ಬೆಂಗಳೂರು ಕೃಷಿಮೇಳ:ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳಿಗೆ ಆದ್ಯತೆ

ರಾಜಧಾನಿಯಲ್ಲಿ ಇಂದಿನಿಂದ ಆರಂಭವಾಗಲಿರುವ ಕೃಷಿ ಮೇಳ ದಲ್ಲಿ ಅತ್ಯಾಧುನಿಕ ಕೃಷಿ ಯಂತ್ರೋಪಕರಣಗಳ ಪ್ರದರ್ಶನಕ್ಕೆ ಆದ್ಯತೆ ನೀಡಲಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಚ್‌. ಶಿವಣ್ಣ ತಿಳಿಸಿದರು.

ಬುಧವಾರ ಅಂತಿಮ ಹಂತದ ಕೆಲಸ ಪೂರೈಸಿ ಸಿದ್ದಗೊಂಡಿರುವ ಜಿಕೆವಿಕೆಯಲ್ಲಿ ಬೆಳಿಗ್ಗೆ 11ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಮೇಳಕ್ಕೆ ಚಾಲನೆ ನೀಡುವರು.

‘ಯಂತ್ರೋಪಕರಣಗಳ ಬಳಕೆ ಯಿಂದಲೇ ದೇಶದ ಆಹಾರ ಉತ್ಪಾದನೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಸುಲಭವಾಗಿ ಬಳಸಬಹುದಾದ ಯಂತ್ರೋಪಕರಣಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಜೊತೆಗೆ ಸಿರಿಧಾನ್ಯ ಮತ್ತು ಅದರ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ಹಾಗೂ ಸಮಗ್ರ ಕೃಷಿ ಪದ್ಧತಿ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ವಿಚಾರಗಳು ನಮ್ಮ ಆದ್ಯತಾ ಪಟ್ಟಿಯಲ್ಲಿವೆ’ ಎಂದು ಕುಲಪತಿ ಎಚ್‌.ಶಿವಣ್ಣ ತಿಳಿಸಿದರು.

ಮೇಳದಲ್ಲಿ ನೂರಕ್ಕೂ ಹೆಚ್ಚು ಮಳಿಗೆಗಳು ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಹಾಗೂ ಐವತ್ತಕ್ಕೂ ಹೆಚ್ಚು ಮಳಿಗೆಗಳಲ್ಲಿ ಹೈನುಗಾರಿಕೆ,ಕುರಿ,ಮೇಕೆ,ಕೋಳಿ,ಹಂದಿ ಮತ್ತು ಮೊಲದ ವಿವಿಧ ತಳಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಮೀಸಲಿವೆ.

ಕೃಷಿ ಪ್ರದರ್ಶನ ಇಂದಿನಿಂದ ಭಾನುವಾರದವರಿಗೂ ನೆಡೆಯಲಿದೆ.12 ಲಕ್ಷ ಜನರು ಬರುವ ನಿರೀಕ್ಷೆ ಇದೆ.

Also read  ಇಂದಿನಿಂದ ಬೆಂಗಳೂರು ‘ಕೃಷಿ ಮೇಳ’

ವರಧಿ : ಪ್ರಜಾವಾಣಿ

 

Read previous post:
Black pepper prices remained same

Black pepper spot prices on Tuesday remained same due to less activities from buyers and sellers. Spot prices remained at

Close