ಸಮುದ್ರದಲ್ಲಿ‘ಕ್ಯಾರ್ರ್ ಚಂಡಮಾರುತ’-ಕರಾವಳಿ ತೀರದಲ್ಲಿ ಕಟ್ಟೆಚ್ಚರ

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಇನ್ನಷ್ಟು ತೀವ್ರಗೊಂಡು ಚಂಡಮಾರುತವಾಗಲಿದೆ.ಇದರ ಪರಿಣಾಮ ಶುಕ್ರವಾರ ಕೇರಳ,ಕೊಂಕಣ,ಗೋವಾ ಮತ್ತು ಕರಾವಳಿ ಕರ್ನಾಟಕಗಳಲ್ಲಿ ಭಾರೀ ಗಾಳಿ-ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.ಈ ಚಂಡಮಾರುತಕ್ಕೆ ‘ಕ್ಯಾರ್ರ್’ಯೆಂದು  ಹೆಸರಿಸಲಾಗಿದೆ .

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಿಮ್ನ ಒತ್ತಡ ಗುರುವಾರ ವೇಳೆ ತೀವ್ರಗೊಂಡು ಇವತ್ತು ಗುರುವಾರ ವಾಯುಭಾರ ಕುಸಿತಕ್ಕೆ ಕಾರಣವಾಗಲಿದ್ದು,ಇದು ಮುಂದಿನ 24 ಗಂಟೆಗಳಲ್ಲಿ ವಾಯುಭಾರಕುಸಿತಕ್ಕೆ ಕಾರಣವಾಗಲಿದ್ದು ನಂತರದ 48 ಗಂಟೆಗಳ ಅವಧಿಯಲ್ಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.ಒಂದು ವೇಳೆ ಚಂಡ ಮಾರುತ ತೀವ್ರಗೊಂಡರೆ 23ರಿಂದ 5ರ ವರೆಗೆ ಒಮಾನ್ ತೀರದತ್ತ ಸಾಗಲಿದೆ ಎಂದು ಊಹಿಸಲಾಗಿದೆ.

Also read  ಮುಂಗಾರಿನ ಮಳೆ ಮಾರುತ..ನೋಡ ಬನ್ನಿ ಸಕಲೇಶಪುರದ ಸೊಬಗ

ಭಾರತೀಯ ಹವಾಮಾನ ಇಲಾಖೆಯು ಚಂಡಮಾರುತದ ಕುರಿತಂತೆ ಈಗಾಗಲೇ ಅರಬಿ ಸಮುದ್ರಕ್ಕೆ ಹೊಂದಿಕೊಂಡಂತಿರುವ ರಾಜ್ಯಗಳಿಗೆ ಎಚ್ಚರಿಕೆ ನೀಡಿದೆ.ಮುಂದಿನ ಎರಡು ದಿನಗಳಲ್ಲಿ ಕೊಂಕಣ,ಗೋವಾ,ಕರಾವಳಿ ಕರ್ನಾಟಕ,ಒಡಿಶಾ ಮತ್ತು ಕರಾವಳಿ ಆಂಧ್ರಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.ಕೊಂಕಣ,ಗೋವಾ ಮತ್ತು ಕರಾವಳಿ ಕರ್ನಾಟಕಗಳಲ್ಲಿ ಶುಕ್ರವಾರ ಭಾರಿ ಪ್ರಮಾಣದ ಮಳೆಯಾಗುವ ಮುನ್ಸೂಚನೆ ಇದೆ.

Also read  24hrs Forecast: light rains over Coastal Karnataka,heavy rains along the ghats region