ನಾಳೆ ಕಾಳುಮೆಣಸು,ಶುಂಠಿ,ಅರಿಷಿಣ ಕೃಷಿ ತರಬೇತಿ

ಶಿರಸಿ:ಕಾಳುಮೆಣಸು,ಶುಂಠಿ ಮತ್ತು ಅರಿಷಿಣ ಕೃಷಿಯ ನೂತನ ಮತ್ತು ಸುಧಾರಿತ ತಂತ್ರಜ್ಞಾನಗಳ ಕುರಿತು ರೈತರ ತರಬೇತಿ ಕಾರ್ಯಕ್ರಮ ಯಲ್ಲಾಪುರ ತಾಲೂಕಿನ ಉಮ್ಮಚಗಿಯ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮಾ.7ರಂದು ಸಂಘಟಿಸಲಾಗಿದೆ.   

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟ, ತೋಟಗಾರಿಕೆ ಮಹಾವಿದ್ಯಾಲಯ, ತೋಟಗಾರಿಕೆ ವಿಸ್ತರಣಾ ಶಿಕ್ಷ ಣ ಘಟಕ, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ,ಅಡಿಕೆ ಮತ್ತು ಸಾಂಬಾರ ಅಭಿವೃದ್ಧಿ ನಿರ್ದೇಶನಾಲಯ ಕಲ್ಲಿಕೋಟೆ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.   

ನುರಿತ ವಿಜ್ಞಾನಿಗಳು, ವಿಷಯ ತಜ್ಞರು ಮತ್ತು ಪ್ರಗತಿಪರ ರೈತರಿಂದ ತಾಂತ್ರಿಕ ಗೋಷ್ಠಿ ನಡೆಯಲಿದೆ. 

Also read  Black pepper prices continues to rise

ಕಾಳು ಮೆಣಸಿನ ತಳಿ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಪ್ರದರ್ಶನ, ಕಾಳುಮೆಣಸಿನ ರಾಣಿ ಚೆನ್ನಮ್ಮಾದೇವಿ ಪ್ರಶಸ್ತಿ ಪ್ರದಾನ ಸಮಾರಂಭ, ಅರಿಷಿಣ ಮತ್ತು ಶುಂಠಿ ತಳಿಗಳ ಪ್ರದರ್ಶನ, ಪ್ರೋಟ್ರೋಗಳಲ್ಲಿ ಅರಿಷಿಣ ಸಸಿಗಳ ಉತ್ಪಾದನೆ ಅನುಭವ ಹಂಚಿಕೆ, ಪ್ರಗತಿಪರ ರೈತರ ಜೊತೆ ಚರ್ಚೆ ಹೀಗೆ ಹಲವಾರು ವಿಷಯಗಳ ಕುರಿತು ತರಬೇತಿಯನ್ನು ರೈತರಿಗೆ ನೀಡಲಾಗುವುದು ಎಂದು ತೋಟಗಾರಿಕೆ ಮಹಾವಿದ್ಯಾಲಯ ಡೀನ್‌ ತಿಳಿಸಿದ್ದಾರೆ.