ಮುಂಗಾರು ಪೂರ್ವ ಮಳೆ: 23ರ ಬಳಿಕ ಒಂದು ವಾರ ರಾಜ್ಯದ ಹಲವೆಡೆ ಭಾರಿ ಮಳೆ ಬೀಳುವ ಸಾಧ್ಯತೆ

ಮುಂಗಾರು ಪ್ರವೇಶಿಸುವುದಕ್ಕೂ ಮೊದಲೇ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಇದೇ 23 ರ ಬಳಿಕ ಸುಮಾರು ಒಂದು ವಾರ ಭಾರಿ ಮಳೆ ಬೀಳುವ ಸಾಧ್ಯತೆ ಇದೆ.

ರಾಜ್ಯದ ದಕ್ಷಿಣ ಒಳನಾಡಿನ ಮೇಲೆ ಪ್ರಬಲ ಸುಳಿಗಾಳಿಯಂತಹ ವಾತಾವರಣ ಸೃಷ್ಟಿಯಾಗುವುದರಿಂದ ಭಾರಿ ಮಳೆಯ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ತಿಳಿಸಿದ್ದಾರೆ.

ಇದೇ 23 ಕ್ಕೆ ಆರಂಭಗೊಳ್ಳುವ ಮುಂಗಾರು ಪೂರ್ವ ಮಳೆಯು ಮೇ 29 ರವರೆಗೆ ಮುಂದುವರಿಯಲಿದೆ. ಇದರಿಂದಾಗಿ ರಾಜ್ಯದ ಹಲವೆಡೆ ಉತ್ತಮ ಮಳೆ ಆಗಲಿದೆ. ಪ್ರಬಲ ಸುಳಿಗಾಳಿಯಿಂದ ದಕ್ಷಿಣ ಒಳನಾಡು ಮತ್ತು ನೆರೆಯ ಜಿಲ್ಲೆಗಳಲ್ಲೂ ಪ್ರಭಾವ ಉಂಟಾಗಲಿದೆ. ಅಲ್ಲದೆ, ಹಿಂದೂ ಮಹಾಸಾಗರದಲ್ಲಿ ಸಮುದ್ರಮಟ್ಟದಿಂದ 3.1 ಕಿಲೊಮೀಟರ್‌ ಮೇಲ್ಭಾಗದಲ್ಲಿ ಚಂಡಮಾರುತ ಕೇಂದ್ರೀಕೃತವಾಗಲಿದೆ. ಮುಂಗಾರು ಪ್ರವೇಶಕ್ಕೆ ಉತ್ತಮ ವಾತಾವರಣ ಸೃಷ್ಟಿಯಾಗಿದೆ. ಜೂನ್‌ 6ಕ್ಕೆ ಕೇರಳಕ್ಕೆ ಮುಂಗಾರು ಪ್ರವೇಶಿಸಲಿದ್ದು, ಅದಾದ ಒಂದೆರಡು ದಿನಗಳಲ್ಲೇ ರಾಜ್ಯವನ್ನು ಪ್ರವೇಶಿಸುತ್ತದೆ.

A trough ran down all the way from the hills of Bengal into a cyclonic circulation over South Interior Karnataka across South Chhattisgarh and Telangana.

May 23 to 28: Isolated to scattered rainfall likely over North-West and South Peninsular India with isolated heavy rainfall over South Interior Karnataka and Kerala.

Tuesday: Thunderstorm and lightning accompanied with
(i) gusty winds (50 km/hr) at over South Interior Karnataka, Assam, Meghalaya, Nagaland, Manipur, Mizoram, and Tripura;
(ii) with gusty winds (40 km/hr) over Kerala, Coastal Karnataka, West Madhya Pradesh, hills of Bengal, Sikkim and Odisha.

Wednesday: Thunderstorm and lightning accompanied with
(i) squall (60 km/hr) over hills of Bengal, Sikkim, Assam, Meghalaya, Nagaland, Manipur, Mizoram and Tripura;
(ii) gusty winds (50 km/hr) over South Interior Karnataka and Odisha; and
(iii) gusty winds (40 km/hr) over Kerala, Telangana, West Madhya Pradesh, Chhattisgarh, plains of Bengal, Jharkhand, Bihar, Jammu & Kashmir, Himachal Pradesh and Uttarakhand.

Also read  Berry Borer ‘BROCO’ Damages Brazil's 40 percent Coffee Crop