ArecanutFeatured News

ಸುಧಾರಿತ ಅಡಿಕೆ ತಳಿಗಳು

ಭಾರತೀಯ ಕೃಷಿ ಪದ್ದತಿಯಲ್ಲಿ ಅಡಿಕೆ ಪ್ರಮುಖ ಸ್ಥಾನವನ್ನು ಪಡೆದಿದ್ದು,ಕೇರಳ,ಕರ್ನಾಟಕ, ಪಶ್ಚಿಮ ಬಂಗಾಳ, ಮೇಘಾಲಯ, ಮಹಾರಾಷ್ಟ್ರ ತಮಿಳುನಾಡು ಮತ್ತು ಅಂಡಮಾನ್‌-ನಿಕೋಬಾರ್‌ ದ್ವೀಪ ಸಮುದಾಯಗಳಲ್ಲಿ ವಿಸ್ತರಿಸಿಕೊಂಡಿದೆ.

ದೇಶೀಯ ಮತ್ತು ವಿದೇಶೀಯ ತಳಿಗಳ ಆಯ್ಕೆ ಹಾಗೂ ಮೌಲೀಕರಣದಿಂದಾಗಿ ಅಧಿಕ ಇಳುವರಿಯ ಪರಿಣಾಮಕಾರಿ ಫಲಿತಾಂಶವನ್ನು ಗುರುತಿಸಲಾಗಿದ್ದು ಭಾರತೀಯ ವಿವಿಧ ನೈಸರ್ಗಿಕ ವಾತಾವರಣದಲ್ಲಿ ಅವುಗಳ ಕೃಷಿ ಸಾಧ್ಯತೆಯನ್ನು ದೃಢೀಕರಿಸಲಾಗಿದೆ. ಮಂಗಳ,ಸುಮಂಗಳ,ಶ್ರೀಮಂಗಳ, ಮೋಹಿತ್‌ ನಗರ,ಕ್ಯಾಲಿಕಟ್‌-17 ಮತ್ತು ಎಸ್‌.ಎ.ಎಸ್‌- 1 ಇವುಗಳನ್ನು ಅಭಿವೃದ್ಧಿಗೊಳಿಸಿ ಬಿಡುಗಡೆ ಮಾಡಲಾಗಿದೆ. ಇವುಗಳಲ್ಲದೆ – ದಕ್ಷಿಣ ಕನ್ನಡ ಸ್ಥಳೀಯ, ಸಾಗರ, ತೀರ್ಥಹಳ್ಳಿ , ಹೀರೇಹಳ್ಳಿ ಸ್ಥಳೀಯಗಳು ಆಯಾಯ ಪ್ರಾಂತ್ಯದಲ್ಲಿ ಪ್ರಮುಖ ತಳಿಗಳಾಗಿ ಬಳಕೆಯಲ್ಲಿವೆ.

ಸ್ಥಳೀಯ ತಳಿಗಳು

1. ತೀರ್ಥಹಳ್ಳಿ

ಮುಖ್ಯ ಗುಣ ಲಕ್ಷಣಗಳು:
ಮಲೆನಾಡು ಹಾಗು ಮೈದಾನ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಸ್ಥಳೀಯ ಎತ್ತರದ ತಳಿ, ಬೀಜ ಉದ್ದನೆಯ ಆಕಾರದ ಸಣ್ಣ ಗಾತ್ರವನ್ನು ಹೊಂದಿರುತ್ತದೆ. ಕೆಂಪು ಅಡಿಕೆಗೆ ಸೂಕ್ತ. ಇಳುವರಿಗೆ 6-7 ವರ್ಷಗಳನ್ನು ತೆಗೆದುಕೊಳ್ಳುತ್ತದೆ.ಮೈದಾನ ಪ್ರದೇಶದಲ್ಲಿ ಹಿಡಿಮುಂಡಿಗೆ ರೋಗಕ್ಕೆ ಒಳಗಾಗಬಹುದು.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :2.6 ಕೆಜಿ / ಪಾಮ್

