ಏರುಗತಿಯಲ್ಲಿ ಅಡಿಕೆ ಧಾರಣೆ

ಈ ವರ್ಷ ಮಳೆಗಾಲದಲ್ಲಿ ನಿರಂತರ ಸುರಿದಮಳೆಯ ಪರಿಣಾಮ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅಡಿಕೆ ಮರಗಳು ರೋಗಗಳಿಗೆ ತುತ್ತಾಗಿದ್ದು ಇಳುವರಿ ಕುಂಠಿತವಾಗಿದೆ. ಮೂರು ವರ್ಷಗಳ ನಂತರ ಧಾರಣೆ ಮತ್ತೆ ಏರುಗತಿಯಲ್ಲಿ ಸಾಗಿದೆ.

ರಾಜ್ಯದಲ್ಲಿ ಪ್ರತಿ ವರ್ಷ 4 ಲಕ್ಷ ಟನ್‌ ಅಡಿಕೆ ಉತ್ಪಾದಿಸಲಾಗುತ್ತಿದೆ. ಪ್ರತಿ ಎಕರೆಗೆ 7 ಕ್ವಿಂಟಲ್‌ನಿಂದ 8 ಕ್ವಿಂಟಲ್‌ವರೆಗೆ ಇಳುವರಿ ಸಿಗುತ್ತಿತ್ತು. ದರ ಏರಿಕೆ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಮಾರಾಟ ಮಾಡದೇ ಮೂರು ವರ್ಷಗಳಿಂದ ಅಡಿಕೆ ಸಂಗ್ರಹಿಸಿ ಇಟ್ಟುಕೊಂಡಿದ್ದರು. ಇದರಿಂದ ವರ್ತಕರು, ಪಾನ್‌ಮಸಾಲ ಕಂಪನಿಗಳ ಬಳಿಯೂ ಸಂಗ್ರಹ ಕುಸಿದಿದೆ. ಇದರ ಪರಿಣಾಮವಾಗಿ ನಿರೀಕ್ಷೆಯಂತೆಯೇ ಅಡಿಕೆ ಧಾರಣೆ ಭಾರಿ ಏರಿಕೆ ಕಾಣುತ್ತಿದೆ.

Also read  ಕಸ್ತೂರಿ ರಂಗನ್ ವರದಿಗೆ ವಿರೋಧ:ಕೊಡಗಿನ ದುರಂತ ಮಾನವ ಗೊತ್ತಿದ್ದು ತಂದುಕೊಂಡ ಅಪಾಯ

ಮೂರು ವರ್ಷಗಳಿಂದ ಧಾರಣೆ ₹ 30 ಸಾವಿರದಿಂದ ₹ 35 ಸಾವಿರದವರೆಗೆ ಇತ್ತು. 2020 ಆರಂಭವಾಗುತ್ತಿದ್ದಂತೆ ಮೊದಲ ದಿನದಿಂದಲೇ ಅಡಿಕೆ ಧಾರಣೆ ಚೇತರಿಕೆಯತ್ತ ಸಾಗಿದೆ.ಜನವರಿ 1ರಂದು ₹ 35,552ಕ್ಕೆ ಏರಿಕೆಯಾಗಿದ್ದ ಧಾರಣೆ ನಂತರದ ದಿನಗಳಲ್ಲಿ ₹ 36,200, ₹ 36,700, ₹ 37,299ಕ್ಕೆ ಜಿಗಿದಿದೆ. 

ನಾಲ್ಕು ವರ್ಷಗಳ ಹಿಂದೆ ಉತ್ತಮ ಧಾರಣೆ ಸಿಕ್ಕರೂ ರೈತರ ಬಳಿ ಆವಕ ಇರಲಿಲ್ಲ. ಮಧ್ಯವರ್ತಿಗಳಿಗೆ ಅಧಿಕ ಲಾಭವಾಗಿತ್ತು. ಬೇಗನೆ ಮಾರಾಟ ಮಾಡಿ ಕೈಸುಟ್ಟುಕೊಂಡ ನಂತರ ಬೆಳೆಗಾರರೂ ಸಂಗ್ರಹಣೆಯತ್ತ  ಗಮನ ಹರಿಸಿದ್ದರು.

Also read  Pepper prices stays steady on matching supply and demand

Source:Prajavaani