ಮಾರಕ ಆರ್‌ಇಸಿಪಿ ಮುಕ್ತಒಪ್ಪಂದದಿಂದ ಅಡಿಕೆ ಮತ್ತು ಮೆಣಸನ್ನು ಹೊರಗಿಡುವಂತೆ ಕೇಂದ್ರ ಸರ್ಕಾರಕ್ಕೆ ಕ್ಯಾಂಪ್ಕೊ ಕೋರಿಕೆ

ದೇಶದ ಕೃಷಿ ವಲಯಕ್ಕೆ ಮಾರಕವಾಗಿರುವ ಪ್ರಾದೇಶಿಕ ಸಮಗ್ರ ಅರ್ಥಿಕ ಸಹಭಾಗಿತ್ವ (ಆರ್‌ಇಸಿಪಿ)ಒಪ್ಪಂದದಿಂದ ಅಡಿಕೆ ಮತ್ತು ಮೆಣಸನ್ನು ಹೊರಗಿಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ರಾಜ್ಯ ಸರ್ಕಾರವನ್ನು ಕ್ಯಾಂಪ್ಕೊ ನಿಯೋಗ ಕೋರಿದೆ.

ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ  ಬರೆದಿರುವ ಪತ್ರದಲ್ಲಿ ಅಡಿಕೆ ಮತ್ತು ಮೆಣಸು ಉತ್ಪಾದನೆಯಲ್ಲಿ ದೇಶವು ಸ್ವಾವಲಂಬಿಯಾಗಿರುವುದರಿಂದ ದೇಶೀಯ ರೈತರ ಹಿತಾಸಕ್ತಿಗಳನ್ನು ಕಾಪಾಡುವುದು ಈ ಕೋರಿಕೆಯ ಹಿಂದಿನ ತರ್ಕವಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಮಂದಗತಿಯಲ್ಲಿರುವ ಭಾರತದ ಆರ್ಥಿಕತೆಯ ಮೇಲೆ ಮತ್ತೊಂದು ಗದಾಪ್ರಹಾರದ ಅಪಾಯ ಎದುರಾಗಿದೆ. ಕೃಷಿ, ಹೈನುಗಾರಿಕೆ,ವಾಣಿಜ್ಯ ಬೆಳೆಗಳು ಮಾತ್ರವಲ್ಲ ದೇಶದ ನೂರೆಂಟು ಉದ್ಯಮಗಳಿಗೂ ಆಪತ್ತು ತರಬಲ್ಲ ಆಘಾತಕಾರಿ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಆಗ್ನೇಯ ಏಷ್ಯಾದ ಬಹುತೇಕ ರಾಷ್ಟ್ರಗಳು ಸಜ್ಜಾಗಿದ್ದು, ಭಾರತವನ್ನೂ ಸಹಿ ಹಾಕಲು ಒತ್ತಡ ಹೇರುತ್ತಿವೆ.

Also read  Importance of TWO TIER SHADE in Coffee Plantation

ದಕ್ಷಿಣದ ಒಟ್ಟು 15 ರಾಷ್ಟ್ರಗಳದೊಂದಿಗೆ ಭಾರತ ಸರಕಾರ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಕುರಿತು ಮಾತುಕತೆ ನಡೆಸುತ್ತಿದೆ.ನವೆಂಬರ್‌ ಒಳಗೆ ಮಾತುಕತೆ ಮುಕ್ತಾಯವಾಗಲಿದ್ದು,ಭಾರತದ ರೈತರನ್ನು ಇನ್ನೊಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಳಪಡಿಸಲಾಗುತ್ತಿದೆ.ಇದರಿಂದ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕವೇ ಇಲ್ಲವಾಗುತ್ತದೆ. ಹೀಗಾಗಿ ಹಲವು ದೇಶಗಳ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ಮಾರಲು ಬರುತ್ತವೆ. ಇದರಿಂದಾಗಿ ನಮ್ಮ ದೇಶದ ಸಣ್ಣ ರೈತರ ಸ್ಥಿತಿ ಶೋಚನೀಯವಾಗಲಿದೆ.