ಶಿಫಾರಸ್ಸು ಮಾಡಲಾದ ಭೂಪ್ರದೇಶ :ಮಲೆನಾಡು ಹಾಗು ಮೈದಾನ ಪ್ರದೇಶಕ್ಕೆ ಸೂಕ್ತವಾಗಿದೆ

2.ದಕ್ಷಿಣ ಕನ್ನಡ

ಮುಖ್ಯ ಗುಣ ಲಕ್ಷಣಗಳು:
ದಕ್ಷಿಣ ಕನ್ನಡ ಹಾಗು ಕಾಸರಗೋಡು ಜಿಲ್ಲೆಗಳ ರೈತರು ಸಂಪ್ರದಾಯ ಬದ್ಧರಾಗಿ ಬೆಳೆಯುತ್ತಿರುವ ತಳಿ ಇದಾಗಿದೆ. ಎತ್ತರ ಹಾಗೂ ಗಟ್ಟಿಯಾದ ಕಾಂಡವನ್ನು ಹೊಂದಿದ್ದು ನಿರಂತರ ಸಮಾನ ಫಲವನ್ನು ನೀಡುತ್ತದೆ. ಭಾಗಶಃ ಬಾಗಿದ ಎಲೆ ಮುಂಡಾಸು ಮತ್ತು ದೊಡ್ಡನೆಂ ಅಡಿಕೆಯನ್ನು ಹೊಂದಿದ್ದು ಸರಾಸರಿ 2.5 ಕಿ.ಗ್ರಾಂ ಚಾಲಿ ಉತ್ಪತ್ತಿಯನ್ನು ಪ್ರತೀವರುಷ ಪ್ರತೀ ಮರಕ್ಕೆ ನೀಡುತ್ತದೆ. (ಹಣ್ಣಡಿಕ 8-10 ಕಿ.ಗ್ರಾಂ). ಮುಖ್ಯವಾಗಿ “ಚಾಲಿ’ ರೂಪ ಕೈೆಂದೇ ಇದು ಪ್ರಸಿದ್ಧ ಹಳೇ ಅಡಿಕೆ ತೋಟಗಳಲ್ಲಿ ಎಡೆಸಸಿಗೂ ಇದು ಹೆಚ್ಚು ಪರಿಣಾಮಕಾರಿ .

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) : 3.67 ಚಾಲಿ
ಶಿಫಾರಸ್ಸು ಮಾಡಲಾದ ಭೂಪ್ರದೇಶ :ಕರ್ನಾಟಕದ ದಕ್ಷಿಣ ಕನ್ನಡ ಹಾಗು ಕಾಸರಗೋಡು
ಬಿಡುಗಡೆ ಗೊಳಿಸಿದ ವರ್ಷ : ಸ್ಥಳೀಯ

3..ಶ್ರೀ ವರ್ಧನ:

ಮುಖ್ಯ ಗುಣ ಲಕ್ಷಣಗಳು:
ಇದು ಮಹಾರಾಷ್ಟ್ರದ ಉತ್ತಮ ಗುಣಮಟ್ಟದ ಸ್ಥಳೀಯ ತಳಿ . ದುಂಡಗೆ ಹಾಗೂ ಮಾಧ್ಯಮ ಗಾತ್ರದ ಬೀಜವನ್ನು ಹೊಂದಿದ್ದು , ಪ್ರತಿ ಮರದಿಂದ 2 ಕೆ.ಜಿ ಇಳುವಳಿಯನ್ನು ನಿರೀಕ್ಷಿಸಬಹದು .

Also read  Monsoon to enter Karnataka by next 3 days

ಸುಧಾರಿತ ತಳಿಗಳು

1.ಮಂಗಳ

ಮುಖ್ಯ ಗುಣ ಲಕ್ಷಣಗಳು:


ಚೀನಾ ಮೂಲದ ಈ ತಳಿ ಉತ್ತಮ ಗುಣಧರ್ಮಗಳಿಂದಾಗಿ ಕೃಷಿಕರ ಗಮನ ಸಳೆದಿದೆ. ಬೇಗನೆ ಹೂ ಬಿಡುವಿಕೆ, ಅಧಿಕ ಹೆಣ್ಣು ಹಿಂಗಾರ ತುಂಬಾ ಹೊಂದಿರುವಿಕೆ,ಅಧಿಕ ಕಾಯಿ ಗಟ್ಟುವಿಕೆ,ಆರಂಭದಿಂದಲೇ ಸಮಗ್ರ ಫಲದಾಯಿತ್ವ ಮತ್ತು ಮರುಪಟ್ಟುತ್ವ , ಹೋಲಿಕೆಯಲ್ಲಿ ದಕ್ಷಿಣ ಕನ್ನಡದಊರು ಮರಗಳಿಗಿಂತ ಚಿಕ್ಕವಾಗಿದ್ದು ಗಮನಾರ್ಹವಾಗಿದೆ. ವಾರ್ಷಿಕ ಇಳುವರಿ ಮರವೊಂದಕ್ಕೆ ಸರಾಸರಿ 11.808. ಗ್ರಾಂ. ಹಣ್ಣಡಿಕೆ (3.00 ಕಿ.ಗ್ರಾಂ. ಚಾಲಿ) ದಾಖಲಾಗಿದೆ. 1972ರಲ್ಲಿ “ಮಂಗಳ’ವೆಂಬ ಹೆಸರಿನಿಂದ, ವಿಟ್ಲ ಸಂಶೋಧನಾ ಕ್ಷೇತ್ರದಿಂದ ರೈತರಿಗಾಗಿ ಬಿಡುಗಡೆ ಮಾಡಲ್ಪಟ್ಟಿದೆ. ಈ ತಳಿ ಕರಾವಳಿ ಕರ್ನಾಟಕ ಹಾಗೂ ಕೇರಳಕ್ಕೆಂದು ಶಿಫಾರಸು ಮಾಡಲಾಗಿದೆ. ಸಮುದ್ರ ಮಟ್ಟಕ್ಕಿಂತ 800 ಮೀ ಎತ್ತರದ ವರೆಗಿನ ಭೂ ಪ್ರದೇಶಗಳಲೆಲ್ಲಾ ಮಂಗಳ ಅಡಿಕೆ ಕೃಷಿ ಕೈಗೊಳ್ಳಬಹುದಾಗಿದೆ.

