ಕಾಳು ಮೆಣಸಿನ ದರ ದಶಕದಲ್ಲೇ ಕನಿಷ್ಠ

ಇನ್ನೇನು ಡಿಸೆಂಬರ್‌ನಲ್ಲಿ ಹೊಸ ಫಸಲು ಬರುತ್ತದೆ.ಕಾಳು ಮೆಣಸಿನ ದರ ಕಳೆದ ದಶಕದಲ್ಲಿಯೇ ಕನಿಷ್ಠ ಮಟ್ಟಕ್ಕೆ ಇಳಿದಿದೆ.ಈಗ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ಕಾಳು ಮೆಣಸಿನ ಬೆಲೆ ರೂ 300 (ಅಂದರೆ ರೈತರಿಗೆ ಸಿಗುವ ಬೆಲೆ ರೂ 280 ಕೆ.ಜಿ ಗೆ) ಕುಸಿದಿದೆ.

ಈಗಲೇ ಕನಿಷ್ಠ ದರಕ್ಕೆ ಕುಸಿದಿರುವ ಕಾಳು ಮೆಣಸಿನ ದರ ಮತ್ತಷ್ಟು ಪಾತಾಳಕ್ಕೆ ಇಳಿಯುವುದು ಖಂಡಿತ ಎಂದು ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ.

ಮುಂದಿನ ವರ್ಷ ದರ 200 ರೂ.ಗೆ ಇಳಿಕೆಯಾಗುವ ಸಂಭವ.

ಕಾಳು ಮೆಣಸಿನ ದರ ಕುಸಿಯಲು ಕಾರಣವೇನು?

ದರ ಕುಸಿತಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಳ ಕಾರಣ.ವಿಯೆಟ್ನಾಂ,ಕಾಂಬೋಡಿಯಾ,ಬ್ರೆಜಿಲ್ ದೇಶಗಳಲ್ಲಿ ಬೇಡಿಕೆಗಿಂತ ಅತಿಯಾದ ಉತ್ಪಾದನೆ.ವಿಯೆಟ್ನಾಂನಿಂದ ಶ್ರೀಲಂಕಾ ಮಾರ್ಗವಾಗಿ ಭಾರತಕ್ಕೆ ಅತಿಯಾದ ಆಮದಿನಿಂದ ಭಾರತದ ಕಾಳುಮೆಣಸಿಗೆ ಬೆಲೆ ಇಲ್ಲವಾಗಿದೆ.

Also read  Black Pepper Spot Prices 25-Aug-18

ಹೀಗಾಗಿ ವಿಯೆಟ್ನಾಂ,ಕಾಂಬೋಡಿಯಾ,ಬ್ರೆಜಿಲ್ ಕಾಳು ಮೆಣಸಿನ ದರ ಕೆ.ಜಿಗೆ 150-160ರೂ.ಗೆ ಕುಸಿದಿದೆ.

ವಿಯೆಟ್ನಾಂನಲ್ಲಿ ವಾರ್ಷಿಕ 1.90 ಲಕ್ಷ ಟನ್‌ ಕಾಳುಮೆಣಸು ಉತ್ಪಾದಿಸುತ್ತಿದೆ.ಭಾರತದಲ್ಲಿ ವಾರ್ಷಿಕ 50-60 ಸಾವಿರ ಟನ್‌ ಕಾಳುಮೆಣಸು ಉತ್ಪಾದಿಸುತ್ತಿದೆ.

ಏಷ್ಯಾ ಮುಕ್ತ ವ್ಯಾಪಾರ ಒಪ್ಪಂದದ (ಎಸ್‌ಎಎಫ್‌ಟಿಎ) ಪರಿಣಾಮ ಶ್ರೀಲಂಕಾದಿಂದ ಭಾರತಕ್ಕೆ ಕಾಳು ಮೆಣಸು ಆಮದು ಮೇಲೆ ಸುಂಕ ಕೇವಲ ಶೇ.8ರಷ್ಟು ಮಾತ್ರ. ಆದರೆ ವಿಯೆಟ್ನಾಂನಿಂದ ನೇರವಾಗಿ ಭಾರತಕ್ಕೆ ರಫ್ತು ಮಾಡಿದರೆ ಆಮದು ಸುಂಕ ಶೇ.52ರಷ್ಟು ಇದೆ! ಹೀಗಾಗಿ ವಿಯೆಟ್ನಾಂ ಕಾಳು ಮೆಣಸು,ಲಂಕಾ ಮೂಲಕ ಭಾರತದ ಮಾರುಕಟ್ಟೆಗೆ ಯಾವುದೇ ಮೌಲ್ಯವರ್ಧನೆಯೂ ಆಗದೆ ಬರುತ್ತಿದೆ.

ಕೇಂದ್ರ ಸರಕಾರ ಸಹಿ ಮಾಡಲು ತುದಿಗಾಲಲ್ಲಿ ನಿಂತಿರುವ ಆರ್‌ಸಿಇಪಿ ಒಪ್ಪಂದದಿಂದ ಕಾಳು ಮೆಣಸು ಬೆಳೆಗಾರರ ಮೇಲೆ ಇನ್ನೂ ಭಾರಿ ಪರಿಣಾಮ ಬೀರಲಿದೆ.

Also read  Commerce Ministry assures action to help the pepper growers soon