ಕಾಳು ಮೆಣಸು ಇಳುವರಿ ಕುಂಠಿತ :ರಫ್ತು ಇಳಿಮುಖವಾಗುವ ಸಾಧ್ಯತೆ

ಕರ್ನಾಟಕ ಹಾಗೂ ಕೇರಳದಲ್ಲಿ ಈ ವರ್ಷ ಕಾಳು ಮೆಣಸು ಇಳುವರಿ ಕುಂಠಿತವಾಗಿದ್ದು ರಫ್ತು ಇಳಿಮುಖವಾಗುವ ಸಾಧ್ಯತೆ ಇದೆ.  

ಕೇರಳದಲ್ಲಿ ವಾರ್ಷಿಕ ಸರಾಸರಿ 18,000-22,000 ಟನ್‌ ಕಾಳುಮೆಣಸು ಉತ್ಪಾದನೆಯಾಗುತ್ತಿತ್ತು. ಆದರೆ ಈ ವರ್ಷ 7,000 ಟನ್‌ಗೆ ಕುಸಿಯುವ ನಿರೀಕ್ಷೆ ಇದೆ. ಒಟ್ಟಾರೆಯಾಗಿ ದೇಶದಲ್ಲಿ ಕಾಳು ಮೆಣಸಿನ ಉತ್ಪಾದನೆ ಸುಮಾರು 60,000 ಟನ್ನುಗಳಿಗೆ ಇಳಿಯುವ ಸಾಧ್ಯತೆ ಇದೆ. ಪ್ರತಿಕೂಲ ಹವಾಮಾನದ ಪರಿಣಾಮ ಕೇರಳ ಮತ್ತು ಕರ್ನಾಟಕದಲ್ಲಿ ಕಾಳುಮೆಣಸಿನ ಉತ್ಪಾದನೆ ತಗ್ಗಿದೆ.

Also read  ಕಪ್ಪು ಬಂಗಾರ :ಆಮದು ತಂದ ಆತಂಕ

2017-18ರಲ್ಲಿ 16,840 ಟನ್‌ ರಫ್ತಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ ಮತ್ತಷ್ಟು ಇಳಿಕೆಯಾಗುವ ಅಂದಾಜಿದೆ.  ಬೆಳೆಗಾರರು ಕಾಳು ಮೆಣಸನ್ನು ದಾಸ್ತಾನಿಟ್ಟು, ಕ್ರಮೇಣ ದೇಶಿ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ. ಭಾರತ ಪ್ರತಿ ವರ್ಷ 3,000 ಕೋಟಿ ರೂ. ಮೌಲ್ಯದ ಕಾಳುಮೆಣಸನ್ನು ರಫ್ತು ಮಾಡುತ್ತದೆ. ಆದರೆ ದರದಲ್ಲಿ ತೀವ್ರ ಏರಿಳಿತಗಳಾಗುತ್ತಿದೆ. ಇದು ಉತ್ಪಾದಕರು, ರಫ್ತುದಾರರು ಮತ್ತು ಆಮದುದಾರರ ಮೇಲೆಯೂ ಪ್ರಭಾವ ಬೀರುತ್ತಿದೆ.  ಕರ್ನಾಟಕ 2017ರಿಂದೀಚೆಗೆ ದೇಶದಲ್ಲಿ ಅತಿ ಹೆಚ್ಚು ಕಾಳು ಮೆಣಸು ಉತ್ಪಾದಿಸುವ ರಾಜ್ಯವಾಗಿ ಹೊರಹೊಮ್ಮಿದೆ.

Also read  ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧರಣ ಮಳೆ ಸಂಭವ