ಗಾಢ ಹಸರು ವರ್ಣದ , ತುಂಬಿದ ವಿಸ್ತೃತ ಹರವುಳ್ಳ ಸೋಗೆ ಕಿರೀಟವನ್ನು ಮಂಗಳದಲ್ಲಿ ಕಾಣಬಹುದು. ಸೋಗೆಗಳ ತುತ್ತ ತುದಿಯ ಭಾಗದಲ್ಲಿ ಗುಂಗುರು ಮಡಿಕೆಯ ಎಲೆ ಚಿತ್ತಾರವು ಅಲಂಕೃತಗೊಂಡಿರುವುದನ್ನು ಗುರುತಿಸಬಹುದು. ಮಧ್ಯಮ ಎತ್ತರ, ಶೀಘ್ರ ಮತ್ತು ಅಧಿಕ ಇಳುವರಿ (3-4 ವರ್ಷದಲ್ಲಿ ಹೂವು ಬಿಡಲಾರಂಭಿಸುತ್ತದೆ), ಹೆಚ್ಚು ಕಾಯಿ ಕಟ್ಟುವಿಕೆ. ಗಾಢ ಹಸಿರು ವರ್ಣ ತುಂಬಿದ ವಿಸ್ತೃತ ಹರವುಳ್ಳೆ ಸೋಗೆ. ಸೋಗೆಯ ತುತ್ತ ತುದಿಯ ಭಾಗವು ಗುಂಗುರು ಮಡಿಕೆಯಾಗಿರುವುದು, ಹಣ್ಣಡಿಕೆಯು ಕಡು ಹಳದಿ-ಕಿತ್ತಳೆ ವರ್ಣದ್ದಾಗಿದ್ದು,ಮಧ್ಯಮ ಗಾತ್ರ ಮತ್ತು ದುಂಡಾಕಾರದಿಂದ ಉದ್ದನೆಯ ಆಕೃತಿಯನ್ನು ಹೊಂದಿರುತ್ತದೆ.

ಗಿಡನೆಟ್ಟು ಎರಡು ವರ್ಷಗಳೊಳಗೆ ಕಂಡುಬರುವ (ಸಾಮಾನ್ಯವಾಗಿ ಶೇಕಡಾ 2ರಷ್ಟು ಇರುವ) ಸಣಕಲು ಗಿಡಗಳನ್ನು ಕಿತ್ತು ಬೇರೆ ಆರೋಗ್ಯ ಪೂರ್ಣ ಗಿಡವನ್ನು ಪರ್ಯಾಯಗೊಳಿಸಬೇಕು.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) : 3.00 ಚಾಲಿ
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಕರ್ನಾಟಕ ಹಾಗು ಕೇರಳ
ಬಿಡುಗಡೆ ಗೊಳಿಸಿದ ವರ್ಷ : 1972

2.ಸುಮಂಗಳ

ಮುಖ್ಯ ಗುಣ ಲಕ್ಷಣಗಳು:ಸುಮಂಗಲ ಮೂಲ ಇಂಡೋನೇಷಿಯಾ ದೇಶ ವಿದೇಶಗಳ ತಳಿಯೊಂದಿಗೆ ಮೌಲಿಕರಣ ನೆಡಸಲಾಗಿ ಅಭಿವೃದ್ಧಿಗೊಳಿಸಿದ ಈ ತಳಿ ಸ್ಥಳೀಯ

