ಇನ್ನೂ ಮುಂದೆ ಕಾಫೀ ಕುಡಿದು ಓಡಾಡ್ತವಂತೆ ಬಸ್ಸುಗಳು

ಪ್ರತಿಯೊಬ್ಬ ವ್ಯಕ್ತಿಗೆ ಬೆಳಿಗ್ಗೆ ಎದ್ದ ಕೂಡಲೇ ಕಾಫೀ ಅಥವಾ ಟೀ ಬೇಕು,ಇದು ಒಂಥರಾ ದೇಹಕ್ಕೆ ಶಕ್ತಿ ಒದಗಿಸಿ ನಮ್ಮನ್ನ ದಿನವಿಡೀ ಲವಲವಿಕೆಯಿಂದಿರಲು ಸಹಾಯ ಮಾಡುತ್ತದೆ.ಆದ್ರೆ ಎಲ್ಲೊಂದು ಹೊಸ ಸುದ್ದಿ ಪ್ರಕಾರ ಇನ್ನೂ ಬಸ್ಸುಗಳು ಓಡಾಡಲು ಕಾಫೀ ಬೇಕಂತೆ. ಏನಿದು ವಿಚಿತ್ರ ಅಂತ ಯೋಚಿಸ್ತಿಥಿರಾ?, ವಿಷಯ ಏನಂದ್ರೆ ಲಂಡನ್ ನಾ ‘ಬಯೋ-ಬೀನ್’ ಎಂಬ ಜೈವಿಕ ಇಂಧನ ಸಂಶೋಧನಾ ಸಂಸ್ಥೆಯೊಂದು ಕಾಫೀ ತ್ಯಾಜ್ಯದಿಂದ ಜೈವಿಕ ಇಂಧನ ತಯಾರಿಸಬಹುದೆಂದು ತೋರಿಸಿ ಕೊಟ್ಟಿದೆ.

ಲಂಡನ್ನಿನ ಸಾರ್ವಜನಿಕ ಸಾರಿಗೆಗೆ ಸೇರಿದ ಬಸ್ಸುಗಳು ಈ ಕಾಫೀ ತ್ಯಾಜ್ಯ ಇಂಧನವನ್ನು ಬಳಸುತ್ತಿದೆ.


ಬಯೋ-ಬೀನ್ ಸಂಸ್ಥಾಪಕ ಆರ್ಥರ್ ಕೇ ಬಸ್ಸುಗಳಿಗೆ ಬಳಸಬಹುದಾದ ಕಾಫಿ ಎಣ್ಣೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದರು.

“ಯಾವುದೇ ತ್ಯಾಜ್ಯವನ್ನು ನಾವು ಸಂಪನ್ಮೂಲವಾಗಿ ಮಾಡಬಹುದೆಂಬುದರ ಬಗ್ಗೆ ಇದು ಒಂದು ಉತ್ತಮ ಉದಾಹರಣೆಯಾಗಿದೆ ” -ಬಯೋ-ಬೀನ್ ಸಂಸ್ಥಾಪಕ ಆರ್ಥರ್ ಕೇ

ಸಂಸ್ಥೆಯ ಹೇಳಿಕೆಯ ಪ್ರಕಾರ ಈಗಾಗಲೇ ಒಂದು ಬಸ್ಸಿಗೆ ವರ್ಷವಿಡೀ ಸಾಕಾಗುವಷ್ಟು ಕಾಫೀ ಇಂಧನವನ್ನು ತಯಾರಿಸಿದೆ.

‘ಬಯೋ-ಬೀನ್’ ಹೇಳುವಂತೆ ಲಂಡನ್ನ ಪ್ರತಿ ವ್ಯಕ್ತಿಗೆ ದಿನಕ್ಕೆ 2 ರಿಂದ ಮೂರು ಕಪ್ ಕಾಫೀ ಬೇಕಂತೆ, ಅದರ ಪ್ರಕಾರ ವರ್ಷಕ್ಕೆ 500,000 ಟನ್ನಸ್ಟು ಕಾಫೀ ತ್ಯಾಜ್ಯ ಸಿಗುತ್ತದೆ.

Also read  Coffee Prices (Karnataka) on 04-02-2019

ಯಾವುದೇ ತ್ಯಾಜ್ಯವನ್ನು ನಾವು ಸಂಪನ್ಮೂಲವಾಗಿ ಮಾಡಬಹುದೆಂಬುದರ ಬಗ್ಗೆ ಇದು ಒಂದು ಉತ್ತಮ ಉದಾಹರಣೆಯಾಗಿದೆ

ತಯಾರಿಕೆ ಹೇಗೆ ?

ಲಂಡನ್ ನಗರದಲ್ಲಿರಿವ ಕಾಫೀ ಕೆಫೇ,ಹೋಟೆಲ್‌ಗಳು ಮತ್ತು ಫ್ಯಾಕ್ಟರೀಸ್ ಗಳಿಂದ ಸಿಗುವ ಕಾಫೀ ತ್ಯಾಜ್ಯಗಳು ಒಟ್ಟುಗೂಡಿಸಿ ತಂದು ಒಣಗಿಸಿ ನಂತರ ಸಂಸ್ಕರಿಸಿ ಒಂದು ರೀತಿಯ ಕಾಫೀ ಎಣ್ಣೆಯನ್ನು ತೆಗೆಯಲಾಗುತ್ತದೆ.ಈ ಕಾಫೀ ಎಣ್ಣೆಯನ್ನು ಡೀಸಲ್ ಜೊತೆ ಸೇರಿಸಿ ತಯಾರಾಗುವ ‘ಬೀ 20’ ಇಂಧನವನ್ನು ಯಾವುದೇ ಮಾರ್ಪಾಡು ಇಲ್ಲದೆ ಡೀಸಲ್ ಬುಸ್‌ಗಳಿಗೆ ಉಪಯೋಗಿಸಬಹುದು.

ಲಂಡನ್ನ ಸಾರಿಗೆ ಸಂಸ್ಥೆ ವಾಯು ಮಾಲಿನ್ಯವನ್ನು ತಡೆಗಟ್ಟಲು ಈಗಾಗಲೇ ಆನೇಕ ರೀತಿಯ ಜೈವಿಕ ಇಂಧನ ಬಳಕೆ ಮಾಡುತ್ತಿದೆ.

ಈ ಯೋಜನೆ ಅಮೆರಿಕಾಗೆ ವಿಸ್ತರಿಸಲು ದೊಡ್ಡ ಸಾಮರ್ಥ್ಯವಿದೆ ಏಕೆಂದರೆ,ದಿನಕ್ಕೆ 400 ದಶಲಕ್ಷ ಕಪ್ ಅಂದರೆ ಜಗತ್ತಿನಲ್ಲಿ ಹೆಚ್ಚು ಕಾಫಿ ಕುಡಿಯುವ ದೇಶ.

Also read  Severe Cyclone To Hit Tamil Nadu-Andhra Pradesh Coasts In Next 3 Days, Warns IMD