ಕಾಳುಮೆಣಸು ಆಮದು: ಅಮಿತ್ ಷಾ ಪುತ್ರ ಜೈಷಾ ವಿರುದ್ಧ ಆರೋಪ

ವಿಯೆಟ್ನಾಂ ಕಾಳು ಮೆಣಸು ಆಮದು ವ್ಯವಹಾರದಲ್ಲಿ ಹವಾಲಾ ದಂಧೆಯ ಶಂಕೆ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಜಾರಿನಿರ್ದೇಶನಾಲಯ ಗೃಹ ಸಚಿವ ಅಮಿತ್ ಷಾ ಪುತ್ರ ಜೈಷಾ ಅವರನ್ನು ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಆಗ್ರಹಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಯೆಟ್ನಾಂನಿಂದ ಒಂದು ಕೆ.ಜಿ. ಕಾಳುಮೆಣಸಿಗೆ 500 ರೂ. ಕೊಟ್ಟು ಖರೀದಿಸಿ, ಅದನ್ನು ದೇಶದಲ್ಲಿ 300 ರೂ. ಗೆ ಮಾರಾಟ ಮಾಡಲಾಗುತ್ತಿದೆ. ಎರಡು ವರ್ಷದಿಂದ ಸತತವಾಗಿ 
ಹೊರದೇಶದಿಂದ ಕಳಪೆ ಗುಣಮಟ್ಟದ ಕಾಳುಮೆಣಸನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದರಲ್ಲಿ 5 ಸಾವಿರ ಕೋಟಿ ರೂ. ಹವಾಲಾ ದಂಧೆಯ ಶಂಕೆ ವ್ಯಕ್ತವಾಗುತ್ತಿದೆ. ಹೊರದೇಶದಿಂದ ಕರಿಮೆಣಸನ್ನು ಆಮದು ಮಾಡಿಕೊಳ್ಳುತ್ತಿರುವುದರಿಂದ ದೇಶದ ಕರಿಮೆಣಸು ಬೆಳೆಗಾರರು ಸಂಕಷ್ಟ ಅನುಭವಿಸುವಂತಾಗಿದೆ. ವಿಯೆಟ್ನಾಂನ ಕರಿಮೆಣಸನ್ನು ಯುರೋಪ್, ಅಮೆರಿಕಾ ಆಮದು ಮಾಡಿಕೊಳ್ಳದೇ ನಮ್ಮ ದೇಶದಿಂದ ಆಮದು ಮಾಡಿಕೊಳ್ಳುತ್ತಿವೆ. 

Also read  ಮುಂದಿನ 24 ಗಂಟೆ ಮಳೆ ಮುನ್ಸೂಚನೆ:ಕರಾವಳಿ ಮಲೆನಾಡಿನಲ್ಲಿ ಸಾಧಾರಣದಿಂದ ಉತ್ತಮ ಮಳೆ ಸಾಧ್ಯತೆ

2015 ರಲ್ಲಿ ಜೈ ಷಾ ಆರಂಭಿಸಿರುವ ‘ಟೆಂಪಲ್ ಎಂಟರ್ ಪ್ರೈಸಸ್’ ಕಂಪನಿ ಕೃಷಿ ಉತ್ಪನ್ನಗಳ ವ್ಯವಹಾರ ನಡೆಸುತ್ತಿದ್ದು, ಈ ಹವಾಲಾ ದಂಧೆಯಲ್ಲಿ ಈ ಕಂಪನಿ ತೊಡಗಿಸಿಕೊಂಡಿದ್ದರ ಬಗ್ಗೆ ದೇಶದಲ್ಲಿ ಚರ್ಚೆಯಾಗುತ್ತಿದೆ. ತಮಗಾಗುತ್ತಿರುವ ಅನ್ಯಾಯದ ಬಗ್ಗೆ ಕಾಳುಮೆಣಸು ಬೆಳೆಗಾರರು ಇಡಿಗೆ ದೂರು ಸಲ್ಲಿಸಿದ್ದಾರಾದರೂ ಜಾರಿ ನಿರ್ದೇಶಾನಲಯ ಈ ಬಗ್ಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Also read  Black pepper prices stays steady

ಸುಮಾರು 50 ಲಕ್ಷಕ್ಕೂ ಹೆಚ್ಚಿನ ಜನ ಈ ಬೆಳೆಯ ಮೇಲೆ ಅವಲಂಬಿತರಾಗಿದ್ದು, 70 ಸಾವಿರ ಟನ್ ಇದ್ದ ವಹಿವಾಟು ಇದೀಗ 50 ಸಾವಿರಕ್ಕೆ ಕುಸಿದಿದೆ. ಕೃಷಿಯನ್ನು ನಾಶ ಮಾಡಿದರೆ ಈ ದೇಶಕ್ಕೆ ಉಳಿಗಾಲವೇ ಇಲ್ಲ. ಕಾಳುಮೆಣಸುಗಾರರ ಬದುಕಿನ ಮೇಲೆ ಕೇಂದ್ರ ಸರ್ಕಾರ ಬರೆ ಎಳೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.

Also read  After 12 years, Neelakurinji flower will bloom in Kerala’s Munnar hills this month