“ದಕ್ಷಿಣ ಕನ್ನಡ’ದ ಅಡಿಕೆಯೊಂದಿಗೆ ಶೇಕಡಾ 64ರಷ್ಟು ಅಧಿಕ ಇಳುವರಿಯನ್ನು ಪ್ರಕಟಪಡಿಸಿದೆ. ಇದರ ಉತ್ತಮ ಗುಣ ಧರ್ಮಗಳನ್ನು ಅನುಸರಿಸಿ ಅಡಿಕೆ ಬೆಳೆವ ಎಲ್ಲಾ ಪ್ರದೇಶಗಳಿಗೆ, ವಿಶೇಷವಾಗಿ ಕರಾವಳಿ ಕರ್ನಾಟಕ ಹಾಗೂ ಕೇರಳಕ್ಕೆಂದು ಶಿಫಾರಸ್ಸು ಮಾಡಿ 1985ರಲ್ಲಿ ಬಿಡುಗಡೆ ಮಾಡಲಾಗಿದೆ. ಸುಮಂಗಳವು. ಎತ್ತರ ಜಾತಿಯ, ಭಾಗಶಃ ಬಾಗಿದ ಎಲೆಗಳ ತಲೆಕಿರೀಟ ಹೊಂದಿದ್ದು. 4-5 ವರ್ಷಕ್ಕೆ ಹೂ ಬಿಡಲಾರಂಭಿಸುತ್ತದೆ. ಅಧಿಕ ಇಳುವರಿಯನ್ನು ತೋರ್ಪಡಿಸಿದೆ. ಹಣ್ಣಡಿಕೆ ಉದ್ದನೆಯ ಆಕೃತಿಯಿಂದ ಉರುಟು ಆಕೃತಿಯವರೆಗೆ ಇದ್ದು ಹಳದಿ-ಕಿತ್ತಳೆ ವರ್ಣಗಳನ್ನು ತೋರಬಲ್ಲುದು.

ವಾರ್ಷಿಕ ಇಳುವರಿ ಮರವೂಂದಕ್ಕೆ ಸರಾಸರಿ 17.25 ಕಿ.ಗ್ರಾಂ ಹಣ್ಣಡಿಕೆ (3.28 ಕಿ.ಗ್ರಾಂ ಚಾಲಿ)ಯನ್ನು ನೀಡಬಲ್ಲುದು. (10 ವರ್ಷಗಳ ಸರಾಸರಿ).

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) : 3.00 ಚಾಲಿ
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಕರ್ನಾಟಕ ಹಾಗು ಕೇರಳ
ಬಿಡುಗಡೆ ಗೊಳಿಸಿದ ವರ್ಷ : 1985

Also read  ಇಂದಿನ (29-11-2021) ಕಾಫಿ,ಮೆಣಸಿನ ಮಾರುಕಟ್ಟೆ ದರ

3 .ಶ್ರೀಮಂಗಳ

ಮುಖ್ಯ ಗುಣ ಲಕ್ಷಣಗಳು:
ಶ್ರೀಮಂಗಳದ ಮೂಲ ಸಿಂಗಾಪುರವಾಗಿದ್ದು ಅದನ್ನು ಅಭಿವೃದ್ಧಿಪಡಿಸಲಾಗಿ ದಕ್ಷಿಣ ಕನ್ನಡ ಸ್ಥಳೀಯ ಅಡಿಕೆಗಿಂತ 59% ಅಧಿಕ ಇಳುವರಿಯನ್ನು ದಾಖಲಿಸಿದೆ.
ಶ್ರೀ ಮಂಗಳವು ಎತ್ತರ ಜಾತಿಯ, ಭಾಗಶಃ ಬಾಗಿದ ಎಲೆಗಳ ಮುಂಡಾಸನ್ನು ಹೊಂದಿದ್ದು ಮರದ ಗಂಟುಗಳ ಅಂತರವು ದೂರದೂರವಾಗಿದೆ.. ಹಣ್ಣಡಿಕೆ ಉದ್ದನೆಯಿಂದ ಉರುಟಾಕೃತಿವರೆಗೆ ಇದ್ದು ಕಡು ಹಳದಿ ವರ್ಣದ್ದಾಗಿರುತ್ತದೆ.

1985ರಲ್ಲಿ ಕರಾವಳಿ ಕರ್ನಾಟಕ ಹಾಗೂ ಕೇರಳಕ್ಕೆಂದು ಶಿಫಾರಸ್ಸು ಮಾಡಿ ಬಿಡುಗಿಡೆ ಮಾಡಲಾಗಿದೆ.4-5 ವರ್ಷಕ್ಕೆ ಹೂ ಬಿಡಲಾರಂಭಿಸುತ್ತದೆ. ಮರವೊಂದಕ್ಕೆ ವಾರ್ಷಿಕ ಇಳುವರಿ ಸರಾಸರಿ 15.63 ಕಿ.ಗ್ರಾಂ. ಹಣ್ಣಡಿಕೆ (3.18 ಕಿ.ಗ್ರಾಂ. ಚಾಲಿ)ಯನ್ನು ನೀಡುತ್ತದೆ.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) : 3.15 ಚಾಲಿ
ಶಿಫಾರಸ್ಸು ಮಾಡಲಾದ ಭೂಪ್ರದೇಶ : ಕರ್ನಾಟಕ ಹಾಗು ಕೇರಳ
ಬಿಡುಗಡೆ ಗೊಳಿಸಿದ ವರ್ಷ : 1985

