ಮುಂಗಾರು ಪೂರ್ಣ:25 ವರ್ಷಗಳಲ್ಲೇ ಗರಿಷ್ಠ ಮಳೆ

ಪ್ರಸಕ್ತ ವರ್ಷದ ಮುಂಗಾರು ಋತು ಪೂರ್ಣಗೊಂಡಿದೆ.ಜೂನ್ 1ರಿಂದ ಸೆಪ್ಟೆಂಬರ್ 30ರವರೆಗಿನ ಅವಧಿಯಲ್ಲಿ ದೇಶದಲ್ಲಿ ವಾಡಿಕೆಗಿಂತ ಶೇ 10ರಷ್ಟು ಹೆಚ್ಚು ಮಳೆಯಾಗಿದೆ. ನಾಲ್ಕು ರಾಜ್ಯಗಳು ಮಳೆ ಕೊರತೆ ಅನುಭವಿಸಿವೆ. 1994 ರಿಂದೀಚೆಗೆ ಭಾರತವು ಈ ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದಲ್ಲಿ ವಾಡಿಕೆಗಿಂತ ಶೇ 23ರಷ್ಟು ಹೆಚ್ಚು ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಯಾದಗಿರಿ,ವಿಜಯಪುರ,ಬೆಂಗಳೂರು ಗ್ರಾಮೀಣ,ಬಳ್ಳಾರಿ ಮತ್ತು ಕೋಲಾರ ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದೆ.

ಮುಂಗಾರು ಇನ್ನೂ ದೇಶದ ಹಲವಾರು ಭಾಗಗಳಲ್ಲಿ ಸಕ್ರಿಯವಾಗಿದೆ ಮತ್ತು ನೈರುತ್ಯ ಮುಂಗಾರು ಹಿಂತೆಗೆದುಕೊಳ್ಳುವಿಕೆಯು ಅಕ್ಟೋಬರ್ 10 ರ ಸುಮಾರಿಗೆ ವಾಯುವ್ಯ ಭಾರತದಿಂದ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಇದನ್ನು ‘ಸಾಮಾನ್ಯಕ್ಕಿಂತ ಹೆಚ್ಚು’ ಎಂದು ವರ್ಗೀಕರಿಸಲಾಗಿದೆ.

ಉತ್ತರ ಕರ್ನಾಟಕದಲ್ಲಿ ಕಳೆದ 2 ತಿಂಗಳ ಹಿಂದೆ ಸೃಷ್ಟಿಯಾಗಿದ್ದ ಪ್ರವಾಹದಿಂದಾಗಿ ನೆಲದಲ್ಲಿ ತೇವಾಂಶ ಹೆಚ್ಚಾಗಿದ್ದು, ಹಿಂಗಾರು ಬೆಳೆಗಳು ಸಮೃದ್ಧವಾಗಿ ಬೆಳೆಯುವ ನಿರೀಕ್ಷೆ ಇದೆ. ಹೀಗಾಗಿ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಮಾಡಲಾಗ್ತಿದೆ. ರೈತರಿಗೆ ತಾಂತ್ರಿಕ ನೆರವು ನೀಡಲಾಗ್ತಿದೆ.

Also read  ಮಲೆನಾಡಿನಲ್ಲಿ ಮಂಗನ ಕಾಯಿಲೆ:ಇರಲಿ ಎಚ್ಚರ

ಹಳೇ ಮೈಸೂರು ಭಾಗದ ಕೆಲ ಜಿಲ್ಲೆಗಳಲ್ಲಿ ಮುಂಗಾರು ಮಳೆ ನಿರೀಕ್ಷಿಸಿದಷ್ಟು ಸುರಿದಿಲ್ಲ. ಹೀಗಾಗಿ ಹಿಂಗಾರಿನಲ್ಲಿ ರೈತರು ಅಲ್ಪಾವಧಿ ಬೆಳೆಗಳಾದ ರಾಗಿ, ಹುರುಳಿ, ಉಚ್ಚೆಳ್ಳು ಬೆಳೆಯನ್ನು ಬೆಳೆಯಬಹುದು. ಜತೆಗೆ ಸಿರಿಧಾನ್ಯಗಳನ್ನು ಬೆಳೆದುಕೊಳ್ಳಬಹುದು. ದಸರಾ-ದೀಪಾವಳಿ ಸಮಯದಲ್ಲಿ ಸಾಧಾರಣ ಮಳೆಯಾಗುವ ಕಾರಣ ಬೆಳೆ ಕೈಸೇರುವ ಸಾಧ್ಯತೆ ಇದೆ.

ಒಟ್ಟಾರೆ ಮಳೆಯ ಅಂಕಿ ಅಂಶಗಳು ಭಾರತ ಹವಾಮಾನ ಇಲಾಖೆ(ಐಎಂಡಿ) ಮತ್ತು ಖಾಸಗಿ ಮುನ್ಸೂಚಕ ಸ್ಕೈಮೆಟ್ ವೆದರ್ ಮಾಡಿದ ಆರಂಭಿಕ ಮುನ್ಸೂಚನೆಗೆ ವಿರುದ್ಧವಾಗಿವೆ. ಐಎಂಡಿ ಎಲ್‌ಪಿಎಯ ಶೇಕಡಾ 96 ರಷ್ಟು ಮಳೆಯಾಗುವ ಮುನ್ಸೂಚನೆ ನೀಡಿದರೆ, ಸ್ಕೈಮೆಟ್‌ನ ಮುನ್ಸೂಚನೆಯು ಶೇಕಡಾ 93 ರಷ್ಟಿದ್ದು, ಎರಡೂ ಶೇಕಡಾ 5 ರಷ್ಟು ದೋಷ ಅಂಚು ನೀಡುತ್ತದೆ.

Also read  Trough running over Karnataka is favourable for some more showers