ಉತ್ತರ ಕರ್ನಾಟಕದಲ್ಲಿ ಉತ್ತಮ ಮಳೆ:ತುಂಬಿ ಹರಿದ ಹಳ್ಳ ಕೊಳ್ಳಗಳು

ಉತ್ತರ ಕರ್ನಾಟಕ ಭಾಗದಲ್ಲಿ ಭಾನುವಾರದಿಂದ ಭಾರೀ ಮಳೆ ಸುರಿಯುತ್ತಿದ್ದು, ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಕೆಲ ವೆಡೆ ಮನೆಗಳು ಕುಸಿದಿರುವ ಬಗ್ಗೆ ವರದಿಯಾಗಿದೆ.

ಬಳ್ಳಾರಿ, ವಿಜಯಪುರ, ಬೆಳಗಾವಿ, ಕಲಬುರ್ಗಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಹಲವೆಡೆ ರಸ್ತೆಗಳು, ಹಳ್ಳಗಳು ತುಂಬಿಹರಿದ ಪರಿಣಾಮ ಸಂಚಾರಕ್ಕೆ ತೊಂದರೆಯಾಯಿತು.

Also read  ನಿಪಾ ವೈರಸ್: ಕೇರಳದಲ್ಲಿ 10 ಮಂದಿ ಸಾವು: ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಿ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನಲ್ಲಿ ಭಾನುವಾರ ಸಂಜೆಯಿಂದ ಸುರಿದ ಮಳೆಗೆ ಯಲ್ಲಮ್ಮನ ಹಳ್ಳ ತುಂಬಿ ಹರಿದಿದ್ದು, ಎರಡು ಲಾರಿಗಳು ಪಲ್ಟಿಯಾಗಿವೆ. ಪ್ರಯಾಣಿಕರಿದ್ದ ಬಸ್‌ ಸಂಚರಿಸಲಾಗದೇ ವಾಲಿ ನಿಂತಿತು. ಸ್ಥಳೀಯರ ಸಹಾಯದಿಂದ ಪ್ರಯಾಣಿಕರನ್ನು ರಕ್ಷಿಸಲಾಯಿತು.

ರೈತರಲ್ಲಿ ಸಂತಸ ಭಾರಿ ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ದ್ರಾಕ್ಷಿ ಬೆಳೆಗಾರರ ಪಾಲಿಗೆ ಮಳೆ ವರವಾಗಿದೆ.

ಕೆರೆ ಭರ್ತಿ ರೈತರ ಮೊಗದಲ್ಲಿ ಸಂತಸ

ಹೊನ್ನಾಳ್ಳಿ ತಾಲೂಕಿನ ಬೈರನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ 2 ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಗ್ರಾಮದಲ್ಲಿ ಬರಿದಾಗಿದ್ದ ಕಳ್ಳರ ಗುಂಡಿ ಚೆಕ್‌ ಡ್ಯಾಂ ಭರ್ತಿಯಗಿ ಸಮೀಪದ 60 ಎಕರೆ ಪ್ರದೇಶದ ಕೆರೆ ಸಂಪೂರ್ಣ ತುಂಬಿ ಇಲ್ಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.