4.ಮೋಹಿತ್ ನಗರ

ಮುಖ್ಯ ಗುಣ ಲಕ್ಷಣಗಳು:
ಇದು ಸ್ವದೇಶೀ ತಳಿ, ಪಶ್ಚಿಮ ಬಂಗಾಳದ ಮೋಹಿತ್‌ ನಗರದಿಂದ ತಂದು ಅಭಿವೃದ್ಧಿ ಪಡಿಸಲಾಗಿದೆ. ಇದು. ಮಂಗಳದ ಮೇಲೆ 23% ಅಧಿಕ ಹಾಗೂ ದಕ್ಷಿಣ ಕನ್ನಡ ಸ್ಥಳೀಯದ ಮೇಲೆ 84% ಅಧಿಕ ಇಳುವರಿಯನ್ನು ದಾಖಲಿಸಿದೆ. 1991ರಲ್ಲಿ ವೈಜ್ಞಾನಿಕ ಶಿಫಾರಸ್ಸು ಪಡೆದು. ಕರ್ನಾಟಕ್ಕೆ ಕೇರಳ ಹಾಗೂ ಪಶ್ಚಿಮ ಬಂಗಾಳದ ರೈತರಿಗಾಗಿ ಬಿಡುಗಡೆ ಮಾಡಲಾಗಿದೆ.

ಓಂದೇ ಸಮಾನತ್ವ ಗುಣವನ್ನು ಎಲ್ಲಾ ಮರಗಳು ಕಾಯ್ದುಕೊಳ್ಳುವುದು ಇಧರ ವೈಶಿಷ್ಟ್ಯ. ತುಂಬಿದ ಅಡಿಕೆಗೊನೆಗಳು.. ಸಮರ್ಥನೀಯವಾಗಿ ಕಾಣಿಸಿಕೊಂಡು ಸಡಿಲರೂಪದ ಎಸಳುಗಳಲ್ಲಿ ಕಾಯಿಗಟ್ಟಿ ದಷ್ಟ ಪುಷ್ಟ ಬೆಳವಣಿಗೆಯನ್ನು ಸಾಧಿಸುತ್ತದೆ.
ವರುಷವೂ ವ್ಯತ್ಯಾಸವಿಲ್ಲದ ಸಮಾನ ಫಲವಂತಿಕೆಗೆ ಇದು ಸೂಕ್ತವಾಗಿದೆ. ಶೀಘ್ರ ಫಲಕಾರಿ. ಮರವೂಂದಕ್ಕೆ ವಾರ್ಷಿಕ ಸರಾಸರಿ ಇಳುವರಿ 15.08 ಕಿ.ಗ್ರಾಂ ಹಣ್ಣಡಿಕೆ (3.67 ಕಿ.ಗ್ರಾಂ ಚಾಲಿ)ಯನ್ನು ಸಾಧಿಸಿದೆ.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) : 3.67 ಚಾಲಿ
ಶಿಫಾರಸ್ಸು ಮಾಡಲಾದ ಭೂಪ್ರದೇಶ ::ಕರ್ನಾಟಕ ,ಕೇರಳ ಹಾಗೂ ಪಶ್ಚಿಮ ಬಂಗಾಳ
ಬಿಡುಗಡೆ ಗೊಳಿಸಿದ ವರ್ಷ : 1991

Also read  Black Pepper Growers Staged Protest against traders in Bangalore

5.ಹಿರೇಹಳ್ಳಿ  ಸ್ಥಳೀಯ

ಮುಖ್ಯ ಗುಣ ಲಕ್ಷಣಗಳು:
ಇದು ಕರ್ನಾಟಕ ಮೈದಾನ ಪ್ರದೇಶದ ಪ್ರಮುಖ ತಳಿಯಾಗಿದೆ. ಇದನ್ನು ತುಮಕೂರು, ಮಂಡ್ಯ ಮತ್ತು ಬೆಂಗಳೂರು-ಹಾಸನ ಜಿಲ್ಲೆಗಳ ಕೆಲಭಾಗಗಳಲ್ಲಿ ಬೆಳೆಯಲಾಗುತ್ತಿದೆ.ಎತ್ತರ ಜಾತಿಯ ಮರ. ಮಧ್ಯಮ ಗಾತ್ರದ ಕಾಂಡ, ಸೆಟೆದ ಗೊನೆಗಳು ಹಾಗೂ ಉರುಟು ಉದ್ದನ ಆಕೃತಿಯ ಅಡಿಕೆ ರೂಪದಲ್ಲಿರುತ್ತವೆ.
ಸರಾಸರಿ ವಾರ್ಷಿಕ ಇಳುವರಿ ಮರವೊಂದಕ್ಕೆ 3.2ಕಿ.ಗ್ರಾಂ ಚಾಲಿ ಹಾಗೂ ಎಳೆ ಅಡಿಕೆ ಸಂಸ್ಕರಣದಲ್ಲಿ ಬಳಕೆಯಾಗುತ್ತವೆ.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) : 3.32 ಚಾಲಿ
ಶಿಫಾರಸ್ಸು ಮಾಡಲಾದ ಭೂಪ್ರದೇಶ :ತುಮಕೂರು,ಮಂಡ್ಯ ಮತ್ತು ಬೆಂಗಳೂರು,ಹಾಸನ ಜಿಲ್ಲೆ
ಬಿಡುಗಡೆ ಗೊಳಿಸಿದ ವರ್ಷ : ಸ್ಥಳೀಯ