 ದೇಶದ ಕೃಷಿ ವಲಯಕ್ಕೆ ಮಾರಕವಾಗಿರುವ ಪ್ರಾದೇಶಿಕ ಸಮಗ್ರ ಅರ್ಥಿಕ ಸಹಭಾಗಿತ್ವ (ಆರ್‌ಇಸಿಪಿ) ಒಪ್ಪಂದದಿಂದ ಕೇಂದ್ರ ಸರಕಾರ ದೂರ ಉಳಿಯಬೇಕು ಎಂದು ಆಗ್ರಹಿಸಿ ದೇಶಾದ್ಯಂತ ರೈತ ಸಂಘಟನೆಗಳಿಂದ ಅ.24ರಂದು ಪ್ರತಿಭಟನೆ ನಡೆಯಲಿದೆ.

ಭಾರತದ ಮೇಲೆ ಪರಿಣಾಮವೇನು?
1.ಒಪ್ಪಂದದ ವ್ಯಾಪ್ತಿಯ ರಾಷ್ಟ್ರಗಳಿಂದ ಬರುವ 95%ರಷ್ಟು ಉತ್ಪನ್ನಗಳ ಮೇಲೆ ನಯಾ ಪೈಸೆ ಆಮದು ಸುಂಕ ವಿಧಿಸುವಂತಿಲ್ಲ.
2.ಚೀನಾದ ಅಗ್ಗದ ಉತ್ಪನ್ನಗಳಲ್ಲದೆ, 15 ದೇಶಗಳ ವಸ್ತುಗಳ ಪ್ರವಾಹದಿಂದ ಸ್ಥಳೀಯ ಉತ್ಪಾದನಾ ವಲಯಕ್ಕೆ ಭಾರಿ ಹೊಡೆತ.
3.ನ್ಯೂಜಿಲೆಂಡ್‌ ಮೂಲದ ಹಾಲು, ಉತ್ಪನ್ನಗಳ ಲಗ್ಗೆಯಿಂದ ಕೋಟ್ಯಂತರ ಕುಟುಂಬಗಳಿಗೆ ಆಧಾರವಾದ ಹೈನುಗಾರಿಕೆಗೆ ಸಂಕಷ್ಟ.
4.ಇತರ ರಾಷ್ಟ್ರಗಳ ಅಗ್ಗದ ಸರಕುಗಳಿಂದಾಗಿ ಸ್ಥಳೀಯ ಸಣ್ಣ ಮಧ್ಯಮ ಉದ್ದಿಮೆಗೆ ಹೊಡೆತ, ಆದಾಯ ಕುಸಿತ. ಸರಕಾರಕ್ಕೆ ಜಿಎಸ್‌ಟಿ ಸಂಗ್ರಹ ಇಳಿಕೆ.

Also read  Black pepper moves up on good demand

ಯಾವೆಲ್ಲಉತನ್ನಗಳಿಗೆ ಸಂಚಕಾರ?
ಹಾಲು,ಹಾಲಿನ ಉತ್ಪನ್ನಗಳು,ಕಾಫಿ, ಕಾಳು ಮೆಣಸು,ಅಡಕ, ರಬ್ಬರ್‌, ಭತ್ತ,ಸಾಗರ ಮೂಲದ ಆಹಾರೋತ್ಪನ್ನ.ದೇಶದ ಬಹುತೇಕ ಎಲ್ಲ ಉದ್ಯಮಗಳಿಗೆ ಇದರಿಂದ ಸಂಕಷ್ಟ.

ಕೃಷಿಗೆ ಕುತ್ತು,ಉದ್ಯಮಕ್ಕೂ ಆಪತ್ತು: ಭಾರತದ ಆರ್ಥಿಕತೆ ಮೇಲೆ ಗದಾಪ್ರಹಾರಕ್ಕೆ ಕಾದು ಕುಳಿತಿದೆ ಆರ್‌ಸಿಇಪಿ ಮುಕ್ತ ಒಪ್ಪಂದ

RCEP will bring cheap imports which will further drive down the prices. Earlier, the FTA with ASEAN resulted in huge imports of palm oil, pepper, rubber and other plantation crops, and the price crops pushed thousands of farmers out of cultivation

Also read  Black Pepper Spot Prices 16-Nov-18