ಗಗನಕ್ಕೇರಿದ ಏಲಕ್ಕಿ ರಾಣಿ: 5000ರೂ ಗಡಿ ದಾಟಿದ ಬೆಲೆ

ಸಾಂಬಾರ ಪದಾರ್ಥಗಳ ರಾಣಿ‘ ಏಲಕ್ಕಿಯ ಬೆಲೆ ಪ್ರತಿ ಕೆ.ಜಿ.ಗೆ 5,000ರೂರ ಗಡಿ ದಾಟಿದೆ.ಇದು ಸಾರ್ವಕಾಲಿಕ ದಾಖಲೆಯಾಗಿದೆ.

ಕಳೆದ 5 ತಿಂಗಳ ಅವಧಿಯಲ್ಲಿ ಸ್ಥಳೀಯ ಏಲಕ್ಕಿ ಬೆಲೆ ಹೆಚ್ಚಳವಾಗಿದ್ದು,ಕೆಜಿಗೆ 800-1200ರೂ. ಇದ್ದ ದರ ಇದೀಗ ಗುಣಮಟ್ಟದ ಆಧಾರದಲ್ಲಿ 4000-5000 ರೂ.ವರೆಗೆ ಬೆಲೆ ಬಾಳುತ್ತಿದೆ.

ಆಗಸ್ಟ್ 2018 ರ ಪ್ರವಾಹದಿಂದಾಗಿ ಮತ್ತು ಇಡುಕ್ಕಿ ಜಿಲ್ಲೆಯ ಏಲಕ್ಕಿ ಬೆಳೆಯುವ ಮುಖ್ಯ ಪ್ರದೇಶಗಳಲ್ಲಿನ ಬರಗಾಲದಿಂದಾಗಿ ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.ಇಡುಕ್ಕಿ ಜಿಲ್ಲೆಯ ಪ್ರವಾಹ ಮತ್ತು ಭೂಕುಸಿತದಲ್ಲಿ ಹೆಚ್ಚಿನ ಸಂಖ್ಯೆಯ ಏಲಕ್ಕಿ ಗಿಡಗಳ ನಾಶಗೊಂಡಿವೆ.

Also read  Arabica coffee touched a three-month low

ಏಲಕ್ಕಿ ಏಪ್ರಿಲ್ 26 ರಂದು 3,000 ರೂ.ಇದ್ದ ಬೆಲೆ,ಮೇ ಮೊದಲ ವಾರದಲ್ಲಿ ಅದು 4,000 ರೂಗಳನ್ನು ದಾಟಿದೆ.

ಪ್ರಸಕ್ತ ಋತುವಿನಲ್ಲಿ ಏಲಕ್ಕಿ ಉತ್ಪಾದನೆಯು ಶೇಕಡಾ 40 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.

ಏಲಕ್ಕಿ ಬೆಳೆಗಾರರು ಬೆಲೆಯ ಏರಿಕೆಯ ಬಗ್ಗೆ ಸಂತೋಷವಾಗಿದ್ದರೂ, ಅವರೊಂದಿಗೆ ಏಲಕ್ಕಿ ಸ೦ಗ್ರಹ ಕೊರತೆಯಿಂದಾಗಿ ಅವರು ಸಂಪೂರ್ಣ ಪ್ರಯೋಜನವನ್ನು ಪಡೆಯುತ್ತಿಲ್ಲ.ಸಣ್ಣ ಬೆಳೆಗಾರರು ಹಿಡುವಳಿ ಸಾಮರ್ಥ್ಯವನ್ನು ಹೊಂದಿರದ ಕಾರಣ ನಿರಾಶೆಗೊಂಡಿದ್ದಾರೆ.

ಯಾವುದೇ ಉತ್ಪಾದನೆ ಇಲ್ಲದ ಸಮಯದಲ್ಲಿ ಏಲಕ್ಕಿ ಬೆಲೆ ಹೆಚ್ಚಾಗಿದ್ದು ರೈತರಿಗೆ ಕಡಿಮೆ ಲಾಭವನ್ನು ನೀಡಿದೆ.

Also read  Pepper stays steady on matching supply and demand