6.ಸಮೃದ್ಧಿ

ಮುಖ್ಯ ಗುಣ ಲಕ್ಷಣಗಳು:
ಎತ್ತರವಾಗಿ ಬೆಳೆಯುವ ಮರ ,ವರುಷವು ವ್ಯತಾಸವಿಲ್ಲದ ಸಮಾನ ಮತ್ತು ಅಧಿಕ ಫಲವಂತಿಕೆ , ಒಂದಕೊಂದು ಕಾಯ್ದುಕೊಂಡ ಗೊನೆಗಳು , ಉರುಟು ಆಕಾರದ ಉತ್ತಮ ಗಾತ್ರದ ಹಣ್ಣಡಿಕೆಯನ್ನು ನೀಡುತ್ತದೆ .

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :4.37
ಶಿಫಾರಸ್ಸು ಮಾಡಲಾದ ಭೂಪ್ರದೇಶ:ಅಂಡಮಾನ್ ಮತ್ತು ನಿಕೋಬಾರ್
ಬಿಡುಗಡೆ ಗೊಳಿಸಿದ ವರ್ಷ :1995

7.ಸ್ವರ್ಣಮಂಗಳ

ಮುಖ್ಯ ಗುಣ ಲಕ್ಷಣಗಳು:
ಎತ್ತರ ಜಾತಿಯ ಅಧಿಕ ಇಳುವರಿ ಕೊಡುವ ತಳಿ, ಮರದ ಗಂಟುಗಳ ಅಂತರವು ತುಲನಾತ್ಮಕವಾಗಿ ಕಡಿಮೆಯಿದ್ದು, ಭಾಗಶಃ ಬಾಗಿದ ಚಂಡೆಯನ್ನು ಹೊಂದಿದೆ. ಹಣ್ಣಡಿಕೆಯು ದೊಡ್ಡದಾಗಿ, ಭಾರವಾಗಿದ್ದು. ಹೆಚ್ಚಿನ ಜಾಲಿ ಇಳುವರಿಯನ್ನು ನೀಡುತ್ತದೆ.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :3.88
ಶಿಫಾರಸ್ಸು ಮಾಡಲಾದ ಭೂಪ್ರದೇಶ::ಕರ್ನಾಟಕ ಹಾಗು ಕೇರಳ
ಬಿಡುಗಡೆ ಗೊಳಿಸಿದ ವರ್ಷ :2006

8. ಕಾಹಿಕುಚಿ

ಮುಖ್ಯ ಗುಣ ಲಕ್ಷಣಗಳು:
ಎತ್ತರವಾಗಿ ಬೆಳೆಯುವ ಮಧ್ಯಮ ದಪ್ಪದ ಕಾಂಡವಿರುವ ಭಾಗಶಃ ಬಾಗಿದ ಎಲೆಯನ್ನು ಹೊಂದಿದ ಚಂಡೆಯಿರುವ ತಳಿ. ಸ್ಥಿರವಾಗಿ ಇಳುವರಿ ನೀಡುತ್ತದೆ. ಕಿತ್ತಳೆ ಬಣ್ಣದ ದೊಡ್ಡ ಗಾತ್ರದ ಮತ್ತು ದುಂಡಾದ ಹಣ್ಣಡಿಕೆಯನ್ನು ಹೊಂದಿದ್ದು 40-45 ವರ್ಷಗಳವರೆಗೂ ಉತ್ತಮ
ಇಳುವರಿ ನೀಡಬಲ್ಲದು.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :3.70
ಶಿಫಾರಸ್ಸು ಮಾಡಲಾದ ಭೂಪ್ರದೇಶ :ಅಸ್ಸಾಂ ಮತ್ತು ಈಶಾನ್ಯ ಭಾರತ
ಬಿಡುಗಡೆ ಗೊಳಿಸಿದ ವರ್ಷ :2009

