ಕಾಫಿನಾಡಿನಲ್ಲಿ ಅರಳಿದ ಕಮಲ

ಇಂದು ಪ್ರಕಟವಾದ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಕಾಫಿ ಬೆಳೆಯುವ ಪ್ರದೇಶಗಳ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಜಯಗಳಿಸಿದ್ದಾರೆ.  

ಕಾಫಿ ಖಣಜ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಬಿಜೆಪಿಯ ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಜೀವಿಜಯ ವಿರುದ್ಧ 70,631 ಮತಗಳಿಸಿ ಜಯಗಳಿಸಿದ್ದಾರೆ. 

ಕೊಡಗಿನ ಇನ್ನೊಂದು ಕ್ಷೇತ್ರ ವೀರಾಜಪೇಟೆಯಲ್ಲಿ ಬಿಜೆಪಿಯ ಕೆ ಜಿ ಬೋಪಯ್ಯ ಕಾಂಗ್ರೆಸ್ ನ ಸಿ ಎಸ್ ಅರುಣ್ ಮಾಚಯ್ಯ ವಿರುದ್ಧ 77,944 ಮತಗಳಿಸಿ ಜಯಗಳಿಸಿದ್ದಾರೆ.

ಕಾಫಿನಾ￰ಡು ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯಭೇರಿ

ಕಾಫಿನಾ￰ಡು ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದ್ದು, ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳನ್ನು ತೆಕ್ಕೆಗೆ ಹಾಕಿಕೊಂಡಿದೆ. ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದೆ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸಿ.ಟಿ.ರವಿ ಅವರು ಸತತ ನಾಲ್ಕನೇ ಬಾರಿಗೆ ಗೆಲುವಿನ ನಗೆ ಬೀರಿದ್ದಾರೆ. ತರೀಕೆರೆಯಲ್ಲಿ ಬಿಜೆಪಿಯ ಡಿ.ಎಸ್‌.ಸುರೇಶ್‌, ಕಡೂರಿನಲ್ಲಿ ಬಿಜೆಪಿಯ ಕೆ.ಎಸ್‌.ಪ್ರಕಾಶ್‌ (ಬೆಳ್ಳಿ ಪ್ರಕಾಶ್‌), ಮೂಡಿಗೆರೆ ಮೀಸಲು ಕ್ಷೇತ್ರದಲ್ಲಿ ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಟಿ.ಡಿ.ರಾಜೇಗೌಡ ಅವರು ಅಲ್ಪಮತಗಳ ಅಂತರದಲ್ಲಿ ಜಯ ಗಳಿಸಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್‌ ಖಾತೆಯನ್ನೇ ತೆರೆದಿಲ್ಲ.

ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿಯ ಸಿ.ಟಿ ರವಿ ಕಾಂಗ್ರೆಸ್ ನ ಬಿಎಲ್ ಶಂಕರ್ ವಿರುದ್ಧ 70,863 ಮತಗಳಿಸಿ  ಜಯಗಳಿಸಿದ್ದಾರೆ.

ಮೂಡಿಗೆರ ಕ್ಷೇತ್ರದಲ್ಲಿ  ಬಿಜೆಪಿಯ ಎಂ ಪಿ ಕುಮಾರಸ್ವಾಮಿ ಕಾಂಗ್ರೆಸ್ ನ ಮೋಟಮ್ಮ ವಿರುದ್ಧ 58,783 ಮತಗಳಿಸಿ ಜಯಗಳಿಸಿದ್ದಾರೆ.

ಜಿದ್ಧಾಜಿದ್ಹಿನ ಕಣವಾದ  ಸಕಲೇಶಪುರ

ಹಾಸನ ಜಿಲ್ಲೆಯ ಏಕೈಕ  ಕಾಫಿ ಬೆಳೆಯುವ ಕ್ಷೇತ್ರ ಸಕಲೇಶಪುರದಲ್ಲಿ ಜಿದ್ಧಾಜಿದ್ಹಿನ ಪೈಪೋಟಿಯಲ್ಲಿ  ಬಿಜೆಪಿಯ ಯುವ ಅಭ್ಯರ್ಥಿ ನಾರ್ವೆ ಸೋಮಶೇಖರ ಇಲ್ಲಿನ ಹಾಲಿ ಶಾಸಕ  ಎಚ್ ಕೆ ಕುಮಾರಸ್ವಾಮಿ ವಿರುದ್ಧ  ಪರಾಭವಗೊಂಡಿದ್ಧಾರೆ.

ಕೊನೆ ಸುತ್ತಿನವರೆಗೂ ಮುನ್ನಡೆ ಕಾಯ್ದುಕೊಂಡಿದ್ದ ಬಿಜೆಪಿಯ ಸೋಮಶೇಖರ ಕೊನೆಗೆ 4,942 ಮತಗಳಿಂದ ಸೋಲುಂಡಿದ್ದಾರೆ.

 

Also read  Coffee Prices (Chikmagalur) on 04-01-2019
Read previous post:
Coffee Prices (Karnataka) on 15-05-2018

Todays Coffee and Black-pepper Prices in Karnataka

Close