ಕಾಫಿ ಬೆಳೆ ಸಾಲ ಬಡ್ಡಿ ಮನ್ನಾಕ್ಕೆ ಒತ್ತಾಯ

ಹವಾಮಾನ ವೈಪರೀತ್ಯದಿಂದಾಗಿ ಸತತ ಎರಡು ವರ್ಷ ನೆರೆಯಿಂದ ನಲುಗಿರುವ ಕಾಫಿ ಉದ್ಯಮವನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ  ಸರ್ಕಾರ ಕಾಫಿ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕೆಂದು ಕರ್ನಾಟಕ ಪ್ಲಾಂಟರ್ಸ್‌ ಅಸೋಸಿಯೇಷನ್‌ (ಕೆಪಿಎ)ಒತ್ತಾಯಿಸಿದೆ.

ಕಳೆದ ಪ್ರಸಕ್ತ ವರ್ಷ ಭಾರೀ ಮಳೆಯಿಂದ ಶೇ.25-30 ಉತ್ಪಾದನೆ ಕುಸಿದಿದೆ.ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಸರ್ಕಾರಗಳು ಧಾವಿಸಬೇಕು.ತಕ್ಷಣಕ್ಕೆ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕು ಎಂದು ಕೆಪಿಎ ಅಧ್ಯಕ್ಷ ಎಂ.ಬಿ. ಗಣಪತಿ ಅವರು ಒತ್ತಾಯಿಸಿದ್ದಾರೆ .

ಸೋಮವಾರ(ನವೆಂಬರ್ 11) ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆಪಿಎ ಅಧ್ಯಕ್ಷ ಎಂ.ಬಿ ಗಣಪತಿ ಆಗಸ್ಟ್- ಅಕ್ಟೋಬರ್ ತಿಂಗಳವರೆಗೆ ದಕ್ಷಿಣ ಕೊಡಗು,ಹಾಸನ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಸುರಿದು ಕಾಫಿ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಮೆಣಸು ಬೆಳೆಗೂ ಕೂಡ ತೊಂದರೆಯಾಗಿದೆ ಎಂದರು.

Also read  Robusta Production drop by 40%, Hits Indian Coffee Output :Coffee Board

ದೇಶದಲ್ಲಿ ಉತ್ಪಾದನೆಯಾಗುವ ಕಾಫಿ ಬೆಳೆಯಲ್ಲೇ ಶೇ.70 ರಫ್ತಾಗುತ್ತದೆ. ಇದರಲ್ಲಿ ಕರ್ನಾಟಕದ ಕೊಡುಗೆಯೂ ಹೆಚ್ಚಿದೆ. ರಾಜ್ಯದಲ್ಲಿ 1,600 ಹೆಕ್ಟೇರ್‌ನಷ್ಟು ಪ್ರದೇಶ ಹಾಳಾಗಿದ್ದು,ನಿರೀಕ್ಷೆಗಿಂತ ಅರೇಬಿಕಾ ತಳಿಯಲ್ಲಿ 13,200 ಮೆಟ್ರಿಕ್‌ ಟನ್‌ (ಶೇ. 16.27) ಹಾಗೂ ರೋಬಸ್ಟಾ ತಳಿಯ ಕಾಫಿ ಉತ್ಪಾದನೆಯು 35,050 ಮೆಟ್ರಿಕ್‌ ಟನ್‌ (ಶೇ.18.78) ಇಳಿಕೆ ಕಂಡುಬಂದಿದೆ.

ಬಿಳಿಕಾಂಡ ಕೊರಕವಂತೂ ಬೆಳೆ ಗಾರರ ಪಾಲಿಗೆ ಕಗ್ಗಂಟಾಗಿದೆ.  ಪ್ರತಿ ವರ್ಷ ಶೇ. 10- 15 ಬೆಳೆಯು ಇದಕ್ಕೆ ಬಲಿಯಾಗುತ್ತಿದೆ. ಇದರಿಂದಾಗಿ ಬೆಳೆಗಾರರು ತೋಟಗಳನ್ನು ಕಳೆದು ಕೊಳ್ಳುವ ಹಾದಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತಕ್ಷಣ ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿದರು.

ಕಾಫಿ ಉದ್ಯಮ ಹವಾಮಾನದಲ್ಲಿ ಬದಲಾವಣೆ ,ಅತಿಯಾದ ಮಳೆ,ಪ್ರವಾಹ ಮತ್ತು ಭೂಕುಸಿತ ,ಕನಿಷ್ಠ ಬೆಲೆ,ಉತ್ಪಾದನಾ ವೆಚ್ಚದಲ್ಲಿ ಗಣನೀಯ ಏರಿಕೆ ,ಕುಸಿಯುತ್ತಿರುವ ಉತ್ಪಾದನೆ ,ಮೂಲಸೌಕರ್ಯದ ಸಮಸ್ಯೆಗಳು,ಅರೇಬಿಕಾ ಕಾಫಿ ಇಳುವರಿ ಇಳಿಕೆ ,ಸಾಲದ ಮೇಲಿನ ಗರಿಷ್ಠ ಬಡ್ಡಿ ಸಮಸ್ಯೆಗಳಲ್ಲಿ ಸಿಕ್ಕಿ ನಲುಗಿದೆ .ಸಂಕಷ್ಟದಲ್ಲಿರುವ ಬೆಳೆಗಾರರ ನೆರವಿಗೆ ಸರ್ಕಾರಗಳು ಧಾವಿಸಬೇಕು.

Also read  Diet Habit: Victoria Beckham ‘chews COFFEE BEANS instead of drinking alcohol on nights out’