9. ಮಧುರಮಂಗಳ

ಮುಖ್ಯ ಗುಣ ಲಕ್ಷಣಗಳು:
ಮಧ್ಯಮ ಎತ್ತರ ಬೆಳೆಯುವ ಮಧ್ಯಮ ದಪ್ಪದ ಕಾಂಡವನ್ನು. ಹೊಂದಿರುವ ತಳಿ. ಮರದ ಗಂಟುಗಳ ಅಂತರ ಕಡಿಮೆ, ಭಾಗಶಃ ಬಾಗಿದ ಎಲೆಗಳನ್ನೊಳಗೊಂಡ ಜಂಡೆ, ಸ್ಥಿರ ಇಳುವರಿ, ಕಿತ್ತಳೆ ಬಣ್ಣದ ದೊಡ್ಡ ಗಾತ್ರವಿರುವ ಗೋಲಾಕಾರದ ಹಣ್ಣಡಿಕೆ. 4ನೇ ವರ್ಷದಿಂದ ಇಳುವರಿ ಪ್ರಾರಂಭ . ಎಳೆಕಾಯಿ ಸಂಸ್ಕರಣೆ ಮತ್ತು ಚಾಲಿ ಎರಡುಕ್ಕೂ ಯೋಗ್ಯವಾಗಿದೆ.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :3.54
ಶಿಫಾರಸ್ಸು ಮಾಡಲಾದ ಭೂಪ್ರದೇಶ: ಕರ್ನಾಟಕ ಮತ್ತು ಕೊಂಕಣ್ ಪ್ರದೇಶ
ಬಿಡುಗಡೆ ಗೊಳಿಸಿದ ವರ್ಷ :2013

10.ನಲ್ ಬರಿ

ಮುಖ್ಯ ಗುಣ ಲಕ್ಷಣಗಳು:
ಎತ್ತರವಾಗಿ ಬೆಳೆಯುವ ಮಧ್ಯಮ ಗಾತ್ರದ ಕಾಂಡವನ್ನು ಹೊಂದಿರುವ ತಳಿ. ಮರದ ಗಂಟುಗಳ ಅಂತರ ದೂರವಾಗಿರುವುದು. ಭಾಗಶಃ ಬಾಗಿದ ಎಲೆಗಳಿರುವ ಚಂಡೆ, ಸ್ಥಿರ ಇಳುವರಿ, ಹಳದಿ ಬಣ್ಣದ ಉರುಟಾಗಿರುವ ಹಣ್ಣಡಿಕೆ. ತಾಜಾ ಹಣ್ಣಡಿಕೆಯಿಂದ ಹೆಚ್ಚಿನ
ಪ್ರವಾಾಣದ ಒಣ ಅಡಿಕೆ (ಚಾಲಿ) ದೊರೆಯುತ್ತದೆ.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :4.15
ಶಿಫಾರಸ್ಸು ಮಾಡಲಾದ ಭೂಪ್ರದೇಶ: ಕರ್ನಾಟಕ ,ಉತ್ತರ ಬಂಗಾಲ ಮತ್ತು ಈಶಾನ್ಯ ಭಾರತ
ಬಿಡುಗಡೆ ಗೊಳಿಸಿದ ವರ್ಷ :2013

Also read  Arabica Coffee prices hit one month peak

11.ಶತ ಮಂಗಳ

ಮುಖ್ಯ ಗುಣ ಲಕ್ಷಣಗಳು:
ಈ ತಳಿಯ ಮರಗಳು ಕ್ರಮಬದ್ಧವಾಗಿ ಇಳುವರಿಯನ್ನು ಕೊಡುವುದರ ಜೊತೆಗೆ ಎಳೆಕಾಯಿ (ಕೆಂಪಡಿಕೆ) ಸಂಸ್ಕರಣೆಗೆ ಸೂಕ್ತವಾದ ಉತ್ತಮ ಗುಣಮಟ್ಟದ ಅಡಿಕೆಯನ್ನು ಹೊಂದಿವೆ. ಮರಗಳು ಮಧ್ಯಮ ವಪ್ಪ ಕಾಂಡ, ಕಿರಿದಾದ ಮರದ ಗಂಟುಗಳ ಅಂತರ, ಭಾಗಶಃ
ಜೋತಾಡುವ ಚಂಡೆ ಮತ್ತು ಮಧ್ಯಮ ಎತ್ತರವನ್ನು ಹೊಂದಿರುತ್ತವೆ. ಹಣ್ಣುಗಳು ದುಂಡನೆ ಆಕಾರವನ್ನು ಹೊಂದಿದ್ದು, ಅತಿ ಹೆಜ್ಜು ಅಂದರೆ ಶೇಕಡ 26.8 ರಷ್ಟು ಚಾಲಿ ದೊರೆಯುತ್ತದೆ.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :
ಶಿಫಾರಸ್ಸು ಮಾಡಲಾದ ಭೂಪ್ರದೇಶ:3.98
ಬಿಡುಗಡೆ ಗೊಳಿಸಿದ ವರ್ಷ :2016

Also read  Indian Food Authority will check Vietnam Imported Pepper for contamination

ಕುಬ್ಜ ಸಂಕರಣ ತಳಿಗಳು

1.ವಿಟಿಎಲ್ಎಹೆಚ್ -1

ಮುಖ್ಯ ಗುಣ ಲಕ್ಷಣಗಳು:
ಗಿಡ್ಡವಾಗಿರುವ ಮತ್ತು ಗಟ್ಟಿಮುಟ್ಟಾದ ಕಾಂಡವನ್ನು ಹೊಂದಿರುವ ಸಂಕರಣ ತಳಿ, ಚಿಕ್ಕದಾದ ಮೇಲ್ಮೈ ಮತ್ತು ಭಾಗಶಃ ಬಾಗಿರುವ ಎಲೆಗಳನ್ನು ಹೊಂದಿರುವ ಚಂಡೆ ಮತ್ತು ಉತ್ತಮವಾಗಿ ಹೊರ ಜಾಚಿರುವ ಎಲೆಗಳು.
ಮಧ್ಯಮ ಗಾತ್ರದ ಅಂಡಾಕಾರದಿಂದ ಉರುಟಾದ ಹಳದಿ ಬಣ್ಣದ ಹಣ್ಣಡಿಕೆ, ಸ್ಥಿರ ಇಳುವರಿ ಮತ್ತು ಉತ್ತಮ ಚಾಲಿ ಪ್ರಮಾಣ (26.45%) ಇದರ ವಶಿಷ್ಟ.

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :2.54
ಶಿಫಾರಸ್ಸು ಮಾಡಲಾದ ಭೂಪ್ರದೇಶ:ಕರ್ನಾಟಕ ಹಾಗು ಕೇರಳ
ಬಿಡುಗಡೆ ಗೊಳಿಸಿದ ವರ್ಷ :2006

2.ವಿಟಿಎಲ್ಎಹೆಚ್ -2

ಮುಖ್ಯ ಗುಣ ಲಕ್ಷಣಗಳು:
ಗಿಡ್ಡವಾಗಿ ಮಧ್ಯದ ದಪ್ಪನೆಯ ಕಾಂಡವನ್ನು ಹೊಂದಿರುವ ಕುಬ್ಜ ಸಂಕರಣ ತಳಿ. ಚಿಕ್ಕದಾಗಿರುವ ಮೇಲ್ಮೈ ಮತ್ತು ಭಾಗಶಃ ಬಾಗಿರುವ ಎಲೆಗಳನ್ನು ಹೊಂದಿರುವ ಚಂಡೆ. ಅಂಡಾಕಾರದಿಂದ ದುಂಡಾಗಿರುವ ಹಣ್ಣಡಿಕೆ, ಸ್ಥಿರ ಇಳುವರಿ ಮತ್ತು ಹೆಚ್ಚಿನ ಜಾಲಿ ಉತ್ಪತ್ತಿ ಇದರ ಮುಖ್ಯ ಗುಣ. ಲಕ್ಷಣ,

ಗಿಡವೊಂದಕ್ಕೆ ಸರಾಸರಿ ಚಾಲಿ ಇಳುವರಿ(ಕಿಗ್ರಾಂ) :2.64
ಶಿಫಾರಸ್ಸು ಮಾಡಲಾದ ಭೂಪ್ರದೇಶ:ಕರ್ನಾಟಕ ಹಾಗು ಕೇರಳ
ಬಿಡುಗಡೆ ಗೊಳಿಸಿದ ವರ್ಷ :2006

ಮೇಲೆ ಹೇಳಿದ ಎಲ್ಲಾ ತಳಿಗಳು ಶಿಫಾರಸ್ಸಿಗಿಂತ ಭಿನ್ನವಾದ ಸ್ಥಳಗಳಲ್ಲಿ ವ್ಯತಿರಿಕ್ತ ಫಲಿತಾಂಶಕ್ಕೆ ಕಾರಣವಾಗಬಹುದು. ನೈಸರ್ಗಿಕ ಬದಲಾವಣೆಗಳು ತಳಿಯ ವೈಶಿಷ್ಟ್ಯಗಳನ್ನು ಕಾಯ್ದುಕೊಳ್ಳಲು ಅಸಮರ್ಥವಾಗುತ್ತವೆ. ಆದುದರಿಂದ ರೈತರು ಭೌಗೋಲಿಕ ಹಾಗೂ ಶಿಫಾರಸ್ಸಿನ ಹಿಂದಣ ಸೂಕ್ಷಗಳನ್ನು ಕಾಯ್ದುಕೊಳ್ಳುವುದು ಅವಶ್ಯವಾಗಿದೆ.

Also read  Coffee prices at near 2-1/2 month lows

ಮಾಹಿತಿ ಮತ್ತು ಹೆಚ್ಚಿನ ಮಾಹಿತಿಗಾಗಿ

ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಕೇಂದ್ರ,
ವಿಟ್ಲ-574243,ದಕ್ಷಿಣ ಕನ್ನಡ, ಕರ್ನಾಟಕ ,ದೂರವಾಣಿ: 08255-52222

ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ, ಕಾಸರಗೋಡು -671124,
ಕೇರಳ ,ದೂರವಾಣಿ : 04994-232893/94/95, 232090 ,ಪ್ಯಾಕ್ಸ್‌ : 04994-232322.